ಹಬ್ಬದ ಪ್ರಯುಕ್ತ ಬೆಂಗಳೂರಿಂದ ವಿಶೇಷ ರೈಲುಗಳು, ಸಂಚಾರ- ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 23: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಸಾಲು ಸಾಲು ರಜೆಗಳು ಬಂದಿವೆ. ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುವ ಉತ್ಸಾಹದಲ್ಲಿದ್ದಾರೆ. ಈ ಸಂದರ್ಭವನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಖಾಸಗಿ ಕಂಪನಿಗಳು ಬಸ್ ದರವನ್ನು ಗಗನಕ್ಕೆ ಏರಿಸಿವೆ. ಇದು ಪ್ರಯಾಣಿಕರ ಸಂಕಷ್ಟವನ್ನು ಹೆಚ್ಚಿಸಿದೆ. ಈ ಸಂಕಷ್ಟವನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಭಾರಿ ಜನದಟ್ಟಣೆಯನ್ನು ಕಡಿಮೆಗೊಳಿಸಲು ಹೆಚ್ಚುವರಿ ಕೋಚ್‌ಗಳನ್ನು ಸೇರಿಸಿದೆ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಶೇಷ ದರದೊಂದಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದ್ದೇವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರಿಮಿಯಂ ದರದ ಹೊರತಾಗಿಯೂ ಗುರುವಾರ ಸಂಜೆ ವೇಳೆಗೆ ಹಲವು ರೈಲುಗಳ ಟಿಕೆಟ್‌ಗಳು ಮಾರಾಟವಾಗಿವೆ. ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಆದ್ದರಿಂದ ವಿಶೇಷ ರೈಲುಗಳು ಓಡಿಸಲು ನಿರ್ಧರಿಸಿದ್ದೇವೆ ಎಂದು ಇಲಾಖೆ ತಿಳಿಸಿದೆ.

ಘೋಷಿಸಲಾದ ವಿಶೇಷ ರೈಲುಗಳು...
06505 ಯಶವಂತಪುರ-ವಾಸ್ಕೋಡಗಾಮಾ ಎಕ್ಸ್‌ಪ್ರೆಸ್
ತೆರಳುವ ದಿನ ಸಮಯ: ಡಿಸೆಂಬರ್ 23 ರಂದು ಸಂಜೆ 6.15 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 9 ಗಂಟೆಗೆ ವಾಸ್ಕೋಡಗಾಮಾವನ್ನು ತಲುಪುತ್ತದೆ. ಇದು ಏಕಮುಖ ಪ್ರಯಾಣವನ್ನು ಹೊಂದಿದೆ.
06211 ಮೈಸೂರು - ಕೊಚುವೇಲಿ ಎಕ್ಸ್‌ಪ್ರೆಸ್
ತೆರಳುವ ದಿನ, ಸಮಯ: ಡಿಸೆಂಬರ್ 23 ಮತ್ತು 25 ರಂದು ರಾತ್ರಿ 11.30 ಕ್ಕೆ ಮೈಸೂರಿನಿಂದ ಹೊರಟು ಮರುದಿನ ರಾತ್ರಿ 7.20 ಕ್ಕೆ ಕೊಚುವೇಲಿಗೆ ಆಗಮಿಸುತ್ತದೆ.
ಹಿಂದಿರುಗುವ ದಿನ, ಸಮಯ: ಡಿಸೆಂಬರ್ 24 ಮತ್ತು 26 ರಂದು ರಾತ್ರಿ 10 ಗಂಟೆಗೆ ಕೊಚುವೇಲಿಯಿಂದ ಹೊರಟು ಮರುದಿನ ಸಂಜೆ 4.45 ಕ್ಕೆ ಮೈಸೂರಿಗೆ ಆಗಮಿಸುತ್ತದೆ
06221 ಮೈಸೂರು - ಕಣ್ಣೂರು ಎಕ್ಸ್‌ಪ್ರೆಸ್
ತೆರಳುವ ದಿನ, ಸಮಯ: ಡಿಸೆಂಬರ್ 30 ಮತ್ತು ಜನವರಿ 1 ರಂದು ಮೈಸೂರಿನಿಂದ ರಾತ್ರಿ 11.30 ಕ್ಕೆ ಹೊರಟು ಮರುದಿನ ಸಂಜೆ 5.15 ಕ್ಕೆ ಕಣ್ಣೂರಿಗೆ ತಲುಪುತ್ತದೆ.
ಹಿಂದಿರುಗುವ ದಿನ, ಸಮಯ: ಡಿಸೆಂಬರ್ 31 ಮತ್ತು ಜನವರಿ 2 ರಂದು ರಾತ್ರಿ 8.55 ಕ್ಕೆ ಕಣ್ಣೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2.30 ಕ್ಕೆ ಮೈಸೂರಿಗೆ ಆಗಮಿಸುತ್ತದೆ.
07687 ನರಸಾಪುರ-ಯಶವಂತಪುರ
ತೆರಳುವ ದಿನ, ಸಮಯ: ಡಿಸೆಂಬರ್ 25 ರಂದು ಮಧ್ಯಾಹ್ನ 3.10 ಕ್ಕೆ ನರಸಾಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.50 ಕ್ಕೆ ಯಶವಂತಪುರವನ್ನು ತಲುಪುತ್ತದೆ. ಇದು ಏಕಮುಖ ರೈಲು ಆಗಿರುತ್ತದೆ.

ಹೆಚ್ಚುವರಿ ಸ್ಲೀಪರ್ ಕೋಚ್‌ಗಳು
ಡಿಸೆಂಬರ್ 22 ಮತ್ತು 31 ರ ನಡುವೆ ಈ ಕೆಳಗಿನ ಪ್ರತಿಯೊಂದು ರೈಲುಗಳಿಗೆ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ಅನ್ನು ಹೆಚ್ಚಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ರೈಲುಗಳು: 17392/17391 ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್‌ಆರ್ ಬೆಂಗಳೂರು- ಎಸ್ಎಸ್ಎಸ್ ಹುಬ್ಬಳ್ಳಿ
12079/12080 ಕೆಎಸ್‌ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್‌ಆರ್ ಬೆಂಗಳೂರು ಜನ ಶತಾಬ್ದಿ
16227/16228 ಮೈಸೂರು-ತಾಳಗುಪ್ಪ-ಮೈಸೂರು
16593/16594 ಕೆಎಸ್‌ಆರ್ ಬೆಂಗಳೂರು - ಹಜೂರ್ ಸಾಹಿಬ್ ನಾಂದೇಡ್- ಕೆಎಸ್‌ಆರ್ ಬೆಂಗಳೂರು
16511/16512 ಕೆಎಸ್‌ಆರ್ ಬೆಂಗಳೂರು - ಕಣ್ಣೂರು-ಕೆಎಸ್‌ಆರ್ ಬೆಂಗಳೂರು
173090/1730 173017 /17318 ಎಸ್ಎಸ್ಎಸ್ ಹುಬ್ಬಳ್ಳಿ - ದಾದರ್-ಎಸ್ಎಸ್ಎಸ್ ಹುಬ್ಬಳ್ಳಿ

ಖಾಸಗಿ ಬಸ್‌ಗಳ ತಪಾಸಣೆ
ಖಾಸಗಿ ಬಸ್‌ಗಳ ಹೆಚ್ಚುವರಿ ದರ ವಸೂಲಿ ಮಾಡುವುದನ್ನು ತಡೆಯಲು ಬುಧವಾರ ರಾತ್ರಿಯಿಂದಲೇ ನಗರದ ಪ್ರಮುಖ ಬಸ್ ಟರ್ಮಿನಲ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಸಾರಿಗೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.
ಈ ವಿಚಾರವಾಗಿ 'ಟೈಮ್ಸ್ ಆಫ್ ಇಂಡಿಯಾ'ಗೆ ಮಾತನಾಡಿರುವ ಅವರು, 'ಬೆಂಗಳೂರು ನಗರ ವಿಭಾಗವೊಂದರಲ್ಲೇ ಇಲಾಖೆ ಅಧಿಕಾರಿಗಳು ಗುರುವಾರ 425 ವಾಹನಗಳನ್ನು ಪರಿಶೀಲಿಸಿದ್ದು, 102 ಬಸ್‌ಗಳಲ್ಲಿ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿರುವುದು ಕಂಡುಬಂದಿದೆ' ಎಂದು ತಿಳಿಸಿದ್ದಾರೆ.

ಖಾಸಗಿ ಬಸ್‌ಗಳ ವಿರುದ್ಧ 102 ಪ್ರಕರಣ
ಸಾರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ ಮಾತನಾಡಿ, 'ಗುರುವಾರ ಖಾಸಗಿ ಬಸ್‌ಗಳ ವಿರುದ್ಧ 102 ಪ್ರಕರಣಗಳನ್ನು ದಾಖಲಿಸಿದ್ದೇವೆ. ಆದರೆ ನಾವು ಯಾವುದೇ ಬಸ್‌ಗಳನ್ನು ವಶಪಡಿಸಿಕೊಂಡಿಲ್ಲ. ಪ್ರಯಾಣಿಕರಿಂದ ದೂರುಗಳು ಬಂದಿವೆ. ಆ ನಂತರ ನಾವು ದಾಳಿಯನ್ನು ಪ್ರಾರಂಭಿಸಿದ್ದೇವೆ' ಎಂದು ಹೇಳಿದ್ದಾರೆ.












Click it and Unblock the Notifications