Bhadra Dam: ಭದ್ರಾ ಡ್ಯಾಂ ಒಳಹರಿವು ಭರ್ಜರಿ ಏರಿಕೆ: ಈಗ ಎಷ್ಟು ಅಡಿ ನೀರು ಇದೆ?

ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗ್ತಿದೆ. ಈ ಕಾರಣಕ್ಕೆ ಮಧ್ಯ ಕರ್ನಾಟಕದ ಜೀವನಾಡಿ ಎಂದು ಕರೆಯಲಾಗುವ ಭದ್ರಾ ಡ್ಯಾಂ ನೀರಿನಲ್ಲಿ ಕೂಡ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಹಾಗಾದ್ರೆ ಇದೀಗ ಎಷ್ಟು ಪ್ರಮಾಣದ ನೀರು ಭದ್ರಾ ಡ್ಯಾಂಗೆ ಬರ್ತಿದೆ? ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಬನ್ನಿ ಮುಂದೆ ತಿಳಿಯೋಣ.

ಮಳೆ ಇಲ್ಲದೆ ಪರದಾಡಿದ್ದ ಕನ್ನಡಿಗರಿಗೆ ಮುಂಗಾರು ಮಳೆ ಉತ್ತಮವಾಗಿ ನೀರು ಕೊಡ್ತಾ ಇದೆ. ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ ಹೀಗಾಗಿ ಎಲ್ಲೆಲ್ಲೂ ಭಾರಿ ಮಳೆ ಬೀಳುತ್ತಿದೆ. ಕರಾವಳಿ & ಮಲೆನಾಡು ಕರ್ನಾಟಕದಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಲ್ಲೂ ನೀರೆ ಕಾಣ್ತಿದೆ. ಹೀಗಾಗಿ ಕನ್ನಡ ನಾಡಿನಲ್ಲಿ ಇರುವ ಡ್ಯಾಂಗಳಿಗೆ ಕೂಡ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದರಲ್ಲೂ ಇದೀಗ ಮಧ್ಯ ಕರ್ನಾಟಕದ ಭದ್ರಾ ಡ್ಯಾಂಗೆ ಒಳಹರಿವು ದಿಢೀರ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.

Bhadra Dam Water Level Is Rising Very Fast After Heavy Rain

ಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟಿದೆ?

ಅಂದಹಾಗೆ ಭದ್ರಾ ನದಿಯ ಉಗಮ ಸ್ಥಾನ ಮಲೆನಾಡು ಭಾಗದಲ್ಲಿ ಇದೀಗ ಭಾರಿ ಮಳೆಯಾಗ್ತಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಭರ್ಜರಿ ಮಳೆ ಬೀಳುತ್ತಿರುವ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ನೀರು ಭದ್ರಾ ನದಿಗೆ ಹರಿದು ಬರುತ್ತಿದೆ. ಹೀಗಾಗಿ ಇದೀಗ ದಿಢೀರ್ ಭದ್ರಾ ನದಿಯ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಭದ್ರಾ ಡ್ಯಾಂಗೆ ಇದೀಗ ಬರೋಬ್ಬರಿ 14,570 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದೇ ಕಾರಣಕ್ಕೆ ಭದ್ರಾ ಜಲಾಶಯದ ನೀರಿನ ಮಟ್ಟ 139.3 ಅಡಿಗೆ ಏರಿಕೆ ಆಗಿದ್ದು, ಮತ್ತಷ್ಟು ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ದಟ್ಟವಾಗಿದೆ.

ಭರ್ಜರಿ ಮಳೆ ಬಗ್ಗೆ ಎಚ್ಚರಿಕೆ!

2023ಕ್ಕೆ ಹೋಲಿಕೆ ಮಾಡಿದರೆ ಭದ್ರಾ ಡ್ಯಾಂನ ಈಗಿನ ಸ್ಥಿತಿ ತುಂಬಾ ಸುಧಾರಿಸಿದೆ. ಯಾಕೆ ಅಂದ್ರೆ 2023 ರಲ್ಲಿ ಇದೇ ಸಮಯಕ್ಕೆ ಭದ್ರಾ ಜಲಾಶಯದ ನೀರಿನ ಮಟ್ಟ 141 ಅಡಿ ಇತ್ತು. ಮಳೆ ಇಲ್ಲದೆ ಬರ ಇದ್ದ ಕಾರಣ ಕೇವಲ 864 ಕ್ಯೂಸೆಕ್‌ ಒಳಹರಿವು ಇತ್ತು. ಆದರೆ ಇದೀಗ 14,570 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಭದ್ರಾ ಅಚ್ಚುಕಟ್ಟಿನ 65 ಸಾವಿರ ಹೆಕ್ಟೇರ್‌ ಪ್ರದೇಶದ ರೈತರಲ್ಲಿ ಖುಷಿಗೆ ಈ ಸುದ್ದಿ ಕಾರಣವಾಗಿದೆ. ಅಲ್ಲದೆ ಮುಂದಿನ 1 ವಾರಗಳ ಕಾಲ ಮಲೆನಾಡು ಭಾಗದಲ್ಲಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿರುವ ಕಾರಣಕ್ಕೆ ಭದ್ರಾ ಡ್ಯಾಂ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+