ಬಿಜೆಪಿ-ಜೆಡಿಎಸ್ ಮೈತ್ರಿ ವಿಧಾನಸಭಾ ಚುನಾವಣೆಗೂ ಅನ್ವಯಿಸುತ್ತದೆಯೇ?: ದೇವೇಗೌಡರು ಹೇಳಿದ್ದೇನು?
ಕೊಪ್ಪಳ, ಸೆಪ್ಟೆಂಬರ್ 27: 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಸಜ್ಜಾಗಿವೆ. ಆದರೆ, 2028 ರ ವಿಧಾನಸಭಾ ಚುನಾವಣೆಗೂ ಮೈತ್ರಿಯಾಗುತ್ತಾ ಎನ್ನುವ ವಿಚಾರವಾಗಿ ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಜಿ ಟಿ ದೇವೇಗೌಡ್ರು ಅಚ್ಚರಿಯಾಗಿ ಉತ್ತರಿಸಿದ್ದಾರೆ.
ಹೌದು, ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕರೆಮ್ಮನವರೇ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿರುತ್ತಾರೆ. ಈ ಬಾರಿ ಅವರಿಗೆ ಮತ ನೀಡಿದವರು ಮುಂದಿನ ಬಾರಿಯೂ ನೀಡುತ್ತಾರೆ ಮತ್ತು ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಈ ಬಾರಿ ಪಡೆದ ವೋಟುಗಳ ಶೇಕಡ 50ರಷ್ಟು ಮಾತ್ರ ಕರೆಮ್ಮನವರಿಗೆ ಸಿಕ್ಕರೂ ಸಾಕು ಅವರು ಗೆಲ್ಲುತ್ತಾರೆ ಎಂದು ಹೇಳಿದರು.

ಈಗಿನ ಹೊಂದಾಣಿಕೆಯು ಲೋಕಸಭಾ ಚುನಾವಣೆಯ ನಂತರವೂ ಮುಂದುವರಿಯಲಿದೆ. ಈಗಿನ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಸಿದ್ದವೆಂದು ಕಾರ್ಯಕರ್ತರು ಹೇಳಿದ್ದಾರೆ. ಮೈತ್ರಿ ವಿಷಯಕ್ಕಾಗಿ ಕರೆದ ಸಭೆಯಲ್ಲಿ ಸಿ ಎಂ ಇಬ್ರಾಹಿಂ ಸಹ ಭಾಗಿಯಾಗಿದ್ದರು. ಈ ಸಭೆಯಲ್ಲಿ ದೇವೇಗೌಡರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ. ನಂತರ ಬೆಳೆವಣಿಗೆ ಗೊತ್ತಿಲ್ಲ ಎಂದರು.
ಅಲ್ಪ ಸಂಖ್ಯಾತರಿಗೆ 4 ಪರ್ಸಂಟೇಜ್ ಮೀಸಲಾತಿ ಹಿಂಪಡೆದಿದ್ದಾಗ ಮಾತನಾಡಿದ್ದು ದೇವೇಗೌಡರು ಮಾತ್ರ. ಅಲ್ಪ ಸಂಖ್ಯಾತರು ನಮ್ಮೊಂದಿಗೆ ಇರುತ್ತಾರೆ. ಈ ಹಿಂದೆ ನಾವು ಕಾಂಗ್ರೆಸ್ಸಿನವರೊಂದಿಗೆ ಹೋದಾಗ ಕೋಮುವಾದ ಇರಲಿಲ್ಲವೇ. ಅಂದು ನಮ್ಮನ್ನು ಕರೆದುಕೊಂಡು ಹೋದಾಗ ಈ ಕೋಮುವಾದ ಬರಲಿಲ್ಲವೇ. ಸಿದ್ದರಾಮಯ್ಯ ಈ ಹಿಂದೆ ಬಿಜೆಪಿಗೆ ಹೋಗಲು ಸಿದ್ದವಾಗಿದ್ದರು ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಅವರು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ನಾವು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ನಾವು ನಮ್ಮ ಸಿದ್ದಾಂತ ಬಿಡೋದಿಲ್ಲ. 4 ಪರ್ಸೆಂಟೇಜ್ ಮೀಸಲಾತಿ ಹಿಂಪಡೆದಿದ್ದನ್ನು ಈಗಿನ ಸರಕಾರ ಮತ್ತೆ ಜಾರಿಗೊಳಿಸಬೇಕಲ್ಲ ಯಾಕೆ ಮಾತನಾಡುತ್ತಿಲ್ಲ. ನಮ್ಮೊಂದಿಗೆ ಅಲ್ಪಸಂಖ್ಯಾತ ಇರುತ್ತಾರೆ. ನಾವು ಹೊಂದಾಣಿಕೆ ಮಾಡಿಕೊಂಡು ಈಗಿನ ಸರಕಾರ ತೆಗೆಯಬೇಕೆನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದರು.
ಇನ್ನೂ ಈ ವೇಳೆ ದೇವದುರ್ಗಾ ಶಾಸಕಿ ಕರಿಯಮ್ಮ ಮಾತನಾಡಿ, ರಾಜ್ಯದ ಸಮಸ್ತ ಮಹಿಳೆಯರು ಜೆಡಿಎಸ್ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿದರು. ಜೆಡಿಎಸ್ ರಾಜ್ಯದಲ್ಲಿ ಸೋತಿರಬಹುದು. ಆದರೆ, ಸತ್ತಿಲ್ಲ. ರಾಜ್ಯದ ಉಳಿವಿಗೆ ಜೆಡಿಎಸ್ ಮುಂದಾಗಿದೆ. ಮಹಿಳೆಯರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ, ಮುಂದಿನ ದಿನದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಮ್ಮ ನಾಯಕರು ತೆಗೆದುಕೊಳ್ಳುವ ಮೈತ್ರಿ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ. ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇರಬಹುದು. ಆದರೆ, ವರಿಷ್ಠರ ನಿರ್ಧಾರಕ್ಕೆ ಬದ್ದವಾಗಿರುತ್ತೇವೆ ಎಂದು ಹೇಳಿದರು.












Click it and Unblock the Notifications