Breaking; ಜೆಡಿಎಸ್‌ನ Mission 123 ಲೆಕ್ಕಾಚಾರ ಬಿಚ್ಚಿಟ್ಟ ಬಿಜೆಪಿ!

ಬೆಂಗಳೂರು, ಮೇ 18; ಜೆಡಿಎಸ್ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಜಲತಾ ಜಲಧಾರೆ ಕಾರ್ಯಕ್ರಮದ ಮೂಲಕ ಚುನಾವಣೆಗೆ ನಾವು ತಯಾರಾಗಿದ್ದೇವೆ ಎಂಬ ಸಂದೇಶ ಕೊಟ್ಟಿದೆ. Mission 123 ಹೆಸರಿನಲ್ಲಿ ಹಲವು ಯೋಜನೆ ರೂಪಿಸಿದೆ.

ಕರ್ನಾಟಕ ಬಿಜೆಪಿ ಬುಧವಾರ ಟ್ವೀಟ್ ಮಾಡಿದ್ದು, ಜೆಡಿಎಸ್ ಪಕ್ಷದ Mission 123 ಲೆಕ್ಕಾಚಾರ ಬಿಚ್ಚಿಟ್ಟಿದೆ. #LuckyDipCmHDK ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡಿ, ಪಕ್ಷದ ವಿರುದ್ಧ ಟೀಕೆ ಮಾಡಿದೆ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಜನ್ಮದಿನದಂದೇ, 'ಜನತಾ ಪರಿವಾರ ಎಂದರೆ ಈಗ ದೇವೇಗೌಡ & ಸನ್ಸ್‌ ಪ್ರೈವೇಟ್ ಲಿಮಿಟೆಡ್‌ ಎಂಬಂತಾಗಿದೆ. ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ. ಕುಮಾರಸ್ವಾಮಿ ಅವರು ಕುಟುಂಬವಾದದ ಬಹುದೊಡ್ಡ ಫಲಾನುಭವಿ' ಎಂದು ವಾಗ್ದಾಳಿ ನಡೆಸಿದೆ.

JDS Party Mission 123

ಬಿಜೆಪಿ ಟ್ವೀಟ್; ಜೆಡಿಎಸ್‌ ಪಕ್ಷ ಹೇಳಿಕೊಳ್ಳುತ್ತಿರುವ ಮಿಶನ್‌ 123 ವಾಸ್ತವದಲ್ಲಿ ಮಿಶನ್‌ 123 ಅಲ್ಲ, ಅದು ಮಿಶನ್ 1+2+3!
1 - ದೇವೇಗೌಡ
2 - ಕುಮಾರ ಸ್ವಾಮಿ, ರೇವಣ್ಣ
3 - ಅನಿತಾ, ಪ್ರಜ್ವಲ್‌, ಸೂರಜ್ ಎಂದು ಬಿಜೆಪಿ ಟ್ವೀಟ್‌ನಲ್ಲಿ ಟೀಕಿಸಿದೆ.

'ನಾಡುನುಡಿ, ಸಾಮಾಜಿಕ ಬದ್ಧತೆ ಎಲ್ಲಾ ನೆಪವಷ್ಟೇ, ಕುಟುಂಬದ ಉದ್ಧಾರವೇ ಅಂತಿಮ ಗುರಿ, ಇದು ಕುಟುಂಬವಾದ ಅಲ್ಲದೆ ಮತ್ತೇನು?. 123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಕುಮಾರ ಸ್ವಾಮಿ ಅವರು ಮೊದಲು, 123 ಕ್ಷೇತ್ರಗಳಿಗೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಗಳು ಲಭ್ಯರಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿ. ಜೆಡಿಎಸ್‌ ಪಕ್ಷದ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ‌ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್‌ ನಾಮಾವಶೇಷವಾಗುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ಹೇಳಿದೆ.

'ಜನತಾ ಪರಿವಾರ ಎಂದರೆ ಈಗ ದೇವೇಗೌಡ & ಸನ್ಸ್‌ ಪ್ರೈವೇಟ್ ಲಿಮಿಟೆಡ್‌ ಎಂಬಂತಾಗಿದೆ. ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ. ಕುಮಾರಸ್ವಾಮಿ ಅವರು ಕುಟುಂಬವಾದದ ಬಹುದೊಡ್ಡ ಫಲಾನುಭವಿ' ಎಂದಿರುವ ಬಿಜೆಪಿ #LuckyDipCmHDK ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+