ಹಾವೇರಿ ಲೋಕಸಭಾ ಟಿಕೆಟ್‌ ಗಾಗಿ ಬಿಜೆಪಿಯಲ್ಲಿ ಫೈಟ್;‌ ಇದು ಮಕ್ಕಳಾಟ ಎಂದು ಈಶ್ವರಪ್ಪ ವಿರುದ್ದ ಬಿ ಸಿ ಪಾಟೀಲ್‌ ಕಿಡಿ‌

ಹಾವೇರಿ, ಆಗಸ್ಟ್‌22: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಲವು ಮಾಜಿ ಸಚಿವರು ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಫುಲ್‌ ಅಲರ್ಟ್‌ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿ ಸಿ ಪಾಟೀಲ್‌ ಹಾವೇರಿಯಿಂದ ಸ್ಪರ್ಧಿಸಲು ತೆರಮರೆಯಲ್ಲಿ ಕಸರತ್ತನ್ನ ಶುರು ಮಾಡಿದ್ದಾರೆ.ಇತ್ತ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಣ ತೊಟ್ಟಿದ್ದು, ಹಾವೇರಿಯಲ್ಲಿ ಸಂಚಾರ ಶುರು ಮಾಡಿದ್ದಾರೆ.

ಹೌದು, 2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್‌ ಕೈ ತಪ್ಪಿದ್ದು, ಪುತ್ರನಿಗೆ ಟಿಕೆಟ್‌ ನೀಡುವಂತೆ ಈಶ್ವರಪ್ಪ ಬೇಡಿಕೆ ಇಟ್ಟಿದ್ರು. ಆದರೆ, ಕೊನೆ ಕ್ಷಣದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‌ ಗೂ ಸಹ ಟಿಕೆಟ್‌ ಕೈ ತಪ್ಪಿದ್ದು, ಇದೀಗ ಹಾವೇರಿ ಕ್ಷೇತ್ರದ ಮೇಲೆ ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಕೂಡಾ ಕಣ್ಣಿಟ್ಟಿದ್ದಾರಂತೆ. ಮಗನಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

Bc Patil Slams Bjp Leader Ks Eshwarappa Over Haveri Mp Ticket

ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಎಸ್ ಈಶ್ವರಪ್ಪ ತಮ್ಮ ಮಗನನ್ನು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಂಬಿಸಲು ಹೊರಟಿರುವುದು ಮಕ್ಕಳಾಟ ಎಂದು ಮಾಜಿ ಸಚಿವ ಬಿಸಿ ಪಾಟೀಲ್‌ ಕಿಡಿಕಾರಿದ್ದಾರೆ.

ಅನ್ಯ ಕ್ಷೇತ್ರದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ನೇರವಾಗಿ ಈಶ್ವರಪ್ಪ ಅವರಿಗೆ ಕರೆ ಮಾಡಿದರೆ ಕ್ಷಮಿಸಿ ಎನ್ನುತ್ತಾರೆ. ವಲಸಿಗರು ಎಂದು ಲಘುವಾಗಿ ಮಾತನಾಡುವ ಈಶ್ವರಪ್ಪ ಅವರು ಈಗ ನನ್ನ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಜತೆಗೆ ಪಕ್ಷದ ಸೋಲಿಗೆ ಕಾರಣರಾದವರನ್ನು ಕರೆದುಕೊಂಡು ಒಂದರ್ಥದಲ್ಲಿ ಪ್ರಚಾರ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸ್ವಪಕ್ಷದ ನಾಯಕ ಕೆ ಎಸ್‌ ಈಶ್ವರಪ್ಪ ವಿರುದ್ದ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನೂ ಯಾರಿಗೂ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ. . ಈ ಬಾರಿ ವಿನ್ನಿಂಗ ಹಾರ್ಸ್ ನೋಡಿಯೇ ಟಿಕೆಟ್ ಕೊಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ನೋಡಿಯೇ ಜನರು ಮತ ಹಾಕಿ ಗೆಲ್ಲಿಸುತ್ತಾರೆ.

ಇನ್ನೂ ಕಾಂಗ್ರೆಸ್‌ ಆಪರೇಷನ್ ಹಸ್ತ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಟಿ ಸೋಮಶೇಖರ್ ಅವರು ಎರಡು ದಿನಗಳ ಹಿಂದೆ ಬಿಜೆಪಿ‌ ಸಭೆಯಲ್ಲಿ ಭಾಗಿಯಾಗಿದ್ದಾರೆ. ನಾನು ಪೋನ್ ಮಾಡಿ ಮಾತಾಡಿದ್ದೇನೆ. ನಾನು ಹಳೇ ಕಾಂಗ್ರೆಸ್ಸಿಗ ಹೀಗಾಗಿ ಕ್ಷೇತ್ರಕ್ಕೆ ಬಂದಾಗ ಮಾತಾಡಿದ್ದೇನೆ. ಇದನ್ನೇ ಸುಮ್ಮನೆ ದೊಡ್ಡದು ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಮೂರು ಗುಂಪು ಆಗಿವೆ, ಪರಮೇಶ್ವರ್‌ ಅವರದ್ದು, ಸಿದ್ದರಾಮಯ್ಯನವರುದ್ದು, ಡಿಕೆ ಶಿವಕುಮಾರ್ ಅವರದ್ದು ಗುಂಪು ಆಗಿವೆ. ಚುನಾವಣೆ ಬರುತ್ತಿರುವುದರಿಂದ ಈ ಗಮನ ಬೇರೆಡೆ ಸೆಳೆಯಲು ಈ ಥರ ಮಾಡುತ್ತಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+