Bedti-Varada River: ಬೇಡ್ತಿ-ವರದಾ ನದಿ ಜೋಡಣೆ ಡಿಪಿಆರ್ ತಯಾರಿಕೆಗೆ ಒತ್ತಾಯ: ಸರ್ಕಾರಕ್ಕೆ ಬೊಮ್ಮಾಯಿ ಪತ್ರ

ಬೆಂಗಳೂರು: ಉತ್ತರ ಕರ್ನಾಟಕದ ವರದಾ ಮತ್ತು ಬೇಡ್ತಿ ನದಿ ಜೋಡಣೆಯ ಯೋಜನೆ ಸಾಕಾರಕ್ಕೆ ಹಿಂದೊಮ್ಮೆ ಸರ್ಕಾರ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ಕೊಟ್ಟಿದೆ. ಅದರಂತೆ ಯೋಜನೆಗೆ ವೇಗ ನೀಡುವ ನಿಟ್ಟಿನಲ್ಲಿ ಬೇಡ್ತಿ ಮತ್ತು ವರದಾ ನದಿ ಯೋಜನೆಯ ವಿಸೃತ ಯೋಜನಾ ವರದಿಯನ್ನು (ಡಿಪಿಆರ್) ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಯೋಜನೆ ಕುರಿತು ಕುರಿತು ಸುದೀರ್ಘವಾಗಿ ಚರ್ಚಿಸಲು ಹಾವೇರಿ ಜಿಲ್ಲೆಯ ಎಲ್ಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದ್ಯಸ್ಯರು ಮತ್ತು ಇತರ ಪ್ರಮುಖರು ಹೋರಾಟಗಾರರ ಒಂದು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಬೇಕು. ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಲ ಸಪನ್ಮೂಲ ಸಚಿವ ಎನ್. ಚಲುವರಾಯ ಸ್ವಾಮಿ ಅವರಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.

Bedti-Varada River

ಕರ್ನಾಟಕದಲ್ಲೀಗ ತೀವ್ರವಾದಂತಹ ಬರಗಾಲದ ಬರೆ ಅನುಭವಿಸುತ್ತಿದ್ದೇವೆ‌. ಇದರಿಂದ ರಾಜ್ಯದ ಜನ ಸಾಮಾನ್ಯರ ಬದುಕು ಅತ್ಯಂತ ಕಷ್ಟಕರವಾಗಿದೆ ಬರುವ ದಿನಗಳಲ್ಲಿ ಕುಡಿಯುವ ನೀರು ದನಕರುಗಳಿಗೆ ನೀರು ಮತ್ತು ಮೇವು ಕೂಡ ಸಿಗದಂತಹ ಭೀಕರವಾದ ಪರಿಸ್ಥಿತಿ ಎದುರಿಸಬೇಕಾಗಿದೆ. ಮಳೆಯನ್ನೇ ನಂಬಿಕೊಂಡಿರುವ ರೈತರು ಅಪಾರ ಕಷ್ಟ ನಷ್ಟ ನಿರಂತರ ಅನುಭವಿಸುದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರ ಅತ್ಯಂತ ಸಾಮಾನ್ಯ ವಿಷಯವಾಗಿದೆ ಕಳೆದ ಮೂವತ್ತು ವರ್ಷದಲ್ಲಿ ಹದಿನೇಳು ವರ್ಷ ಬರವನ್ನು ಉತ್ತರ ಕರ್ನಾಟಕದ ಜನ ಅನುಭವಿಸುತ್ತಿದ್ದಾರೆ. ಬರ ನಿರ್ವಹಣೆ ಅಲ್ಪಾವಧಿಯ ಕೆಲವು ಕ್ರಮಗಳನ್ನು ರಾಜ್ಯ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ನೆರವಿಗೆ ಬರಬೇಕು ವಿಶೇಷವಾಗಿ ಕುಡಿಯವ ನೀರು ಮೇವು, ಜನರ ಕೈಗೆ ಕೆಲಸ ಕೊಡುವ ಕೆಲಸವನ್ನು ತಾವು ಮಾಡಬೇಕೆಂದು ಆಗ್ರಹಪಡಿಸುತ್ತಾ ಕೆಲವು ಶಾಸ್ವತವಾದ ಕ್ರಮಗಳನ್ನು ತೆಗೆದುಕೊಳ್ಳಲು ಅತ್ಯಂತ ಸೂಕ್ತ ಕಾಲವಾಗಿದೆ. ಅದರಲ್ಲಿ ನದಿ ಜೋಡಣೆಯ ಯೋಜನೆ ಅಡಿಯಲ್ಲಿ ಬೇಡ್ತಿ ವರದಾ ಜೋಡಣೆ ಅತ್ಯಂತ ಪ್ರಮುಖ ಎಂದು ಹೇಳಿದರು.

ಬೇಡ್ತಿ-ವರದಾ ನದಿ ಜೋಡಣೆ

ಬೇಡ್ತಿ ಮತ್ತು ವರದಾ ಜೋಡಣೆ ಕೇಂದ್ರದ ನದಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕದಲ್ಲಿ ಪ್ರಮುಖವಾಗಿದ್ದು ಈಗಾಗಲೇ ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ನದಿ ಯೋಜನೆ ಅಡಿಯಲ್ಲಿ ಇದಕ್ಕೆ 18 ಟಿಎಂಸಿ ನೀರು ಮೀಸಲಿಟ್ಟಿದ್ದು, ಇದನ್ನು ನಮ್ಮ ಸರ್ಕಾರ ಇಟ್ಟಿದ್ದು ತಾವೂ ಕೂಡ ಮೇಲ್ಕಂಡ ವಿಚಾರದಲ್ಲಿ ಕೇಂದ್ರ ಮತ್ತು ಇತರ ರಾಜ್ಯಗಳ ಜೊತೆಗೆ ಎಂಒಯುಗೆ ಒಪ್ಪಿಗೆ ಸೂಚಿಸಿರುವುದು ಉತ್ತಮ ನಿರ್ಧಾರ ಎಂದು ಶ್ಲಾಘಿಸಿದರು.

ಡಿಪಿಆರ್ ತಯಾರಿಕೆ ಆಮೆಗತಿಗೆ ಬೊಮ್ಮಾಯಿ ಬೇಸರ

ಈಗ ಎರಡನೇ ಬಾರಿ ಡಿಪಿಆರ್ ಮಾಡುವಂತ ಹಂತಕ್ಕೆ ಬಂದು ಹಲವು ತಿಂಗಳುಗಳು ಕಳೆದರೂ ಕೂಡ ಡಿಪಿಆರ್ ಪ್ರಗತಿ ಅತ್ಯಂತ ಆಮೆಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಇದರ ಬಗ್ಗೆ ಜಲಸಂಪನ್ಮೂಲ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಬಹಳ ಸ್ಪಷ್ಟ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಡು ಡಿಪಿಆರ್ ಸಿದ್ದಪಡಿಸಿ ಕೇಂದ್ರಕ್ಕೆ ಕಳಿಸಿದ್ದೆ ಅದರೆ ಕೇಂದ್ರ ಸರ್ಕಾರದಿಂದ ಯೋಜನೆಯ ಶೇ 90ರಷ್ಟು ಅನುದಾನ ನದಿ ಜೋಡಣೆಯ ಯೋಜನೆಯಲ್ಲಿ ನಮಗೆ ಸಿಗುತ್ತದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.

ಆಧುನಿಕ ತಂತ್ರಜ್ಞಾನ ಮತ್ತು ಯಾವುದೇ ದೊಡ್ಡ ಪ್ರಮಾಣದ ನೀರನ್ನು ಹಿಡಿದಿಡುವ ಜಲಾಶಯ ನಿರ್ಮಾಣ ಇಲ್ಲದೇ ನೀರನ್ನು ಎತ್ತುವ ಮುಖಾಂತರ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಮಳೆಗಾಲದಲ್ಲಿ ನೀರನ್ನು ಎತ್ತುವ ಮುಖಾಂತರ ಹೆಚ್ಚುವರಿ ನೀರು ಉತ್ತರ ಕನ್ನಡ ದಾಟಿ ಸಮುದ್ರ ಸೇರುತ್ತಿರುವುದು ಅದರಿಂದ ಯಾವುದೇ ರೀತಿಯ ನೀರಿನ ಕೊರತೆಯೂ ಕೂಡ ಬೆಡ್ತಿ ನದಿಯಲ್ಲಿ ಉತ್ತರ ಕನ್ನಡ ಜನತೆಗೆ ಆಗುವುದಿಲ್ಲ. ಇದರ ಬಗ್ಗೆ ಅಲ್ಲಿಯ ಪೂಜ್ಯರಿಗೆ ಪ್ರಮುಖರಿಗೆ ಮನವರಿಕೆ ಮಾಡಿಕೊಡುವಂತೆ ಅವರು ಸರ್ಕಾರವನ್ನು ಕೋರಿದ್ದಾರೆ.

ಪ್ರಮುಖ ಬೇಡಿಕೆಗಳು ಏನು?

* ಯೋಜನೆ ಸಾಕಾರಗೊಳಿಸಿ ಸುಮಾರು 18, ಟಿಎಂಸಿ ನೀರನ್ನು ಗದಗ, ಹಾವೇರಿ‌, ಕೊಪ್ಪಳ, ರಾಯಚೂರು ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿಗೆ ಸದ್ಬಳಕೆ ಮಾಡುವ ಕೆಲಸ ಆಗಬೇಕು.

* ಹಾವೇರಿ ಜಿಲ್ಲೆಗೆ ಅದಕ್ಕೆ ಬೇಕಾಗಿರುವ ನೀರನ್ನು ಸಂಗ್ರಹ ಮಾಡಲು ಪ್ರತ್ಯೇಕ ಸಂಗ್ರಹಗಾರ ರಿಸರ್ವಾಯರ್ ಅನ್ನು ಮಾಡುವ ಅಂಶವನ್ನು ಡಿಪಿಆರ್ ನಲ್ಲಿ ಸೇರಿಸುವಂತೆ ಅವರು ಬೊಮ್ಮಾಯಿ ಪತ್ರದಲ್ಲಿ ಕೋರಿದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ವರದಾ ಮತ್ತು ತುಂಗಭದ್ರಾ ನದಿ ಪಾತ್ರದ ನಾಲ್ಕು ಜಿಲ್ಲೆಯ ಜನರಿಗೆ ಬರಗಾಲದಿಂದ ಬಿಡುಗಡೆ ಮಾಡುವ ಬೇಡ್ತಿ ಮತ್ತು ವರದಾ ನದಿ ಜೋಡಣೆ ಬದುಕಿನ ಆಶ್ರಯ ಆಗಿದೆ. ಇದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಕೂಡಲೇ ನಮ್ಮ ಜಿಲ್ಲೆಯ ಎಲ್ಲ ಸಚಿವರ ಮತ್ತು ಶಾಸಕರ, ವಿಧಾನ ಪರಿಷತ್ ಸದ್ಯಸ್ಯರು ಮತ್ತು ಇತರ ಪ್ರಮುಖರು ಹೋರಾಟಗಾರರ ಒಂದು ಸಭೆಯನ್ನು ತಾವು ಬೆಂಗಳೂರಿನಲ್ಲಿ ನಡೆಸಿ ನಮ್ಮ ಭಾಗದ ಜನರ ಸಂಕಷ್ಟವನ್ನು ನಿವಾರಣೆ ಮಾಡಲು ಸ್ಪಷ್ಟವಾದ ನಿರ್ಣಯಗಳನ್ನು ತಾವು ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಸಭೆಗೆ ನೀರ್ಣಯ ಕೈಗೊಳ್ಳಲು ಕೂಡಲೇ ದಿನಾಂಕ ನಿಗದಿ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+