ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆ ಬೆಂಗಳೂರು ಮತ್ತು ಕೇರಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06059 ಜನವರಿ 1, 2023 ರಂದು ಸಂಜೆ 6.05 ಕ್ಕೆ ಕೊಚುವೇಲಿ ಜಂಕ್ಷನ್‌ನಿಂದ ಹೊರಡುತ್ತದೆ ಮತ್ತು ಮರುದಿನ ಬೆಳಿಗ್ಗೆ 9.45ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದು ತಲುಪುತ್ತದೆ. ಇದು ಕೊಲ್ಲಂ, ಕಾಯಂಕುಲಂ, ಮಾವೇಲಿಕಾರ, ಚೆಂಗನ್ನೂರ್, ತಿರುವಲ್ಲಾ, ಚಂಗನಾಸ್ಸೆರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಆಲುವಾ, ತ್ರಿಶೂರ್, ಪಾಲ್ಘಾಟ್, ಕೊಯಮತ್ತೂರು, ತಿರುಪ್ಪೂರ್, ಈರೋಡ್, ಸೇಲಂ, ಕೆಆರ್ ಪುರಂ ಮತ್ತು ಬೆಂಗಳೂರಿನ ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ನಿಲ್ಲುತ್ತದೆ.

ಹಿಂದಿರುಗುವಾಗ ರೈಲು ಸಂಖ್ಯೆ 06060 ಕೆಎಸ್ಆರ್ ಬೆಂಗಳೂರಿನಿಂದ ಜನವರಿ 2, 2023 ರಂದು ಮಧ್ಯಾಹ್ನ 12.05ಕ್ಕೆ ಹೊರಡಲಿದ್ದು, ಅದೇ ದಿನ ರಾತ್ರಿ 11.10ಕ್ಕೆ ಕೇರಳದ ಎರ್ನಾಕುಲಂ ಜೆಎನ್‌ಗೆ ತಲುಪಲಿದೆ. ಇದು ಬೆಂಗಳೂರು ಕಂಟೋನ್ಮೆಂಟ್, ಕೆಆರ್ ಪುರಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲ್ಘಾಟ್, ತ್ರಿಶೂರ್ ಮತ್ತು ಆಲುವಾದಲ್ಲಿ ನಿಲ್ಲುತ್ತದೆ.

ರೈಲು ಸಂಖ್ಯೆ 16520 ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ ಮೆಮು ಎಕ್ಸ್‌ಪ್ರೆಸ್ ಅನ್ನು ಜನವರಿ 3ರಂದು ಮತ್ತು ರೈಲು ಸಂಖ್ಯೆ 16519 ಜೋಲಾರ್‌ಪೇಟೆ- ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ಅನ್ನು ಜನವರಿ 4 ರಂದು ಪಚ್ಚೂರು ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕೆಲಸಕ್ಕಾಗಿ ಲೈನ್ ಮತ್ತು ಪವರ್ ಬ್ಲಾಕ್‌ನಿಂದ ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಇದರೊಂದಿಗೆ ರೈಲು ಸಂಖ್ಯೆ 12683 ಎರ್ನಾಕುಲಂ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 1ರಂದು ಪ್ರಾರಂಭವಾಗಲಿದ್ದು, ಸೇಲಂ, ಓಮಲೂರ್, ಧರ್ಮಪುರಿ, ಹೊಸೂರು ಮತ್ತು ಬೈಯ್ಯಪ್ಪನಹಳ್ಳಿ ಮೂಲಕ ತಿರುಪತ್ತೂರು, ಬಂಗಾರಪೇಟೆ ಮತ್ತು ಕೆಆರ್ ಪುರಂ ಅನ್ನು ಬಿಟ್ಟು ಚಲಿಸುತ್ತದೆ.

ಜನವರಿ 3 ಮತ್ತು 4 ರಂದು ಪ್ರಾರಂಭ

ಜನವರಿ 3 ಮತ್ತು 4 ರಂದು ಪ್ರಾರಂಭ

ಜನವರಿ 3 ಮತ್ತು 4 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಬೆಂಗಳೂರು ಕಂಟೋನ್ಮೆಂಟ್, ಹೊಸೂರು, ಧರ್ಮಪುರಿ, ಓಮಲೂರ್ ಮತ್ತು ಸೇಲಂ ಮೂಲಕ ಕೆಆರ್ ಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರು ಮಾರ್ಗವಾಗಿ ಚಲಿಸುತ್ತದೆ.

ಡಿಸೆಂಬರ್ 31 ರಂದು 2 ಗಂಟೆ

ಡಿಸೆಂಬರ್ 31 ರಂದು 2 ಗಂಟೆ

ರೈಲು ಸಂಖ್ಯೆ 12028 ಕೆಎಸ್‌ಆರ್‌ ಬೆಂಗಳೂರು- ಎಂಜಿಆರ್‌ ಚೆನ್ನೈ ಸೆಂಟ್ರಲ್ ಶತಾಬ್ದಿ ಎಕ್ಸ್‌ಪ್ರೆಸ್ ಡಿಸೆಂಬರ್ 30ರಂದು 90 ನಿಮಿಷಗಳ ತಡವಾಗಿ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 18637 ಹಟಿಯಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 31 ರಂದು 2 ಗಂಟೆ ತಡವಾಗಿ ಪ್ರಾರಂಭವಾಗಲಿದೆ.

ಬೆಂಗಳೂರು- ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

ಬೆಂಗಳೂರು- ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 16021 ಎಂಜಿಆರ್‌ ಚೆನ್ನೈ ಸೆಂಟ್ರಲ್- ಮೈಸೂರು ಎಕ್ಸ್‌ಪ್ರೆಸ್ ಜನವರಿ 1 ರಂದು 90 ನಿಮಿಷಗಳ ತಡವಾಗಿ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 12684 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 3 ರಂದು 180 ನಿಮಿಷಗಳ ತಡವಾಗಿ ಪ್ರಾರಂಭವಾಗಲಿದೆ.

2 ಗಂಟೆ ತಡವಾಗಿ ಪ್ರಾರಂಭ

2 ಗಂಟೆ ತಡವಾಗಿ ಪ್ರಾರಂಭ

ರೈಲು ಸಂಖ್ಯೆ 16219 ಚಾಮರಾಜನಗರ- ತಿರುಪತಿ ಎಕ್ಸ್‌ಪ್ರೆಸ್ ಜನವರಿ 3 ಮತ್ತು 4 ರಂದು 2 ಗಂಟೆ ತಡವಾಗಿ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 00629 ಯಶವಂತಪುರ-ತುಗ್ಲಕಾಬಾದ್ ಪಾರ್ಸೆಲ್ ಎಕ್ಸ್‌ಪ್ರೆಸ್ ಜನವರಿ 3 ರಂದು 180 ನಿಮಿಷಗಳ (3ಗಂಟೆ) ಕಾಲ ತಡವಾಗಿ ಪ್ರಾರಂಭವಾಗಲಿದೆ. ಹೊಸ ವರ್ಷ ಪ್ರಯಾಣಿಕರ ಓಡಾಟ ಜಾಸ್ತಿಯಾಗುತ್ತಿದ್ದು, ರೈಲ್ವೆ ಇಲಾಖೆ ಕೇರಳ, ತಮಿಳುನಾಡು, ಆಂಧ್ರ ತಿರುಪತಿ ಸೇರಿದಂತೆ ಹಲವೆಡೆ ವಿಶೇಷ ರೈಲು ಸೇವೆಗಳನ್ನು ಒದಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+