ಮಾರ್ಚ್ 22ರ ತನಕ ಬೆಂಗಳೂರು-ಹುಬ್ಬಳ್ಳಿ ರೈಲು ಸೇವೆ ವ್ಯತ್ಯಯ, ವಿವರ
ರೈಲು ಪ್ರಯಾಣಿಕರ ಗಮನಕ್ಕೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 22ರ ತನಕ ರೈಲು ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 10; ರೈಲು ಪ್ರಯಾಣಿಕರ ಗಮನಕ್ಕೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 22ರ ತನಕ ರೈಲು ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ರೈಲು ಸೇವೆಗಳನ್ನು ಭಾಗಶಃ ರದ್ದು, ರದ್ದು, ಮಾರ್ಗ ಬದಲಾವಣೆ ಮಾಡಿ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಸುಮಾರು 20 ರೈಲುಗಳಿಗೆ ಇದು ಅನ್ವಯವಾಗುತ್ತದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದ ಕಡೆ ಸಂಚಾರ ನಡೆಸುವವರು ಈ ಬದಲಾವಣೆ ಬಗ್ಗೆ ತಿಳಿದಿರುವುದು ಉತ್ತಮ.

ರೈಲು ನಂಬರ್ 16214 ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 10 ರಿಂದ 21ರ ತನಕ ರದ್ದುಗೊಳಿಸಲಾಗಿದೆ. ರೈಲು ನಂಬರ್ 16213 ಅರಸೀಕೆರೆ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 22ರ ತನಕ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 12079 ಬೆಂಗಳೂರು-ಹುಬ್ಬಳ್ಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಮಾರ್ಚ್ 11 ರಿಂದ 21ರ ತನಕ ಹುಬ್ಬಳ್ಳಿ, ರಾಣೆಬೆನ್ನೂರು ನಡುವೆ ಭಾಗಶಃ ರದ್ದು. ರೈಲು ಸಂಖ್ಯೆ 12080 ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ-ರಾಣೆಬೆನ್ನೂರು ನಡುವೆ 11 ಮಾರ್ಚ್‌ನಿಂದ 21 ಮಾರ್ಚ್ ತನಕ ಭಾಗಶಃ ರದ್ದು.
ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಬೀರೂರು ಬೆಳಗಾವಿ ನಡುವೆ ಮಾರ್ಚ್ 11 ರಿಂದ 21ರ ತನಕ ಭಾಗಶಃ ರದ್ದು. ರೈಲು ನಂಬರ್ 17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು 11 ಮಾರ್ಚ್‌ನಿಂದ 21ರ ತನಕ ಬೀರೂರು, ಬೆಳಗಾವಿ ನಡುವೆ ಭಾಗಶಃ ರದ್ದು.

ರೈಲು ನಂಬರ್ 12778 ಕೊಚ್ಚುವೇಲಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರಾಣೆಬೆನ್ನೂರು-ಹುಬ್ಬಳ್ಳಿ ನಡುವೆ ಮಾರ್ಚ್ 16ರಂದು ಭಾಗಶಃ ರದ್ದು. ಖಾಲಿ ಬೋಗಿಗಳನ್ನು ತಕ್ಷಣ ಹುಬ್ಬಳ್ಳಿಗೆ ಸಾಗಿಸಲಾಗುತ್ತದೆ.
ರೈಲುಗಳ ಮಾರ್ಗ ಬದಲಾವಣೆ; ರೈಲು ಸಂಖ್ಯೆ 11005 ದಾದರ್-ಪುದುಚೇರಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಮಾರ್ಚ್ 10, 12, 13ರಂದು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮೂಲಕ ಬದಲಿಸಲಾಗಿದೆ. ಮಾರ್ಚ್ 17ರಂದು ಹುಬ್ಬಳ್ಳಿ-ಹರಿಹರ ನಡುವಿನ ನಿಲ್ದಾಣ ಇರುವುದಿಲ್ಲ.
ರೈಲು ನಂಬರ್ 20656 ಹುಬ್ಭಳ್ಳಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮೂಲಕ ಮಾರ್ಚ್ 11ರಂದು ಸಾಗಲಿದೆ. ಹುಬ್ಬಳ್ಳಿ-ಹರಿಹರ ನಡುವಿನ ನಿಲ್ದಾಣ ಇರುವುದಿಲ್ಲ.
ರೈಲು ಸಂಖ್ಯೆ 11021 ದಾದರ್-ತಿರುನಲ್ವೇಲಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗರೆ ಮೂಲಕ ಮಾರ್ಚ್ 11, 14, 15 ಮತ್ತು 21ರಂದು ಸಾಗಲಿದೆ. ಹುಬ್ಬಳ್ಳಿ-ಹರಿಹರ ನಿಲ್ದಾಣ ಇರುವುದಿಲ್ಲ.
ಪುದುಚೇರಿ-ದಾದರ್ ನಡುವಿನ ರೈಲು ಸಂಖ್ಯೆ 11006 ರೈಲು ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ, ಹುಬ್ಬಳ್ಳಿ ಮಾರ್ಗವಾಗಿ ಮಾರ್ಚ್ 15ರಂದು ಸಾಗಲಿದೆ. ಹರಿಹರ-ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚಾರವಿಲ್ಲ.
ದಾದರ್-ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 11035 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮೂಲಕ ಮಾರ್ಚ್ 16ರಂದು ಸಂಚಾರ ನಡೆಸಲಿದೆ.
ರೈಲು ನಂಬರ್ 17392 ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗರೆ ಮಾರ್ಗವಾಗಿ ಮಾಚ್ 16 ರಿಂದ 21ರ ತನಕ ಬದಲಾಯಿಸಲಾಗಿದೆ. ಹುಬ್ಬಳ್ಳಿ, ದಾವಣಗೆರೆ ನಡುವೆ ಸಂಚಾರವಿಲ್ಲ.
ಗಾಂಧಿಧಾಮ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16505 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮೂಲಕ ಮಾರ್ಚ್ 21ರಂದು ಸಂಚಾರ ಮಾಡಲಿದೆ. ಹುಬ್ಬಳ್ಳಿ, ಹರಿಹರ ನಡುವೆ ಸಂಚಾರ ಮಾಡುವುದಿಲ್ಲ.












Click it and Unblock the Notifications