ಆರ್‌ಟಿ ನಗದಲ್ಲಿ ಸೇಲ್ಸ್‌ ಗರ್ಲ್ ಮೇಲೆ ಅತ್ಯಾಚಾರ

Bangalore RT Nagar sales girl raped Siddiqui arrested,
ಬೆಂಗಳೂರು, ನ.20: ಗಂಗೇನಹಳ್ಳಿಯ ಆರ್ ಟಿ ನಗರದಲ್ಲಿ ಚಹಾ ಕಪ್‌ ಸೆಟ್ ಖರೀದಿಸುವ ನೆಪದಲ್ಲಿ ಸೇಲ್ಸ್‌ ಗರ್ಲ್ ಅನ್ನು ಮನೆಯೊಳಕ್ಕೆ ಆಹ್ವಾನಿಸಿದ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ವರದಿಯಾಗಿದೆ. ಚಿಕ್ಕಮಗಳೂರು ಮೂಲದ ಆರೋಪಿ ಸಿದ್ದಿಕಿ ಹುಸೇನನನ್ನು ಆರ್‌ಟಿ ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ

ಆರ್‌ಟಿ ನಗರದ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ಸಿದ್ದಿಕಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ನ.13 ರಂದು ರಾಮನಗರದ 19 ವರ್ಷದ ಯುವತಿ ಚಹ ಕಪ್ ಸೆಟ್ ಮಾರಾಟ ಮಾಡಲು ಬಂದಿದ್ದಾಳೆ. ಈ ವೇಳೆ 21 ವರ್ಷದ ಸಿದ್ದಿಕಿ ಚಹಾ ಕಪ್ ಸೆಟ್ ಕೊಳ್ಳುವುದಾಗಿ ಯುವತಿಯನ್ನು ಮನೆಯೊಳಗೆ ಕರೆದು ಬಾಗಿಲು ಹಾಕಿ ಅತ್ಯಾಚಾರ ಎಸಗಿದ್ದಾನೆ.

ಯುವತಿ ತನ್ನ ಊರಿಗೆ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಪೋಷಕರು ನ. 18ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಆರ್‌ಟಿ ನಗರ ಪೊಲೀಸರು ಸಿದ್ದಿಕಿನನ್ನು ಬಂಧಿಸಿದ್ದಾರೆ. ಯುವತಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಒಂದು ವಾರದಿಂದ ಸಿದ್ದಿಕಿ ಹಾಗೂ ಆತನ ಸ್ನೇಹಿತ ಝಾಕೀರ್ ಮನೆಯೊಂದರಲ್ಲಿ ಬಣ್ಣ ಬಳಿಯುತ್ತಿದ್ದರು. ಕೆಲಸ ಅಂತಿಮ ಹಂತಕ್ಕೆ ಬಂದಿತ್ತು. ಮನೆಯಲ್ಲಿ ಯಾರು ಇಲ್ಲದಿರುವಾಗ ದುಷ್ಕರ್ಮಿ ಬಲಾತ್ಕಾರ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಬಾಲಕಿ ಆಸ್ಪತ್ರೆಯಿಂದ ಮನೆಗೆ
ರಾಜ್ಯೋತ್ಸವದ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಲು ಹೋಗಿ ಕನ್ನಮಂಗಲ ಗ್ರಾಮದಲ್ಲಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಅಸ್ವಸ್ಥಗೊಂಡಿದ್ದ ದಲಿತ ಬಾಲಕಿ ವಿಕ್ಟೋರಿಯಾ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದಾಳೆ. ಸೋಮವಾರ ರಾತ್ರಿ 10ನೇ ತರಗತಿಯ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತುಬರುವ ಔಷಧಿ ಕೊಟ್ಟು ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜು ಮತ್ತು ವಿನಯ್‌ ಕುಮಾರ್‌ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ 4 ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+