Belagavi- Delhi Flight: ಅ.5ಕ್ಕೆ ವಿಮಾನ ಸಂಚಾರ, ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭ

ಬೆಳಗಾವಿ, ಆಗಸ್ಟ್ 25: ಬೆಳಗಾವಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ವಿಮಾನ ಹಾರಲು ಕಾತರರಾಗಿದ್ದ ಪ್ರಯಾಣಿಕರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಅಕ್ಟೋಬರ್ 05ರಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರ ವಿಮಾನವು ದೆಹಲಿಗೆ ಕಾರ್ಯಾಚರಣೆ ನಡೆಸಲಿದ್ದು, ಇಂದಿನಿಂದಲೇ ಶುಕ್ರವಾರದಿಂದಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಬೆಳಗಾವಿ ಮತ್ತು ದೆಹಲಿ ಮಧ್ಯೆ ವಿಮಾನಯಾನ ಆರಂಭ ಬಗ್ಗೆ ಬಹುದಿನಗಳಿಂದ ಬೇಡಿಕೆ ಕೇಳಿ ಬಂದಿತ್ತು. ನೇರ ವಿಮಾನವು ಬೆಳಗಾವಿಯಿಂದ ಪ್ರಯಾಣ ಆರಂಭಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದರು.

Belagavi To New Delhi Direct Flight Operation Start On October 5, Ticket Booking Strat now

ಜನರ ಬೇಡಿಕೆಯಂತೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ ಸಂಸ್ಥೆ (Indigo Airlines) ಮುಂದಿನ ಅಕ್ಟೋಬರ್‌ನಿಂದ ದೆಹಲಿಗೆ ಪ್ರಯಾಣಿಕರಿಗೆ ನೇರ ಸಂಚಾರ ಸೇವೆ ನೀಡಲಿದೆ. ಈ ವಿಮಾನಯಾನದಲ್ಲಿ ಸಂಚರಿಸುವವರಿಗೆ ಅನುಕೂಲವಾಗುವಂತೆ ಇಂದಿನಿಂದಲೇ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಇನ್ನೂ ಬೆಳಗಾವಿ ಮತ್ತು ದೆಹಲಿ ಮದ್ಯೆ 4719 ರೂಪಾಯಿ ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.

ವಿಜಯಪುರ ಏರ್‌ಪೋರ್ಟ್ ಉದ್ಘಾಟನೆ

ಉತ್ತರ ಕರ್ನಾಟಕದ ಮತ್ತೊಂದು ಪ್ರಮುಖ ವಿಮಾನ ನಿಲ್ದಾಣವಾಗಿ ವಿಜಯಪುರ ಏರ್‌ಪೋರ್ಟ್ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಈ ಏರ್‌ಪೋರ್ಟ್ ಮುಂದಿನ ವರ್ಷ 2024ರಲ್ಲಿ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಅವರು ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ್ದ ಅವರು, 727 ಎಕರೆ ವಿಸ್ತೀರ್ಣದ ವಿಶಾಲ ಸ್ಥಳದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಲಿದೆ. ಈಗಾಗಲೇ ಸಿವಿಲ್ ಕೆಲಸಗಳು ಅಂತಿಮ ಹಂತಕ್ಕೆ ಬಂದಿದ್ದು, ಈ ವರ್ಷಾಂತ್ಯಕ್ಕೆ (ಡಿಸೆಂಬರ್‌ಗೆ) ಮುಗಿಯಲಿವೆ. ಅದಾದ ಬಳಿಕ ಸಿಗ್ನಲಿಂಗ್, ಲ್ಯಾಂಡಿಂಗ್, ರನ್‌ ವೇ ಸೇರಿದಂತೆ ವಿವಿಧ ತಾಂತ್ರಿಕ ಕೆಲಸಗಳು ನಡೆಯಬೇಕಿದೆ. ಅವೆಲ್ಲವು ಮು0ದಿನ ವರ್ಷ ಏಪ್ರಿಲ್ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+