ಲೋಕಸಭಾ ಚುನಾವಣೆಗೆ ಕಮಲ-ದಳ ತಯಾರಿ: 25 ಬಿಜೆಪಿ, 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್? ಕ್ಷೇತ್ರಗಳು ಇಲ್ಲಿವೆ
ಬೆಂಗಳೂರು, ಜನವರಿ 18: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆಯಲು ಪ್ರಾರಂಭಿಸಿದೆ. ಶತಾಯಗತಾಯ ರಾಜ್ಯದಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ.
ಹೌದು, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಾಗಿದೆ. ಇನ್ನೂ ಉಳಿದ 25 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಅವರನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ಚರ್ಚೆ ನಡೆಸಿದ್ದಾರೆ.

ಬುಧವಾರ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿರುವ ಕುಮಾರಸ್ವಾಮಿ ಅವರು ಯಾವ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಒಲವಿದೆ, ಜಾತಿ ಲೆಕ್ಕಾಚಾರದ ಕುರಿತು ಚರ್ಚೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಸ್ಪರ್ಧೆ ನಡೆಸಿದರೆ, ಸುರೇಶ್ ಅವರನ್ನ ಸೋಲಿಸಲು ಹಲವು ತಂತ್ರಗಾರಿಕೆಯನ್ನ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಡೆಸಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಅಂತಿಮ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿಗೆ ಜೆಡಿಎಸ್ ಕೇಳಿತ್ತು. ಆದರೆ, ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿರುವ ಬಿಜೆಪಿ ನಾಯಕರು ಮಂಡ್ಯ, ಹಾಸನ, ಕೋಲಾರ ಅಥವಾ ಚಿಕ್ಕಬಳ್ಳಾಪುರ ಕ್ಷೇತ್ರಗಳು ಜೆಡಿಎಸ್‌ಗೆ ಫಿಕ್ಸ್ ಎನ್ನಲಾಗುತ್ತಿದೆ. ಹಾಗಾದರೆ ಯಾವ ಕ್ಷೇತ್ರಗಳು ಬಿಜೆಪಿ, ಯಾವ ಕ್ಷೇತ್ರಗಳು ಜೆಡಿಎಸ್ ಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?
- ಬೆಂಗಳೂರು ಕೇಂದ್ರ
- ತುಮಕೂರು
- ಬೆಂಗಳೂರು ದಕ್ಷಿಣ
- ಬೆಂಗಳೂರು ಉತ್ತರ
- ಬೆಂಗಳೂರು ಗ್ರಾಮಾಂತರ
- ಮೈಸೂರು
- ಚಾಮರಾಜನಗರ
- ಚಿಕ್ಕಮಗಳೂರು
- ದಾವಣಗೆರೆ
- ಶಿವಮೊಗ್ಗ
- ಹಾವೇರಿ
- ಚಿಕ್ಕಬಳ್ಳಾಪುರ
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಹುಬ್ಬಳ್ಳಿ-ಧಾರವಾಡ
- ಚಿತ್ರದುರ್ಗ
- ಬಾಗಲಕೋಟೆ
- ಬಳ್ಳಾರಿ
- ಕೊಪ್ಪಳ
- ವಿಜಯಪುರ
- ಕಲಬುರ್ಗಿ
- ಬೆಳಗಾವಿ
- ಬೀದರ್
- ಚಿಕ್ಕೋಡಿ
- ರಾಯಚೂರು
ಜೆಡಿಎಸ್ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?
- ಹಾಸನ
- ಮಂಡ್ಯ
- ಕೋಲಾರ












Click it and Unblock the Notifications