Get Updates
Get notified of breaking news, exclusive insights, and must-see stories!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು, ಜನವರಿ 31: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿ ಮಾಡಿದ್ದು, ಬರೋಬ್ಬರಿ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಹೌದು, ಪೊಲೀಸ್ ಇಲಾಖೆಗೆ ಸರ್ಕಾರ ಸರ್ಜರಿ ಮಾಡಿದ್ದು, ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮೇಜರ್​ ಸರ್ಜರಿ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.

Bengaluru City Police Commissionerate Stations Total 218 Psi Transferred

ನಗರ ಪೊಲೀಸ್‌ ಆಯುಕ್ತರ ಪರವಾಗಿ ಐಪಿಎಸ್‌ ಅಧಿಕಾರಿ ರಮನ್‌ ಗುಪ್ತಾ ಅವರು ಆದೇಶ ಹೊರಡಿಸಿದೆ. ಅಲ್ಲದೇ ಸಂಬಂಧಪಟ್ಟ ಘಟಕಾಧಿಗಳು ವರ್ಗಾವಣೆಗೊಂಡ ಪಿಎಸ್‌ಐಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮೂರ್ತಿ- ಮಲ್ಲೇಶ್ವರಂ ಠಾಣೆ, ಪ್ರಭುಗೌಡ ಎಸ್‌. ಪಾಟೀಲ್‌-ಆಡುಗೋಡಿ ಸಂಚಾರ ಠಾಣೆ, ಶಿವಪ್ಪ ಎಂ.ನಾಯ್ಕರ್‌-ರಾಮಮೂರ್ತಿನಗರ ಠಾಣೆ, ಶಿವಪ್ಪ -ವೈಟ್‌ಫೀಲ್ಡ್‌ ಠಾಣೆ, ರಮಾದೇವಿ ಬಿ.ಎಸ್‌.ಮಹದೇವಪುರ ಠಾಣೆ, ವಿನೂತ್‌ ಎಚ್‌.ಎಂ.-ಬಸವನಗುಡಿ ಠಾಣೆ, ಶ್ರೀನಿವಾಸ್‌ ಪ್ರಸಾದ್- ಹುಳಿಮಾವು ಠಾಣೆಗೆ ಸೇರಿ 218 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

33 ಡಿವೈಎಸ್ಪಿಗಳು, 132 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೂ 33 ಡಿವೈಎಸ್ಪಿಗಳು ಹಾಗೂ 132 ಇನ್ಸ್‌ಪೆಕ್ಟರ್ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್​ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್​ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಅನೇಕ ಅಧಿಕಾರಿಗಳ ವರ್ಗಾವಣೆಯಾಗಿದೆ. ಸಂಪಂಗಿರಾಮನಗರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್ ರವಿಕಿರಣ್, ರಾಮನಗರ ಕುಂಬಳಗೋಡು ಠಾಣೆ ಇನ್ಸ್​​ಪೆಕ್ಟರ್ ಮಂಜುನಾಥ್ ಜಿ ಹೂಗಾರ್. ಕಾಟನ್​ಪೇಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ನರೇಂದ್ರ ಬಾಬು, ಸಿಸಿಬಿ ಬೆಂಗಳೂರು ಇನ್ಸ್​ಪೆಕ್ಟರ್ ಕೆ.ಲಕ್ಷ್ಮೀ ನಾರಾಯಣ್, ಹಲಸೂರು ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಸಂತೋಷ್ ಕೆ, ಜಯನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ದೀಪಕ್ ಆರ್ ಸೇರಿ ಒಟ್ಟು 132 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+