ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂನಲ್ಲಿ ಇಂಗ್ಲಿಷ್ ಶಾಲೆಗಳ ದೂರು
ನವದೆಹಲಿ, ಜ. 19: ಕರ್ನಾಟಕ ಸರ್ಕಾರ ಖಾಸಗಿ ಶಾಲೆಗಳ ಮೇಲೆ 1994ರ ಭಾಷಾ ನೀತಿಯನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರು ಇಂಗ್ಲಿಷ್ ಶಾಲೆಗಳ ಸಂಘಟನೆಯು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಿದೆ.

ಪ್ರಾಥಮಿಕ ತರಗತಿಯಲ್ಲಿ ಬಲವಂತವಾಗಿ ಮಾತೃ ಭಾಷಾ ಮಾಧ್ಯಮ ಕಡ್ಡಾಯಗೊಳಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. [ಭಾಷಾ ಮಾಧ್ಯಮ ಅನುಮತಿಗೆ ಶಾಲೆಗಳ ಪಟ್ಟು]
ಆದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಅನುಮತಿ ನೀಡಬೇಕೆಂದು ಹಲವು ಶಾಲೆಗಳು ಮನವಿ ಸಲ್ಲಿಸಿದ್ದವು. ಆದರೆ, ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. [ಇಂಗ್ಲಿಷ್ ಕಡತ ವಾಪಸ್]












Click it and Unblock the Notifications