ಲೈಂಗಿಕ ಕಿರುಕುಳ: ಬಂಟ್ವಾಳ ಬಸ್ ಕಂಡಕ್ಟರಿಗೆ ಧರ್ಮದೇಟು

ಈ ಮಧ್ಯೆ, ಬಂಟ್ವಾಳದಲ್ಲೊಂದು ಲೈಂಗಿಕ ಕಿರುಕುಳ ಪ್ರಕರಣ ನಡೆದಿದ್ದು ಆರೋಪಿ ಬಸ್ ಕಂಡಕ್ಟರಿಗೆ ಸಮ ಧರ್ಮದೇಟು ಬಿದ್ದಿದೆ. ಇಲ್ಲಿನ ಮೆಲ್ಕಾರ್ ಜಂಕ್ಷನ್ನಿನಲ್ಲಿ ಗುರುವಾರ ಈ ಘಟನೆ ನಡೆದಿದೆ. ಮಂಗಳೂರು ಮತ್ತು ಬಿಸಿ ರೋಡ್ ಮಧ್ಯೆ ಸಂಚರಿಸುವ ಬಸ್ಸಿನ ಕಂಡಕ್ಟರ್ ಮೊಹಮ್ಮದ್ ಸಹ ಪ್ರಯಾಣಿಕರಿಂದ ಏಟು ತಿಂದು ಆಸ್ಪತ್ರೆ ಸೇರಿರುವ ಆರೋಪಿ.
ಕಂಡಕ್ಟರ್ ಮೊಹಮ್ಮದ್ ಲೈಂಗಿಕ ಕಿರುಕುಳ ನೀಡತೊಡಗಿದಾಗ ಬಾಧಿತ ಮಹಿಳೆ, ಕುಕ್ಕಾಜೆ ನಿವಾಸಿ ಕೆನ್ನೆಗೆ ಬಾರಿಸಿದ್ದಾರೆ. ಹಿಂದೆ ಪುರುಷರ ಸೀಟಿನಲ್ಲಿ ಕುಳಿತಿದ್ದ ಬಾಧಿತ ಮಹಿಳೆಯ ಪತಿ, ಮೊಹಮ್ಮದನನ್ನು ಮುಂದಿನ ನಿಲ್ದಾಣದಲ್ಲಿ ಬಸ್ಸಿಂದ ಕೆಳಗಿಳಿಸಿ ವಿಚಾರಿಸಿಕೊಂಡಿದ್ದಾರೆ. ಇದಕ್ಕೆ ಸಹ ಪ್ರಯಾಣಿಕರೂ ಸಾಥ್ ನೀಡಿದ್ದಾರೆ. ಹಾಗೆಯೇ ಕೈಗೊಂದು ಏಟು ಎಂಬಂತೆ ಎಲ್ಲರೂ ಮೊಹಮ್ಮದನನ್ನು ಥಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೊಹಮ್ಮದನನ್ನು ಗುಂಪಿನಿಂದ ಬಿಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಿಂದೆಯೂ ಮೊಹಮ್ಮದ್ ಇದೇ ರೀತಿ ಇತರೆ ಮಹಿಳಾ ಪ್ರಯಾಣಿಕರನ್ನು ಗೋಳುಹೊಯ್ದುಕೊಂಡಿದ್ದ ಎಂದು ಪ್ರಯಾಣಿಕರು ಆರೋಪಿಯನ್ನು ದೂಷಿಸಿದ್ದಾರೆ.











Click it and Unblock the Notifications