ಸರಣಿ ರಜೆ : ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ ಬಸ್

ಬೆಂಗಳೂರು, ಮಾ. 31 : ಮಹಾವೀರ ಜಯಂತಿ, ಗುಡ್ ಫ್ರೈಡೆ ಸೇರಿದಂತೆ ಏ.2ರಿಂದ ಸರ್ಕಾರಿ ರಜೆಗಳು ಇರುವುದಿಂದ ಕೆಎಸ್ಆರ್‌ಟಿಸಿ ಬೆಂಗಳೂರಿನಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಏ.1ರಿಂದ 4 ತನಕ ಈ ಬಸ್ಸುಗಳು ಸಂಚಾರ ನಡೆಸಲಿವೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಸ್ಥಳದ ಕೊರತೆ ಇರುವ ಕಾರಣ ನಗರದ ವಿವಿಧ ಪಿಕ್‌ಅಪ್ ಪಾಯಿಂಟ್‌ಗಳಿಂದ ಈ ಬಸ್ಸುಗಳು ಸಂಚಾರ ನಡೆಸಲಿವೆ. ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಈ ಬಸ್ಸುಗಳಲ್ಲಿ ಸಂಚರಿಸಬಹುದು. [2015ರ ರಜೆ ಪಟ್ಟಿ]

KSRTC

ಈ ಹೆಚ್ಚುವರಿ ಬಸ್ಸುಗಳು ಮೈಸೂರು ರಸ್ತೆ ಬಸ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್‌, ಜಯನಗರ 4ನೇ ಬ್ಲಾಕ್‌ ಮುಂತಾದ ಸ್ಥಳಗಳಿಂದ ಸಂಚಾರ ನಡೆಸಲಿವೆ. [ಟಿಕೆಟ್ ಬುಕ್ ಮಾಡಲು ವೆಬ್ ಸೈಟ್]

ಸಾಲು-ಸಾಲು ರಜೆ : ಏ.2 ರಿಂದ 4 ತನಕ ಸರಣಿ ರಜೆಗಳು ಇರುವುದರಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಕೆಎಸ್ಆರ್‌ಟಿಸಿ ಮಾಡಿದೆ. ರಜೆಪಟ್ಟಿ ಇಲ್ಲಿದೆ [ಏ.1ರಿಂದ ಬ್ಯಾಂಕ್ ಗೆ ಮೂರು ದಿನ ರಜೆ]

ಏ.2 - ಮಹಾವೀರ ಜಯಂತಿ ( ಗುರುವಾರ)
ಏ.3 - ಗುಡ್ ಫ್ರೈಡೆ (ಶುಕ್ರವಾರ)
ಏ.4 - ಶನಿವಾರ (ರಜೆ ಹಾಕಿದರೆ)
ಏ.5 - ಭಾನುವಾರದ ರಜೆ ಸಿಗಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+