ಬೆಳಗಾವಿ-ಬೆಂಗಳೂರು ತತ್ಕಾಲ್ ರೈಲಿನ ಪ್ರಯಾಣ ದರ ಅಂತಿಮ

ಬೆಂಗಳೂರು, ಜೂನ್ 28 : ಬೆಂಗಳೂರು-ಬೆಳಗಾವಿ ನಡುವಿನ ವಿಶೇಷ ರೈಲಿನ ದರವನ್ನು ನಿಗದಿ ಮಾಡಲಾಗಿದೆ. ಜೂನ್ 29ರಿಂದ ಒಂದು ತಿಂಗಳ ಕಾಲ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ತತ್ಕಾಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸ್ಲೀಪರ್ ಕ್ಲಾಸ್ ಪ್ರಯಾಣ ದರವನ್ನು 465 ರೂ. ಎಂದು ನಿಗದಿ ಮಾಡಲಾಗಿದೆ. ಗುರುವಾರ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸ ಸೂಪರ್ ಫಾಸ್ಟ್ ರೈಲು ತತ್ಕಾಲ್ ಆಗಿರುವುದರಿಂದ ರಾಣೆ ಚನ್ನಮ್ಮ ರೈಲಿಗಿಂತ ಬೆಲೆ ಹೆಚ್ಚಾಗಿದೆ. ರೈಲು ಖಾಯಂ ಆಗಿ ಸಂಚಾರ ಆರಂಭಿಸಿದರೆ ಪ್ರಯಾಣ ದರ ಪರಿಷ್ಕರಣೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Belagavi Bengaluru special train sleeper coach fare 465

ರಾಣಿ ಚನ್ನಮ್ಮ ರೈಲಿನಲ್ಲಿ ಬೆಂಗಳೂರು-ಬೆಳಗಾವಿಗೆ 340 ರೂ., ಬೆಳಗಾವಿ-ಯಶವಂತಪುರ ನಡುವಿನ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕ್ಲಾಸ್ ಪ್ರಯಾಣ ದರ 365 ರೂ. ಇದೆ. ಇವುಗಳಿಗೆ ಹೋಲಿಕೆ ಮಾಡಿದರೆ ತತ್ಕಾಲ್ ಸೂಪರ್ ಫಾಸ್ಟ್ ರೈಲಿನ ದರ ಹೆಚ್ಚಾಗಿದೆ.

ಸಂಪರ್ಕ ಕ್ರಾಂತಿ ರೈಲು ಬೆಂಗಳೂರು-ಬೆಳಗಾವಿ ನಡುವೆ 11 ತಾಸು 15 ನಿಮಿಷದಲ್ಲಿ ಸಂಚಾರ ನಡೆಸುತ್ತದೆ. ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ 11 ತಾಸು 25 ನಿಮಿಷದಲ್ಲಿ ಸಂಚಾರ ನಡೆಸುತ್ತದೆ. ತತ್ಕಾಲ್ ಸೂಪರ್ ಫಾಸ್ಟ್ 10 ತಾಸಿನಲ್ಲಿ ಸಂಚಾರ ನಡಸಲಿದೆ.

ಬೆಂಗಳೂರು-ಬೆಳಗಾವಿ ನಡುವಿನ ವಿಶೇಷ ತತ್ಕಾಲ್ ರೈಲಿಗೆ ಜೂನ್ 29ರಂದು ಸಂಜೆ 6 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಲ್ಲಿ ಚಾಲನೆ ಸಿಗಲಿದೆ. ಒಂದು ತಿಂಗಳ ಕಾಲ ಮಾತ್ರ ಸದ್ಯ ರೈಲು ಸಂಚಾರ ನಡೆಯಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

14 ಬೋಗಿಗಳನ್ನು ಹೊಂದಿರುವ ರೈಲು ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ಸೌತ್, ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಕಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ತನಕ ರೈಲು ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+