12ರ ಬಾಲಕಿಯನ್ನು ಅಮ್ಮ ಮಾಡಿದ್ದ ಸೋದರಮಾವನ ಸೆರೆ

Bangalore Nelamangala 12-year old girl gives birth to baby boy accused Naveen arrested,
ನೆಲಮಂಗಲ, ಸೆಪ್ಟೆಂಬರ್ 25: ಮೂರು ದಿನಗಳ ಹಿಂದೆ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಹುಟ್ಟಿಗೆ ಕಾರಣೀಭೂತನಾದ ಯುವಕನ ವಿರುದ್ಧ ಪೋಷಕರು ದೂರು ಸಲ್ಲಿಸಿದ್ದು, ಯುವಕನನ್ನು ಬಂಧಿಸಲಾಗಿದೆ.

ಘಟನೆಯಿಂದ ಇಡೀ ನಾಗರಿಕ ಜಗತ್ತು ಆಘಾತಗೊಂಡಿರುವ ಸಂದರ್ಭದಲ್ಲಿ ತುಮಕೂರಿನ ಕ್ಯಾತ್ಸಂದ್ರದ ಪೊಲೀಸರು ಅತ್ಯಾಚಾರ ಆರೋಪದಡಿ 23 ವರ್ಷದ ನವೀನನ್ನು ಬಂಧಿಸಿದ್ದಾರೆ. ಅಂದಹಾಗೆ ಬಾಧಿತ ಬಾಲಕಿ ನವೀನನ ಸ್ವಂತ ಅಕ್ಕನ ಮಗಳು.

ಆದರೆ ನವೀನ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನಾದರೂ 'ಒಪ್ಪಿಗೆ/ಸಹಮತದ ಮೇರೆಗೆ' ತಾವಿಬ್ಬರೂ ಕೂಡಿದ್ದಾಗಿ ತಿಳಿಸಿದ್ದಾನೆ. ಆದರೆ ಕಾನೂನಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಜತೆ ದೈಹಿಕ ಸಂಪರ್ಕ ಬೆಳೆಸುವುದು ಅಪರಾಧವಾಗುತ್ತದೆ. ಜತೆಗೆ ಅಂತಹ ಬಾಲಕಿಯ ಜತೆ 'ಸಹಮತ ಸೆಕ್ಸ್' ನಡೆಸುವುದೂ ಅಪರಾಧವಾಗುತ್ತದೆ.

ಈ ಮಧ್ಯೆ, ಬಾಧಿತ ಬಾಲಕಿಯ ತಾಯಿ ಮಗಳ ಭವಿಷ್ಯದ ಹಿತದೃಷ್ಟಿಯಿಂದ ತಮ್ಮ ನವೀನನೊಂದಿಗೆ ಮಗಳ ಮದುವೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲವಾಗಿದ್ದು ಬಾಲಕಿ ಇನ್ನೂ ಅಪ್ರಾಪ್ತ ವಯಸ್ಸಿನವಳಾಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+