Bangalore to Hubli Trains : ಬೆಂಗಳೂರು-ಹುಬ್ಬಳ್ಳಿ ಸೇರಿ ವಿವಿಧ ಮಾರ್ಗ ರೈಲುಗಳು 10ದಿನ ರದ್ದು, ಪಟ್ಟಿ ಇಲ್ಲಿದೆ.

ಬೆಂಗಳೂರು, ಜನವರಿ 03: ಮಂಗಳವಾರ ಜನವರಿ 03ರಿಂದ 13 ರವರೆಗೆ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಕೆಲವು ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಇನ್ನೂ ಹಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರಲ್ವೆ ವಿಭಾಗ ತಿಳಿಸಿದೆ.

ಕೆಲವು ಕಾರಣಗಳಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗದ ಹಲವು ರೈಲುಗಳನ್ನು ಒಟ್ಟು ಹತ್ತು ದಿನಗಳ ವರೆಗೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಕುರಿತು ಮಾಹಿತಿ, ಯಾವ ದಿನದಂದು ಯಾವ ರೈಲುಗಳು ರದ್ದಾಗಿವೆ ಎಂಬುದರ ಮಾಹಿತಿ ಇಲ್ಲಿ ಪಡೆಯಿರಿ.

ರೈಲ್ವೆ ಸಂಖ್ಯೆ 17347 ಹುಬ್ಬಳ್ಳಿ- ಚಿತ್ರದುರ್ಗ ಎಕ್ಸ್‌ಪ್ರೆಸ್ ಮತ್ತು ಸಂಖ್ಯೆ 17348 ಚಿತ್ರದುರ್ಗ- ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಜನವರಿ 2 ರಿಂದ ಜನವರಿ 5ರವರೆಗೆ ಹಾಗೂ ಜನವರಿ 9 ರಿಂದ 11ರವರೆಗೆ ಸಂಪೂರ್ಣವಾಗಿ ರದ್ದಾಗಲಿದೆ. ಅದೇ ರೀತಿ ಹುಬ್ಬಳ್ಳಿ- ಅರಸೀಕೆರೆ ಎಕ್ಸ್‌ಪ್ರೆಸ್ (ರೈಲು-16214) ಜನವರಿ 1ರಿಂದ ಜನವರಿ 4ರವರೆಗೆ ನಿರಂತರವಾಗಿ ನಾಲ್ಕು ದಿನಗಳು ರದ್ದಾಗಿದೆ. ಜೊತೆಗೆ ಜನವರಿ 8ರಿಂದ ಜನವರಿ 10ವರೆಗೆ ಮೂರು ದಿನಗಳು) ಸಂಪೂರ್ಣವಾಗಿ ರದ್ದಾಗಲಿದೆ ಎಂದು ತಿಳಿಸಿದೆ.

Indian Railways: Bengaluru To Hubballi New Railway Completely Cancelled Till January 13

ಹುಬ್ಬಳ್ಳಿಯಿಂದ ಅರಸೀಕೆರೆ ತೆರಳುವ ಎಕ್ಸ್‌ಪ್ರೆಸ್ (ಸಂಖ್ಯೆ-16214) ರೈಲು ಜನವರಿ 4ರವರೆಗೆ ಮತ್ತು ಜನವರಿ 8ರಿಂದ 10ರವರೆಗೆ 3 ದಿನ ಸಂಪೂರ್ಣವಾಗಿ ರದ್ದಾಗಲಿದೆ. ಅರಸೀಕೆರೆ- ಹುಬ್ಬಳ್ಳಿ ಎಕ್ಸ್‌ಪ್ರೆಸ್ (ಸಂಖ್ಯೆ- 16213) ರೈಲು ಜನವರಿ 5ರವರೆಗೆ ಹಾಗೂ ಜನವರಿ 9ರಿಂದ ಜನವರಿ 11ರವರೆಗೆ ಮೂರು ದಿನ ಸಂಪೂರ್ಣ ಓಡಾಡುವುದಿಲ್ಲ.

ಅರಸೀಕೆರೆಯಿಂದ ಹುಬ್ಬಳ್ಳಿಗೆ

ಅರಸೀಕೆರೆಯಿಂದ ಹುಬ್ಬಳ್ಳಿಗೆ ತೆರಳುವ ಎಕ್ಸ್‌ಪ್ರೆಸ್ (ಸಂಖ್ಯೆ- 16213) ರೈಲು ಗಾಡಿಯು ಜನವರಿ 5ರವರೆಗ ಹಾಗೂ ಜನವರಿ 9ರಿಂದ ಜನವರಿ 11ರವರೆಗೆ ಮೂರು ದಿನ ಸಂಪೂರ್ಣ ರದ್ದು ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯಿಂದ ಕರಾವಳಿಯ ಮಂಗಳೂರಿಗೆ ತೆರಳಲಿರುವ ಎಕ್ಸ್‌ಪ್ರೆಸ್ (ಸಂಖ್ಯೆ- 07377) ರೈಲು ಜನವರಿ 9 ಮತ್ತು 10 ರಂದು ಸಂಚರಿಸದು. ಮಂಗಳೂರು- ವಿಜಯಪುರ ಎಕ್ಸ್‌ಪ್ರೆಸ್ (ಸಂಖ್ಯೆ 07378) ರೈಲು ಜನವರಿ 10 ಮತ್ತು 11 ರಂದು ಓಡಾಡುವುದಿಲ್ಲ ಎಂದು ತಿಳಿದು ಬಂದಿದೆ.

Indian Railways: Bengaluru To Hubballi New Railway Completely Cancelled Till January 13

ವಿಜಯಪುರದಿಂದ ಮಂಗಳೂರಿಗೆ ಹೋಗುವ ಎಕ್ಸ್‌ಪ್ರೆಸ್ (ಸಂಖ್ಯೆ- 07377) ರೈಲು ಜನವರಿ 9 ಮತ್ತು 10 ರಂದು ಹಾಗೂ ಇದೇ ಮಾರ್ಗದ ಮತ್ತೊಂದು ಎಕ್ಸಪ್ರೆಸ್ (ಸಂಖ್ಯೆ- 07378)ರೈಲು ಜನವರಿ 10 ಮತ್ತು 11 ರಂದು ಎರಡು ದಿನಗಳ ಕಾಲ ಸಂಚಾರ ಮಾಡುವುದಿಲ್ಲ. ಹುಬ್ಬಳ್ಳಿ- ವಿಜಯಪುರ ಎಕ್ಸ್‌ಪ್ರೆಸ್ (ಸಂಖ್ಯೆ- 06919) ರೈಲು ಜನವರಿ 9,10 ರಂದು 2 ದಿನ, ಹಾಗೂ ವಿಜಯಪುರ-ಹುಬ್ಬಳ್ಳಿ ಎಕ್ಸ್‌ಪ್ರೆಸ್ (ಸಂಖ್ಯೆ- 06920) ರೈಲು ಜನವರಿ 11 ಮತ್ತು 13ವರೆಗೆ ಮೂರು ದಿನ ಓಡಾಡುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಹುಬ್ಬಳ್ಳಿ-ವಿಜಯಪುರ ಎಕ್ಸ್‌ಪ್ರೆಸ್ (ಸಂಖ್ಯೆ-06919) ರೈಲು ಜನವರಿ 9,10 ರಂದು ಹಾಗೂ ವಿಜಯಪುರ- ಹುಬ್ಬಳ್ಳಿ ಎಕ್ಸ್‌ಪ್ರೆಸ್ (ಸಂಖ್ಯೆ- 06920) ರೈಲು ಜನವರಿ 11ರಿಂದ ಮೂರು ದಿನ ರದ್ದಾಗಿದೆ. ಇದರ ಜೊತೆಗೆ ಹಲವು ರೈಲುಗಳ ಭಾಗಶಃ ರದ್ದುಗೊಳಿಸಲಾಗಿದೆ. ಅದೇ ರೀತಿ ಬೆಂಗಳೂರುನಿಂದ ಹುಬ್ಬಳ್ಳಿಗೆ ಓಡಾಡುವ ಜನಶತಾಬ್ದಿ ಎಕ್ಸ್‌ಪ್ರೆಸ್ (ಸಂಖ್ಯೆ- 12079 ) ಹರಿಹರ ಮತ್ತು ಹುಬ್ಬಳ್ಳಿ ನಡುವೆ ಜನವರಿ 4ರವರೆಗೆ ಮತ್ತು ಜನವರಿ 10, 11ರವರೆಗೆ 2 ದಿನ ಭಾಗಶಃ ರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+