'ಕಿಂಗ್' ಯಡಿಯೂರಪ್ಪ, 'ಪಿನ್‌ಗಳು' ನಿಮ್ಮ ಸುತ್ತಲಿನ ಸಚಿವರು: ಬಿಜೆಪಿ ಟ್ವೀಟ್

Recommended Video

      ಎಚ್ ಡಿ ಕುಮಾರಸ್ವಾಮಿಯವರ ಕಿಂಗ್ ಪಿನ್ ಆರೋಪಕ್ಕೆ ಬಿಜೆಪಿ ಖಡಕ್ ಟ್ವೀಟ್ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 15: ಕೆಲವು ಕಿಂಗ್‌ಪಿನ್‌ಗಳು ತಮ್ಮ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಮಾಡುವ ಮೂಲಕ ಮಾಫಿಯಾ ದೊರೆಗಳು ಮತ್ತು ಬಿಜೆಪಿ ನಾಯಕರ ಕಡೆಗೆ ಬೆರಳು ತೋರಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

      ಕುಮಾರಸ್ವಾಮಿ ಹೇಳಿಕೆಗೆ ಟ್ವಿಟ್ಟರ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ನಿಜವಾದ ಕಿಂಗ್ ಮತ್ತು ಪಿನ್‌ಗಳು ಯಾರು ಎಂದು ಟ್ವೀಟ್ ಮಾಡಿದೆ.

      ಮುಖ್ಯಮಂತ್ರಿಯನ್ನು ಹಿಟ್ ಆಂಡ್ ರನ್ ಕುಮಾರಸ್ವಾಮಿ ಎಂದು ಲೇವಡಿ ಮಾಡಿರುವ ಬಿಜೆಪಿ, ಕನ್ನಡಿಗರ ಆಶೀರ್ವಾದ ಮತ್ತು 104 ಸೀಟುಗಳನ್ನು ಹೊಂದಿರುವ ಯಡಿಯೂರಪ್ಪ ನಿಜವಾದ ಕಿಂಗ್.

      BJP karnataka tweet to hd kumaraswamys Kingpins remark

      ಮತ್ತು ನಿಮ್ಮ ಮಾಮೂಲಿ ಸುಳ್ಳು ಆರೋಪಗಳಲ್ಲಿ ಹೇಳಿರುವ ನಿಮ್ಮ ಸುತ್ತಲೇ ಇರುವ ಸಚಿವರೇ 'ಪಿನ್‌ಗಳು' ಎಂದು ಬಿಜೆಪಿ ವ್ಯಂಗ್ಯವಾಡಿದೆ.

      ಮುಖ್ಯಮಂತ್ರಿಯಾಗಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ನಿಮ್ಮ ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕುತ್ತಿದ್ದೇವೆ. ಇಲ್ಲವೇ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲೊಡ್ಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+