ರಾಜ್ಯದಲ್ಲಿ ಎರಡೇ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ ಆಸ್ತಿ ನೋಂದಣಿ

ಬೆಂಗಳೂರು ಜೂ.10: ಕರ್ನಾಟಕ ರಾಜ್ಯ ಆಸ್ತಿ ನೋಂದಣಿಯಲ್ಲಿ ಪ್ರಸ್ತುತ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗಳಿಕೆಯಲ್ಲಿ ಗರಿಷ್ಠ ಮಟ್ಟ ತಲುಪುವ ಮೂಲಕ ದಾಖಲೆ ಬರೆದಿದೆ. ಗೈಡಲೈನ್ಸ್ ಮೌಲ್ಯದ ಮೇಲೆ ಶೇ. 10 ಬಡ್ಡಿ ಕಡಿತಗೊಳಿಸಿದ್ದಲ್ಲದೇ, ಸ್ಟಾಂಪ್‌ ಸುಂಕ ಮತ್ತು ಬಡ್ಡಿ ದರವನ್ನು ಕಡಿಮೆ ಮಾಡಿ ಆದಾಯ ಗಳಿಕೆಯಲ್ಲಿ ವೇಗ ಹೆಚ್ಚಿಸಿಕೊಂಡಿದೆ.

ಆಸ್ತಿ ಮಾರಾಟ ಹಾಗೂ ನೋಂದಣಿ ಎರಡು ಪ್ರಕ್ರಿಯೆಯಲ್ಲಿ ರಾಜ್ಯ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ. ಆಸ್ತಿ ಮಾರಾಟದ ಬೇಡಿಕೆ ಮತ್ತು ಪರಿವರ್ತನೆಯಿಂದಾಗಿ ಕಳೆದ ಹತ್ತು ವರ್ಷದಲ್ಲಿ 2022ರ ಏಪ್ರೀಲ್ ಹಾಗೂ ಮೇ ತಿಂಗಳ ಆದಾಯ ದಾಖಲೆ ಮಟ್ಟದ್ದು ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಈ ಎರಡು ತಿಂಗಳ ಅವಧಿ ಪೈಕಿ ಏಪ್ರೀಲ್ ಒಂದೇ ತಿಂಗಳಿನಲ್ಲಿ 1.8ಲಕ್ಷ ಆಸ್ತಿ ನೊಂದಣಿ ಆಗಿದ್ದರೆ, ಮೇ ನಲ್ಲಿ 1.96ಲಕ್ಷ ಆಸ್ತಿಗಳು ನೋಂದಣಿಯಾಗಿವೆ ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮಾಹಿತಿ ನೀಡಿದೆ.

Big Increase in Revenue by Property Registrations in 2 Months

ಆಸ್ತಿ ನೋಂದಣಿ ಏರಿಕೆ: ಅಧಿಕ ಆದಾಯ ಸಂಗ್ರಹ

ಒಂದು ವರ್ಷದ ಹಿಂದೆ ಆಸ್ತಿ ನೋಂದಣಿಯಲ್ಲಿ ಶೇ.20 ರಷ್ಟು ಏರಿಕೆ ಆಗಿತ್ತು. ಇದೀಗಿ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಶೇ.103ರಷ್ಟು ಏರಿಕೆ ಆಗಿದ್ದರಿಂದ ಆಗ ಇಲಾಖೆ ಖಜಾನೆಗೆ ಒಟ್ಟು ಸುಮಾರು 2405 ಕೋಟಿ ರೂ. ಆದಾಯ ಗಳಿಕೆ ಆಗಿದೆ. ಪ್ರಸ್ತುತ ಜೂನ್‌ ತಿಂಗಳಲ್ಲೂ ಆಸ್ತಿ ನೋಂದಣಿ ಪ್ರಕ್ರಿಯೆ ಏರಿಕೆ ಆಗುವ ಸಂಭವವಿದ್ದು, ಕಳೆದ ಹತ್ತು ಇಲಾಖೆ ಈಗಾಗಲೇ 325 ಕೋಟಿ ರೂ. ಸಂಗ್ರಹಮಾಡಿದೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇನ್ಸಪೆಕ್ಟರ್ ಜನರಲ್ ಬಿ.ಆರ್‌.ಮಮತಾ ಅವರು ರಾಜ್ಯ ಸರ್ಕಾರ ಫ್ಲ್ಯಾಟ್ ಗಳ ಮೇಲಿನ ಮಾರ್ಗದರ್ಶಿ ಮೌಲ್ಯ ಮತ್ತು ಮುದ್ರಾಂಕ ಶುಲ್ಕ ಕಡಿತಗೊಳಿಸದ ನಂತರ ಇಲಾಖೆ ಹೊಸ ಮಾನದಂಡಗಳನ್ನು ಸೃಷ್ಟಿಸಿತು. ಈ ಕಾರಣದಿಂದ ಇಲಾಖೆ ಆಸ್ತಿ ನೋಂದಣಿಯಲ್ಲಿ ಮತ್ತು ಆದಾಯ ಗಳಿಕೆಯಲ್ಲಿ ದಾಖಲೆಯ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.

Big Increase in Revenue by Property Registrations in 2 Months

ಕೊರೊನಾ ಪಿಡುಗು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮನೆ, ಆಸ್ತಿ ಖರೀದಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸ್ತಿ ಮಾರ್ಗದರ್ಶಿ ಮೌಲ್ಯವನ್ನು ರಾಜ್ಯಾದ್ಯಂತ ಜಾರಿಗೆ ಬರುವಂತೆ ಶೇ. 10ರಷ್ಟು ಇಳಿಕೆ ಮಾಡಿ ಆದೇಶ ನೀಡಿತ್ತು. ಈ ಆದೇಶ ಮೊದಲು ಪ್ರಸ್ತುತ ವರ್ಷ ಜನವರಿಯಿಂದ ಮಾರ್ಚವರೆಗೆ ನೀಡಲಾಗಿತ್ತು, ತದನಂತರ ಬೇಡಿಕೆ ಹೆಚ್ಚಾದದ್ದನ್ನು ಕಂಡು ಪುನಃ ವಿಸ್ತರಿಸಲಾಯಿತು. ಸಾಲದೆಂಬಂತೆ 45ರೂ. ಲಕ್ಷವರೆಗಿನ ಫ್ಲ್ಯಾಟ್ ಖರೀದಿಗೆ ಇದ್ದ ಶೇ. 5ರಷ್ಟು ಸ್ಟಾಂಪ್ ಡ್ಯುಟಿ ಶುಲ್ಕವನ್ನು ಶೇ.3ಕ್ಕೆ ಇಳಿಕೆ ಮಾಡಿದೆ. ಅಲ್ಲದೇ ಕೊರೊನೋತ್ತರ ಕಾಲದಲ್ಲಿ ಜನರಲ್ಲಿ ಸ್ವಂತಕ್ಕೆ ಮನೆ ಖರೀದಿಸುತ್ತಿರುವದು ಹೆಚ್ಚಾಗಿದೆ. ಇವೆಲ್ಲ ಕಾರಣಗಳಿಂದ ಎರಡು ತಿಂಗಳಲ್ಲಿ ಆಸ್ತಿ ನೋಂದಣಿ ಪ್ರಮಾಣ ಮತ್ತು ಆದಾಯ ಗಳಿಕೆ ದುಪ್ಪಟ್ಟಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+