Flight: ಬೆಂಗಳೂರು-ಕಲಬುರಗಿ ಮಧ್ಯೆ ರಾತ್ರಿ ವಿಮಾನ ಸೇವೆ ಆರಂಭ: ಯಾವಾಗ? ದಿನಾಂಕ, ವೇಳಾಪಟ್ಟಿ? ಮಾಹಿತಿ

ಬೆಂಗಳೂರು, ಫೆಬ್ರವರಿ 16: ಕಲ್ಯಾಣ ಕರ್ನಾಟಕದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಲ್ಲಿ ಕಲಬುರಗಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಇದೇ ತಿಂಗಳು ವಿಮಾನ ಸೇವೆ ಆರಂಭವಾಗಲಿದೆ. ಈ ಮೂಲಕ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕಲಬುರಗಿಯಿಂದ ಬೆಂಗಳೂರಿಗೆ ಇದೇ ಫೆಬ್ರವರಿ 22ರಿಂದ ವಿಮಾನ ಸೇವೆ ಆರಂಭವಾಗಲಿದೆ. ಸದ್ಯಕ್ಕೆ ಇದು ರಾತ್ರಿ ವಿಮಾನ ಸೇವೆ ಒದಗಿಸಲಿದ್ದು, ಮುಂದಿನ ದಿನಗಳಲ್ಲಿ ನಿರಂತರ ಸೇವೆ ವಿಸ್ತರಣೆ ಮಾಡಲಾಗುವುದು ಎಂದು ನದೆಹಲಿಯಲ್ಲಿ ಇದ್ದುಕೊಂಡೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಮಾಹಿತಿ ನೀಡಿದ್ದಾರೆ.

Bengaluru to Kalaburagi Flight Service Begins From February 22nd, Check Schedule, Timings

ಶುಕ್ರವಾರ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಕಾರ್ಯಾಚರಣೆಯು ಫೆಬ್ರವರಿ 22ರಿಂದ ಚಾಲನೆಗೊಳ್ಳಲಿದೆ. ಆರಂಭದಲ್ಲಿ ಇದನ್ನು ಪ್ರತಿ ಗುರುವಾರ ರಾತ್ರಿ ಕಾರ್ಯಾಚರಣೆ ಮಾಡಲು 'ಅಲೈನ್ಸ್ ಏರ್‌ಲೈನ್ಸ್' (Alliance Air) ಒಪ್ಪಿದ್ದು, ಸೇವೆ ನೀಡಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ವಿಮಾನ ಸೇವೆ ಸಮಯ, ಇನ್ನಿತರ ಮಾಹಿತಿ ಮುಂದೆ ತಿಳಿಯೋಣ.

ವಿಮಾನ ಸೇವೆಯ ಸಮಯದ ಮಾಹಿತಿ

ಫೆಬ್ರವರಿ 22ರಿಂದ ಸಂಜೆ 6.45 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 08 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ. ಇದೇ ವಿಮಾನವು ಮತ್ತೆ ಅಲ್ಲಿಂದ (ಕಲಬುರಗಿ) ರಾತ್ರಿ 8.45ಕ್ಕೆ ಪ್ರಯಾಣ ಆರಂಭಿಸಿ ರಾತ್ರಿ 10 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಮಾಹಿತಿ ನೀಡಿದರು. ಈ ಮೂಲಕ ರಾತ್ರಿ ವಿಮಾನ ಸೇವೆಯ ಬೇಡಿಕೆ ಈಡೇರಿಕೆ ಆಗಿದೆ.

ಫೆಬ್ರವರಿ 22ರಿಂದ ಅಲೈನ್ಸ್ ಏರ್‌ಲೈನ್ಸ್ ಪ್ರಾಯೋಗಿಕವಾಗಿ ಪ್ರತಿ ಗುರುವಾರ ರಾತ್ರಿ ವಿಮಾನ ಕಾರ್ಯಾಚರಣೆ ನಡೆಸಲಿದೆ. ಇದರ ಬಳಿಕ ನಂತರದ ದಿನಗಳಲ್ಲಿ ನೋಡಿಕೊಂಡು ಪ್ರತಿ ದಿನ ಇವೆರಡು ಜಿಲ್ಲೆಗಳ ಮಧ್ಯೆ ನಿರಂತರ ವಿಮಾನ ಹಾರಾಟ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

Bengaluru to Kalaburagi Flight Service Begins From February 22nd, Check Schedule, Timings

ಇಂಡಿಗೋದಿಂದ ಸೇವೆ ಶೀಘ್ರ?

ಭಾರತದ ಒಳಗಡೆ ವಿಮಾನ ಸೇವೆ ವಿಸ್ತರಣೆಯ ಭಾಗವಾಗಿ ಈ ನಿರ್ಧಾರ ಪೂರಕವಾಗಲಿದೆ. ಇದಷ್ಟೇ ಅಲ್ಲ ಅತ್ಯುತ್ತಮ ಸೇವೆ ನೀಡಲಿರುವ ಇಂಡಿಗೋ ವಿಮಾನಯಾನ ಸಂಸ್ಥೆ (Indigo Airlines) ಬಳಿಯು ಕಾರ್ಯಾಚರಣೆ ಕುರಿತು ಮಾತುಕತೆ ನಡೆಸಲಾಗಿದೆ. ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ವಿಮಾನ ಹಾರಾಟಕ್ಕೆ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಎಲ್ಲವು ಅಂದುಕೊಂಡಂತೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ ಈ ಸೇವೆ ಆರಂಭಕ್ಕೆ ಸಹಕರಿಸಿದ ಪ್ರಧಾನಿ ಮೋದಿ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸಂಸದರು ಧನ್ಯವಾದ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+