ಬೆಂಗಳೂರು-ಮಣಿಪಾಲ್ ಫ್ಲೈ ಬಸ್ : ದರ, ಮಾರ್ಗದ ವಿವರ
ಬೆಂಗಳೂರು, ಆಗಸ್ಟ್ 20 : ಕೆಎಸ್ಆರ್‌ಟಿಸಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಮಣಿಪಾಲ್ ನಡುವೆ ಫ್ಲೈ ಬಸ್ ಸೇವೆಯನ್ನು ಗುರುವಾರದಿಂದ ಆರಂಭಿಸಲಿದೆ. ಈ ಮಾರ್ಗದ ಪ್ರಯಾಣ ದರ 1,100 ರೂ.ಗಳಾಗಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆ.20ರ ಗುರುವಾರದಿಂದ ಬಸ್ ಸೇವೆ ಆರಂಭವಾಗಲಿದೆ ಎಂದು ಹೇಳಿದೆ. ಮಣಿಪಾಲ್-ಬೆಂಗಳೂರು, ಬೆಂಗಳೂರು-ಮಣಿಪಾಲ್ ನಡುವೆ ಈ ಬಸ್ಸುಗಳು ಸಂಚಾರ ನಡೆಸಲಿವೆ. [ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ]

ಬಸ್ ಮಾರ್ಗ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಡುವ ಬಸ್ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲ್ ತಲುಪಲಿದೆ. ಬಸ್ ಪ್ರಯಾಣದರ 1,100 ರೂ.ಗಳಾಗಿವೆ.[ಟಿಕೆಟ್ ಬುಕ್ ಮಾಡಲು ವಿಳಾಸ]
ಬಸ್ ಸಮಯ : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ರಾತ್ರಿ 10 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 7 ಗಂಟೆಗೆ ಮಣಿಪಾಲ್ ತಲುಪಲಿದೆ. ಮಣಿಪಾಲ್‌ನಿಂದ ರಾತ್ರಿ 9 ಗಂಟೆಗೆ ಹೊರಡುವ ಬಸ್ ಬೆಳಗ್ಗೆ 6 ಗಂಟೆಗೆ ಬೆಂಗಳೂರು ತಲುಪಲಿದೆ.
40 ಪ್ರಯಾಣಿಕರು ಪ್ರಯಾಣಿಸಬಹುದಾದ ಈ ಬಸ್ ವೊಲ್ವೋ ಕಂಪನಿಗೆ ಸೇರಿದ್ದಾಗಿದೆ. ರಾಸಾಯನಿಕ ಶೌಚಾಲಯ, ಅಡುಗೆ ಕೋಣೆ, ಟಿವಿ, ವೈಫೈ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಬಸ್ ಹೊಂದಿದೆ. ವಿಮಾನದ ವೇಳಾಪಟ್ಟಿಯೂ ಬಸ್‌ನಲ್ಲಿ ಲಭ್ಯವಿರುತ್ತದೆ.
ಈಗಾಗಲೇ ಕೆಎಸ್ಆರ್‌ಟಿಸಿ ಮೈಸೂರು ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಫ್ಲೈ ಬಸ್ ಸೇವೆ ಆರಂಭಿಸಿದೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನಲೆಯಲ್ಲಿ ಮಣಿಪಾಲ್‌ಗೆ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.











Click it and Unblock the Notifications