ಕರ್ನಾಟಕದ ಸಿಎಂ, ಸಚಿವರು, ಶಾಸಕರ ಸಂಬಳ ಭರ್ಜರಿ ಏರಿಕೆ..!

ಬೆಂಗಳೂರು, ಫೆಬ್ರವರಿ 22: ಕರ್ನಾಟಕದ ಶಾಸಕರು ಹಾಗೂ ಸಚಿವರ ಸಂಬಳವನ್ನು ಏರಿಕೆ ಮಾಡಲಾಗಿದೆ.

ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ಇಂದು ಸಚಿವರ ವೇತನ, ಭತ್ಯೆ ಹೆಚ್ಚಳದ ವಿಧೇಯಕ ಅಂಗೀಕಾರ ಮಾಡಲಾಗಿದೆ. ಹಾಗೆಯೇ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ.

ಯಾವುದೇ ಬಿಲ್ ಮಂಡನೆ ಅವಶ್ಯಕತೆ ಇಲ್ಲದೆ ನೇರವಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ ಹೆಚ್ಚಳ ಮಾಡಲಾಗುತ್ತದೆ.

Bill That proposes to Increase Salary of Ministers & MLAs passed in Karnataka Assembly Amidst Protests

Recommended Video

      ಹರ್ಷ ಕೊಲೆ ಪ್ರಕರಣದಲ್ಲಿ KS ಈಶ್ವರಪ್ಪ ಗಂಭೀರ ಆರೋಪ | Oneindia Kannada

      ವಿಧೇಯಕಕ್ಕೆ ಶಾಸಕ ಬಂಡೆಪ್ಪ ಕಾಶಂಪೂರ್ ವಿರೋಧ ವ್ಯಕ್ತಪಡಿಸಿದ್ದಾರೆ. ಗದ್ದಲದ ನಡುವೆಯೇ ಸದನದಲ್ಲಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಇನ್ನು ಮುಂದೆ ಪ್ರತಿ 5 ವರ್ಷಕ್ಕೆ ಸಂಬಳ, ಭತ್ಯೆ ಹೆಚ್ಚಳ ಮಾಡಲಾಗುತ್ತದೆ.ಶಾಸಕರ , ಸಭಾಧ್ಯಕ್ಷರ, ವಿಪಕ್ಷ ನಾಯಕ ಹಾಗೂ ಸಚೇತಕರಿಗೂ ಭತ್ಯೆ ಹೆಚ್ಚಳ:

      ಸಭಾಧ್ಯಕ್ಷರು/ ಉಪಸಭಾಧ್ಯಕ್ಷ:
      ಸಂಬಳ:₹50,000 ದಿಂದ ₹ 75,000
      ಆತಿಥ್ಯ ವೇತನ ವಾರ್ಷಿಕ: ₹3,00,000 ದಿಂದ ₹ 4,00,000
      ಮನೆ ಬಾಡಿಗೆ: ₹80,000 ರಿಂದ ₹1,60,000
      ಇಂಧನ: 1000 ಲೀಟರ್ ರಿಂದ 2000 ಲೀಟರ್
      ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30 ರಿಂದ ₹40
      ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000
      ಹೊರ ರಾಜ್ಯ ಪ್ರವಾಸ: ದಿನಕ್ಕೆ ₹2500 +₹5000 ದಿಂದ ₹3000+₹7000

      ವಿಪಕ್ಷ ನಾಯಕ:
      ಸಂಬಳ:₹40,000 ದಿಂದ ₹ 60,000
      ಆತಿಥ್ಯ ವೇತನ ವಾರ್ಷಿಕ: ₹2,00,000 ದಿಂದ ₹ 2,50,000
      ಇಂಧನ: 1000 ಲೀಟರ್ ರಿಂದ 2000 ಲೀಟರ್
      ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30
      ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000
      ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

      ಶಾಸಕರ ಭತ್ಯೆ:
      ಸಂಬಳ:₹20,000 ದಿಂದ ₹ 40,000
      ಕ್ಷೇತ್ರದ ಭತ್ಯೆ: ₹40,000 ರಿಂದ ₹60000
      ಆತಿಥ್ಯ ವೇತನ (ವಾರ್ಷಿಕ): ₹2,00,000 ದಿಂದ ₹ 2,50,000
      ಇಂಧನ: 1000 ಲೀಟರ್ ರಿಂದ 2000 ಲೀಟರ್
      ಪ್ರಯಾಣ ಬತ್ತೆ: ಪ್ರತಿ ಕಿಲೋಮೀಟರ್ ₹25 ರಿಂದ ₹30
      ದಿನ ಭತ್ಯೆ(ಪ್ರಯಾಣ): ದಿನಕ್ಕೆ ₹2000 ದಿಂದ ₹2500
      ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

      ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ ₹20,000 ಕಾಯ್ದಿರಿಸಲಾಗಿದೆ.
      ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ ₹10,000 ರಿಂದ ₹20,000 ಹೆಚ್ಚಳ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+