ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆ ಮುಂದಕ್ಕೆ ಹೋಗುತ್ತಾ?

ಬೆಂಗಳೂರು: ಬಿಬಿಎಂಪಿ ಸದಸ್ಯರನ್ನೇ ಕಾಣದೆ ಬೆಂಗಳೂರು ಸೊರಗಿ ಹೋಗಿದೆ. ಸ್ಥಳೀಯ ಪ್ರತಿನಿಧಿಗಳೇ ಇಲ್ಲದೆ ಜನ ಸಂಕಷ್ಟಕ್ಕೆ ಸಿಲುಕಿದ್ದು, ಹೀಗಿದ್ದಾಗ ಹೊಸ ಸರ್ಕಾರ ಸಮಸ್ಯೆಗೆ ಅಂತ್ಯ ಹಾಡುತ್ತೆ. ಚುನಾವಣೆ ನಡೆಯುತ್ತೆ ಅನ್ನೋ ಆಸೆ ಇತ್ತು. ಆದ್ರೆ ಈಗ ಬೇರೆಯದ್ದೇ ಮಾತು ಶುರುವಾಗಿದೆ. ಬಿಬಿಎಂಪಿ ಚುನಾವಣೆ ಮತ್ತೆ ಮುಂದೆ ಹೋಗುತ್ತಾ? ಅನ್ನೋ ಪ್ರಶ್ನೆ ಉದ್ಭವಿಸಿದೆ.

ಐಟಿ ಸಿಟಿ, ಭಾರತದ ನಂ. 1 ನಗರ ಅಂತೆಲ್ಲಾ ಬಿರುದು ಪಡೆದಿದ್ದ ಬೆಂಗಳೂರಿಗೆ ಕಳೆದ ಕೆಲ ವರ್ಷದಿಂದ ಹಲವು ಸಂಕಷ್ಟಗಳು ಎದುರಾಗಿದ್ದವು. ಅದರಲ್ಲೂ ರಾಜಧಾನಿ ಮೂಲ ಸೌಕರ್ಯ ಕ್ಷೇತ್ರದಲ್ಲಿ ನಲುಗಿ ಹೋಗಿದೆ. ಇದಕ್ಕೆಲ್ಲಾ ಬಿಬಿಎಂಪಿ ಕೂಡ ಕಾರಣ ಅನ್ನೋ ಆರೋಪ ಕೂಡ ಇದೆ. ಹೀಗಿದ್ದಾಗ ಕಳೆದ 3 ವರ್ಷದಿಂದ ಬಾಕಿ ಉಳಿದಿರುವ ಬಿಬಿಎಂಪಿ ಚುನಾವಣೆ ಈಗಲಾದರೂ ನಡೆಯುತ್ತೆ ಅನ್ನೋ ಆಸೆ ಚಿಗುರೊಡೆದಿತ್ತು. ಆದರೆ ಆಸೆ ಈಗ ಆಸೆಯಾಗಿಯೇ ಉಳಿಯುವ ಅನುಮಾನ ಮೂಡಿದೆ. ಹಾಗಾದ್ರೆ ಬಿಬಿಎಂಪಿ ಚುನಾವಣೆಗೆ (BBMP Election) ಎದುರಾದ ಅಡ್ಡಿ ಏನು? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

Bangaloreans waiting for BBMP elections

ಬಿಬಿಎಂಪಿ ವಾರ್ಡ್ ವಿಂಗಡಣೆ ಗೊಂದಲ?

ಎಲ್ಲಾ ಸರಿ ಹೋದರೂ ವಾರ್ಡ್ ವಿಂಗಡಣೆ ವಿಚಾರವೇ ಮತ್ತೆ ಗೊಂದಲ ಮೂಡಿಸುತ್ತಿದೆ. ಏಕೆಂದರೆ ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಮತ್ತೆ ಕೈಹಾಕದೆ, ಹಿಂದೆ ಬಿಜೆಪಿ ಸರ್ಕಾರ ಮಾಡಿದ್ದ 243 ವಾರ್ಡ್‌ಗಳಿಗೆ ಎಲೆಕ್ಷನ್ ನಡೆಸಬೇಕು. ಮೀಸಲಾತಿ ಪ್ರಕಟಿಸಿ, ಈ ವರ್ಷದ ಅಂತ್ಯಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಸಲು ಕೆಪಿಸಿಸಿ ರಚಿಸಿದ್ದ ಸಮಿತಿ ಸಲಹೆಯನ್ನ ನೀಡಿದೆ ಎನ್ನಲಾಗಿದೆ. ಇದೇ ವೀಚಾರ ಮತ್ತೆ ಮತ್ತೆ ಗೊಂದಲ ಸೃಷ್ಟಿಸುತ್ತಿದೆ. ಏಕೆಂದರೆ ಬಿಜೆಪಿಯ ವಾರ್ಡ್ ವಿಂಗಡಣೆ ಬಗ್ಗೆ ಕಾಂಗ್ರೆಸ್ ಕಿರಿಕ್ ಮಾಡಿತ್ತು. ಈಗ ಅವರದ್ದೇ ಸರ್ಕಾರ ಇದ್ದಾಗ ಬಿಜೆಪಿ ಮಾಡಿದ್ದ ವಾರ್ಡ್ ವಿಂಗಡಣೆ ಒಪ್ಪುವುದು ಕಷ್ಟ ಅನ್ನೋ ಮಾತು ಕೇಳಿಬರುತ್ತಿದೆ.

ಬಿಬಿಎಂಪಿ ಚುನಾವಣೆ ಇನ್ನಷ್ಟು ಮುಂದಕ್ಕೆ?

ಇನ್ನೊಂದ್ಕಡೆ ಬಿಜೆಪಿ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಯನ್ನ ಮರುವಿಂಗಣೆ ಮಾಡಿ ವಾರ್ಡ್‌ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಳ ಮಾಡಿತ್ತು. ಆದರೆ ಮೊದಲಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಫೈಟ್ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧಪಡಿಸಿದ್ದ 243 ವಾರ್ಡ್‌ಗಳ ಹಳೇ ವರದಿ ಬಿಟ್ಟು ಬಿಬಿಎಂಪಿ ವ್ಯಾಪ್ತಿಗೆ 250 ವಾರ್ಡ್‌ ಸೇರಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ ಎನ್ನಲಾಗಿತ್ತು. ಆದರೆ ಇದೆಲ್ಲವನ್ನೂ ಮೀರಿ ಈಗ ಬೇರೆಯದ್ದೇ ಚರ್ಚೆ ಶುರುವಾಗಿದೆ. ಈ ಗೊಂದಲದಲ್ಲಿ ಮತ್ತೆ ಬಿಬಿಎಂಪಿ ಚುನಾವಣೆ ಮುಂದಕ್ಕೆ ಹೋಗುತ್ತಾ? ಅನ್ನೋ ಡೌಟ್ ಬೆಂಗಳೂರಿಗರನ್ನ ಕಾಡುತ್ತಿದೆ.

ಚುನಾವಣೆ ನಡೆಸಬೇಕಾದ ಒತ್ತಡದಲ್ಲಿ ಸರ್ಕಾರ?

ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆ ಜಾರಿ ಜೊತೆಗೆ BBMPಯ ಗೆಲುವಿಗೂ ರಣಕಹಳೆ ಮೊಳಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಪಾಲಿಯ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ. ಬೆಂಗಳೂರಿನ ಶಾಸಕರು, ಮಾಜಿ ಮೇಯರ್‌ಗಳು ಕಾಂಗ್ರೆಸ್‌ಗೆ ಸಾಥ್ ನೀಡಿದ್ದಾರೆ. ಹೀಗಾಗಿ ಇನ್ನೇನು ಕೆಲ ದಿನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯೋದು ಗ್ಯಾರಂಟಿ ಎನ್ನಲಾಗಿತ್ತು. ಆದರೆ ಈಗ ವಾರ್ಡ್ ವಿಂಗಡಣೆ ವಿಚಾರ ದೊಡ್ಡ ತಲೆನೋವಾಗುತ್ತಿದೆ. ಆದರೆ ಅದೆಲ್ಲವನ್ನೂ ಮೀರಿ, ಚುನಾವಣೆ ನಡೆಸೋದು ಬಹುತೇಕ ಗ್ಯಾರಂಟಿ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

Bangaloreans waiting for BBMP elections

ಒಟ್ನಲ್ಲಿ ಹಲವು ಗೊಂದಲಗಳ ನಡುವೆ ಬಿಬಿಎಂಪಿ ಚುನಾವಣೆ ಲೇಟ್ ಆಗೋದು ಬೇಡ ಅನ್ನೋದೆ ಬೆಂಗಳೂರಿಗರ ಆಶಯ. ಅದ್ರಲ್ಲೂ ಮಳೆಗಾಲ ಶುರುವಾಗಿರುವ ಸಂದರ್ಭದಲ್ಲಿ ಸ್ಥಳೀಯ ಪ್ರತಿನಿಧಿಗಳು ಅಗತ್ಯ. ಇಲ್ಲವಾದರೆ ಸಮಸ್ಯೆಗಳು ಹೆಚ್ಚಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. 2015ರಲ್ಲಿ ಬಿಬಿಎಂಪಿಗೆ ಎಲೆಕ್ಷನ್ ನಡೆದಿತ್ತು. 2020ರಲ್ಲೇ ಅಧಿಕಾರದ ಅವಧಿ ಮುಗಿಸಿದೆ BBMP. ಬರೋಬ್ಬರಿ 3 ವರ್ಷಗಳಿಂದ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಯುವ ನಿರೀಕ್ಷೆ ಬೆಂಗಳೂರು ನಿವಾಸಿಗಳದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+