ಸಂಚಾರ ಎಎಸ್ಐಗೆ ಕಲ್ಲೇಟು: ವಿಕಲಚೇತನ ಮಹಿಳೆಗೆ ಬೂಟು ಕಾಲಿನಲ್ಲಿ ಒದ್ದ ಪೊಲೀಸ್ ಅಧಿಕಾರಿ

ಬೆಂಗಳೂರು ಜ. 29: ಟೋಯಿಂಗ್ ವಾಹನದಲ್ಲಿ ಕೂತಿದ್ದ ಎಎಸ್ಐಗೆ ಕಲ್ಲು ಹೊಡೆದ ವಿಕಲಚೇತನ ಮಹಿಳೆಗೆ ನಡು ರಸ್ತೆಯಲ್ಲಿ ಬೂಟು ಕಾಲಲ್ಲಿ ಒದ್ದು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಈ ಘಟನೆ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೂರು ದಿನದ ಹಿಂದೆ ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯ ಟೋಯಿಂಗ್ ವಾಹನದ ಸಿಬ್ಬಂದಿ ಮೇಲೆ ಅಂಗವಿಕಲ ಮಹಿಳೆ ಕಲ್ಲು ಬೀಸಿದ್ದಾಳೆ. ಅದು ಎಎಸ್ಐ ಮುಖಕ್ಕೆ ಬಿದ್ದು ರಕ್ತ ಬಂದಿದೆ. ಟೋಯಿಂಗ್ ವಾಹನದಿಂದ ಕೆಳಗೆ ಇಳಿದು ಬಂದ ಎಎಸ್ಐ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಬೂಟು ಕಾಲಲ್ಲಿ ಒದ್ದಿದ್ದಾರೆ.

ಸಾರ್ವಜನಿಕವಾಗಿ ಸೊಂಟಕದ ಕೆಳಗಿನ ಮಾತು ಆಡಿರುವ ಎಎಸ್ಐ ಆನಂತರ ಪುನಃ ಆ ಮಹಿಳೆಗೆ ಹಲ್ಲೆ ಮಾಡಿದ್ದು, ರಕ್ತ ಬಂದಿದೆ. ಇದಾದ ಬಳಿಕ ಎಎಸ್ಐ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮೂರು ದಿನದ ಹಿಂದೆ ಅಂಗವಿಕಲ ಮಹಿಳೆಯನ್ನೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಆಕೆ ವಿಕಲಚೇತನ ಇರುವದರಿಂದ ಕ್ಷಮಿಸಿ ಬಿಡಿ ಎಂದು ಬಿಬಿಎಂಪಿ ಸಿಬ್ಬಂದಿ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಆದರೂ ಆಕೆಯನ್ನು ಬಿಟ್ಟಿಲ್ಲ.

Bengaluru: Towing Vehicle ASI beat Physically Challenged Woman with His Shoes; Viral Video

ಟೋಯಿಂಗ್ ವಾಹನ ಕಂಡರೆ ಅಗಲ್ಲ

ಈ ಮಹಿಳೆಗೆ ಟೋಯಿಂಗ್ ವಾಹನ ಕಂಡರೆ ಅಗಲ್ಲ. ಹೀಗಾಗಿ ಟೋಯಿಂಗ್ ಮಾಡದಂತೆ ಪ್ರತಿ ನಿತ್ಯವೂ ಟೋಯಿಂಗ್ ವಾಹನದ ಮೇಲೆ ಕಲ್ಲು ಎಸೆಯುತ್ತಿದ್ದಳು. ಆಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮೂರು ದಿನದ ಹಿಂದೆ ಆಕೆ ತೂರಿದ ಕಲ್ಲು ಎಎಸ್ಐ ಮುಖಕ್ಕೆ ಬಿದ್ದಿದೆ. ಇನ್ನು ಸ್ವಲ್ಪ ಮೇಲೆ ಬಿದ್ದಿದ್ದರೆ, ಕಣ್ಣೇ ಕಳೆದುಕೊಳ್ಳತ್ತಿದ್ದರು. ಆ ಸಿಟ್ಟಿನಲ್ಲಿ ಬೂಟು ಕಾಲಿನಲ್ಲಿ ಹೊದ್ದು ಆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ.


ಒಬ್ಬ ವಿಕಲಚೇತನ ಮಹಿಳೆಯನ್ನು ಸಾರ್ವಜನಿಕವಾಗಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಿರುವ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ವಿಕಲಚೇತನ ಮಹಿಳೆ ಮಾಡಿದ ತಪ್ಪನ್ನೇ ಪೊಲೀಸ್ ಅಧಿಕಾರಿ ಮಾಡಬಾರದಿತ್ತು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+