ತವರಿನ ಸುಂದರಿಗೆ ಭದ್ರಾವತಿಯಲ್ಲಿ ಭರ್ಜರಿ ಸ್ವಾಗತ

ಭದ್ರಾವತಿ, ಡಿ. 14: ಪ್ರತಿಷ್ಠಿತ 'ಮಿಸ್ ಸುಪ್ರಾ ಇಂಟರ್ ನ್ಯಾಷನಲ್ -2014ರ' ಮುಕುಟವನ್ನು ಮುಡಿಗೇರಿಸಿಕೊಂಡ ಆಶಾ ಭಟ್ ಅವರಿಗೆ ತವರು ಭದ್ರಾವತಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಭಾನುವಾರ ಭದ್ರಾವತಿಯ ಮಾಧವ ನಗರದ ದಲ್ಲಿ ಆಶಾ ಭಟ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಆಶಾ, ನನಗೆ ತುಂಬಾ ಸಂತೋಷವಾಗುತ್ತಿದೆ. ದೇಶಕ್ಕಾಗಿ ಇನ್ನು ಏನಾದರೂ ಸಾಧನೆ ಮಾಡುವ ಕನಸಿದೆ. ಇಂದು ನಿಜವಾದ ಜನರ ಪ್ರೀತಿ ಗಳಿಸಿದ್ದೇನೆ ಎಂದು ಹೇಳಿದರು.[ಭದ್ರಾವತಿಯ ಆಶಾ ಜಗಮೆಚ್ಚಿದ ಸುಂದರಿ]

ಆಶಾ ಜತೆಗೆ ತಂದೆ ಸುಬ್ರಹ್ಮಣ್ಯ ಭಟ್ ಮತ್ತು ತಾಯಿ ಶ್ಯಾಮಲಾ ಇದ್ದರು. ಶಾಸಕ ಎಂಜೆ ಅಪ್ಪಾಜಿ ಆಶಾ ಭಟ್ ಅವರನ್ನು ಬರಮಾಡಿಕೊಂಡರು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಡೊಳ್ಳು ಮತ್ತು ವಾದ್ಯಗಳ ಜಾನಪದ ಸಂಭ್ರಮವೂ ಕಂಡುಬಂತು. ಸಂಭ್ರಮದ ಕೆಲ ಚಿತ್ರಗಳು...

ಮೆರವಣಿಗೆ

ಮೆರವಣಿಗೆ

ತೆರೆದ ವಾಹನದಲ್ಲಿ ಭದ್ರಾವತಿಯ ಮಾಧವ ನಗರದಲ್ಲಿ 'ಮಿಸ್ ಸುಪ್ರಾ ಇಂಟರ್ ನ್ಯಾಷನಲ್ -2014 ಆಶಾ ಭಟ್ ಮೆರವಣಿಗೆ.

ಜನರತ್ತ ಕೈ ಬೀಸಿದ ಆಶಾ

ಜನರತ್ತ ಕೈ ಬೀಸಿದ ಆಶಾ

ತವರಿನ ಜನರ ಸ್ವಾಗತ ಸ್ವೀಕರಿಸಿದ ಸುಂದರಿ ಆಶಾ ಭಟ್.

ಜನರ ಸಂಭ್ರಮ

ಜನರ ಸಂಭ್ರಮ

ಭದ್ರಾವತಿಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು.

ಸೌಂದರ್ಯ ಸಮರ

ಸೌಂದರ್ಯ ಸಮರ

ಪ್ರತಿಷಷ್ಠಿತ ಮಿಸ್ ಸುಪ್ರಾ ನ್ಯಾಷನಲ್ ಹಣಾಹಣಿಯಲ್ಲಿ ಭಾಗವಹಿಸಿದ್ದ ಆಶಾ.

ಮುಕುಟಕ್ಕೆ ಕಿರೀಟ

ಮುಕುಟಕ್ಕೆ ಕಿರೀಟ

ಡಿಸೆಂಬರ್ 6 ರಂದು ಪೋಲ್ಯಾಂಡ್‌ನ ವಾರ್ಸದಲ್ಲಿ ನಡೆದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದ ಭಾರತದ ಆಶಾ ಭಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+