ಭಟ್ಕಳದ ಶಂಕಿತರಿಂದ ಬಯಲಾಗುತ್ತಾ ಉಗ್ರರ ಜಾಲ?
ಎರಡು ವಾರಗಳಲ್ಲಿ ಕರ್ನಾಟಕದಲ್ಲಿ ಹರಡಿರುವ ಉಗ್ರ ಜಾಲದ ನಾಲ್ವರು ಸದಸ್ಯರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಇವರೆಲ್ಲ ಭಟ್ಕಳ ಮೂಲದವರು ಹಾಗೂ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರು ಎಂಬುದು ತಿಳಿದುಬಂದಿದೆ. ಆದರೆ, ಅವರು ಎಂತಹ ಜಾಲ ಬೀಸಿದ್ದರು ಎಂಬುದು ಇನ್ನು ಮೇಲಿನ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಅಲ್ಲದೆ, ದಿಲ್‌ಸುಖ್‌ನಗರ ಸ್ಫೋಟ ಹಾಗೂ ಮುಂಬಯಿಯಲ್ಲಿ ನಡೆದ 13/7 ಸ್ಫೋಟದಲ್ಲಿ ಇವರು ಪಾಲ್ಗೊಂಡಿದ್ದರೇ ಎಂಬುದರ ಕುರಿತೂ ತನಿಖೆಯಾಗಬೇಕಿದೆ. [ಬೆಂಗಳೂರಲ್ಲಿ ಮತ್ತಿಬ್ಬರು ಶಂಕಿತರ ವಶ]

ಈ ಪ್ರಕರಣದಲ್ಲೀಗ ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್, ವಕಾಸ್ ಅಹ್ಮದ್, ತಹಸೀನ್ ಅಕ್ತರ್ ಹಾಗೂ ಅಸಾದುಲ್ಲಾ ಅಖ್ತರ್ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ. [ಓರ್ವ ಶಂಕಿತ ಉಗ್ರ ಎಂಬಿಎ ವಿದ್ಯಾರ್ಥಿ]
ಪಾಕಿಸ್ತಾನದಲ್ಲಿರುವ ರಿಯಾಜ್ ಭಟ್ಕಳ್ ಯಾಸಿನ್ ಮೂಲಕ ಈ ಸ್ಫೋಟ ನಡೆಸಿರುವುದು ತನಿಖೆಯಲ್ಲಿ ಇಲ್ಲಿಯವರೆಗೆ ತಿಳಿದುಬಂದಿರುವ ಅಂಶ. ಇದಕ್ಕಾಗಿ ಅವರಿಗೆ ಹವಾಲಾ ಜಾಲದ ಮೂಲಕ ಹಣ ಹರಿದುಬಂದಿತ್ತು. [ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]
ಈ ಸ್ಫೋಟಕ್ಕೆ ಬಾಂಬ್ ಪೂರೈಸಿದ್ದು ರಿಯಾಜ್ ಭಟ್ಕಳ್ ಆಗಿದ್ದರೂ, ಅದನ್ನು ಭಾರತದ ಮಂಗಳೂರಿಗೆ ಸಾಗಿಸಿದ್ದು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈಗ ಪೊಲೀಸರು ಬಂಧಿಸಿರುವ ಐವರ ಮೂಲಕ ಈ ವಿಷಯ ತಿಳಿಯುತ್ತದೆಯೇ ನೋಡಬೇಕು.
ಪೊಲೀಸರ ಪ್ರಕಾರ ಭಟ್ಕಳದಲ್ಲಿದ್ದ ಪ್ರಮುಖ ಜಾಲವೊಂದನ್ನು ಪತ್ತೆಹಚ್ಚಲಾಗಿದೆ. ಅವರು ಹೆಚ್ಚಿನ ಸ್ಫೋಟ ನಡೆಸಲು ಉದ್ದೇಶಿಸಿದ್ದೇ ನಿಜವಾಗಿದ್ದಲ್ಲಿ ಇಂಡಿಯನ್ ಮುಜಾಹಿದೀನ್ ಭಾರತದಲ್ಲಿ ಮತ್ತೆ ಜೀವ ತಳೆಯುವ ಸೂಚನೆ ಕಂಡುಬರುತ್ತಿದೆ. [ಐಎಸ್ಐಎಸ್ ನೇಮಕಾತಿಯ ಕೊಂಡಿ ಸುಲ್ತಾನ್]
ಇವರ ಜಾಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದಂತೆ ಕಾಣುತ್ತಿಲ್ಲ. ಆದ್ದರಿಂದ ಬೆಂಗಳೂರು ಸಿಸಿಬಿ ಪೊಲೀಸರಿಗೆ ದಿಲ್‌ಸುಖ್‌ನಗರ ಸ್ಫೋಟ ತನಿಖೆ ನಡೆಸಿರುವ ಎನ್ಐಎ ಹಾಗೂ ಮುಂಬೈ 13/7 ದಾಳಿಯ ತನಿಖೆಯಲ್ಲಿರುವ ಮಹಾರಾಷ್ಟ್ರ ಎಟಿಎಸ್ ಸಹಕಾರ ಪಡೆಯುವುದು ಅನಿವಾರ್ಯವಾಗಿದೆ.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications