B Khata: ಬಿ ಖಾತಾ ಆಸ್ತಿಗಳಿಗೆ ಬಂಗಾರದ ಬೆಲೆ ಸೇರಿ 5 ಲಾಭಗಳು
ಕರ್ನಾಟಕ ಸರ್ಕಾರವು ಬಿ ಖಾತಾ ಆಸ್ತಿಗಳಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ಎ - ಖಾತಾದಿಂದ ಬಿ ಖಾತಾ ಪರಿವರ್ತನೆಯು ಇದೀಗ ರಾಜ್ಯದಾದ್ಯಂತ ವಿಸ್ತರಣೆ ಆಗಿದೆ. ಇದರಿಂದ ದಶಕಗಳಿಂದಲೂ ಬಿ ಖಾತಾದಿಂದ ಎ ಖಾತಾಗೆ ಆಸ್ತಿಗಳನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಕಾಯುತ್ತಿದ್ದ ಲಕ್ಷಾಂತರ ಜನ ಆಸ್ತಿದಾರರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಎ ಖಾತಾಗೆ ಸಿಗುತ್ತಿದ್ದ ಸೇವೆಗಳೆಲ್ಲವೂ ಬಿ ಖಾತಾದ ಆಸ್ತಿಗಳಿಗೂ ಸಿಗಲಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆ ವಿಚಾರದಲ್ಲಿ ಕೊನೆಗೂ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಮೊದಲು ಆಸ್ತಿಗಳಿಗೆ ಇ ಖಾತಾ ಪರಿಚಯಿಸಲಾಗಿತ್ತು. ಇದಾದ ನಂತರ ಕರ್ನಾಟಕದಾದ್ಯಂತ ಆಸ್ತಿಗಳಿಗೆ ಇ ಖಾತಾ ಸೇವೆ ಹಾಗೂ ಇ ಖಾತಾ ಕಡ್ಡಾಯ ಮಾಡಲಾಗಿತ್ತು. ಎ ಖಾತಾದಿಂದ ಬಿ ಖಾತಾ ಪರಿವರ್ತನೆಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ಮೊದಲು ಬೆಂಗಳೂರಿನಲ್ಲಿ ಬಿ ಖಾತಾ ಪರಿಚಯಿಸಲಾಗಿತ್ತು. ಇದಾದ ನಂತರ ಕರ್ನಾಟಕದಾದ್ಯಂತ ಬಿ ಖಾತಾ ಸೇವೆಯನ್ನು ವಿಸ್ತರಿಸಲಾಗಿದೆ.

ಕರ್ನಾಟಕದ 10 ಲಕ್ಷ ಆಸ್ತಿಗಳಿಗೆ ಅನುಕೂಲ
ಇನ್ನು ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಎ ಖಾತಾದಿಂದ ಬಿ ಖಾತಾ ಪರಿವರ್ತನೆಗೆ ಅವಕಾಶ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ ಕರ್ನಾಟಕದ ಅಂದಾಜು 10 ಲಕ್ಷ ಬಿ ಖಾತಾ ಆಸ್ತಿದಾರರಿಗೆ ಲಾಭವಾಗಲಿದೆ. ಆಸ್ತಿ ಇದ್ದರೂ ಮಾರಾಟ ಮಾಡಲೂ ಸಾಧ್ಯವಾಗದೆ, ಕಟ್ಟಡ ನಿರ್ಮಾಣ ಮಾಡುವುದಕ್ಕೂ ಸಾಧ್ಯವಾಗದೆ ಪರದಾಡುತ್ತಿದ್ದ ಲಕ್ಷಾಂತರ ಜನ ಆಸ್ತಿದಾರರಿಗೆ ಇನ್ಮುಂದೆ ನಿರಾಳತೆ ಸಿಗಲಿದೆ. ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ನೀಡುವ ಮಾದರಿಯಲ್ಲೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಬಿ ಖಾತಾದಿಂದ ಎ ಖಾತಾ ಸಿಗಲಿದೆ.
ಬಿ ಖಾತಾ ಸರ್ಕಾರದ ನಿರ್ಧಾರದಿಂದ ಲಾಭವೇನು
ಇನ್ನು ರಾಜ್ಯ ಸರ್ಕಾರವು ಈಗ ತೆಗೆದುಕೊಂಡಿರುವ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಅನುಮೋದನೆಯಿಂದ ಆಸ್ತಿದಾರರಿಗೆ ಹಲವು ಲಾಭಗಳು ಆಗಲಿವೆ. ಅದರ ಪ್ರಮುಖ ಅಂಶಗಳು ಇಲ್ಲಿವೆ.
1. ಅನಧಿಕೃತ ಬಡಾವಣೆಗಳು ಕಾನೂನು ವ್ಯಾಪ್ತಿಗೆ ಬರಲಿವೆ.
2. ಬಿ ಖಾತಾದ ಆಸ್ತಿಗಳ ಮಾರಾಟ (ಎ ಖಾತಾಗೆ ಪರಿವರ್ತನೆ ಆದ ಮೇಲೆ) ಹಾಗೂ ಖರೀದಿ ಸುಲಭವಾಗಲಿದೆ.
3. ಈಗ ಇರುವ ಬಿ ಖಾತಾಗಳ ಆಸ್ತಿ ಮೌಲ್ಯವು ಹೆಚ್ಚಳವಾಗಲಿದೆ.
4. ಮುಂದಿನ ದಿನಗಳಲ್ಲಿ ವಿದ್ಯುತ್, ನೀರಿನ ಸಂಪರ್ಕ ಪಡೆದುಕೊಳ್ಳುವುದು ಸುಲಭವಾಗಲಿದೆ.
5. ಕಟ್ಟಡಗಳ ನಿರ್ಮಾಣಕ್ಕೆ ಇರುವ ಸಮಸ್ಯೆಗಳು ಪರಿಹಾರವಾಗಲಿದೆ.
6. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಗಲಿದೆ.
ಎ - ಖಾತಾ ಎಂದರೇನು, ಇದರ ಪ್ರಾಮುಖ್ಯತೆ ಏನು
1. ಎ ಖಾತಾ ಎನ್ನುವುದು ಆಸ್ತಿ ಕಾನೂನು ಬದ್ಧವಾಗಿದೆ ಎಂದು ತೋರಿಸುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಿದ್ದಾರೆ ಎನ್ನುವುದನ್ನು ಪ್ರಮಾಣೀಕರಿಸುವ ದಾಖಲೆ ಎಂದು ಪರಿಗಣಿಸಲಾಗುತ್ತದೆ.
2. ಎ - ಖಾತಾ ಇದ್ದರೆ ಆ ಕಟ್ಟಡಗಳನ್ನು ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿದೆ. ಸರಿಯಾಗಿ ತೆರಿಗೆ ದಾಖಲೆಗಳನ್ನು ಹೊಂದಿರುವ ಆಸ್ತಿ ಎಂದು ಮಾನ್ಯತೆ ಪಡೆಯಲಿದೆ.
3. ಎ ಖಾತಾ ಇದ್ದರೆ ಆಸ್ತಿ ಮಾಲೀಕರು ಕಟ್ಟಡ ಪರವಾನಗಿಗಳು, ವ್ಯಾಪಾರ ಪರವಾನಗಿಗಳು ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನಲ್ಲಿ ಸಾಲ ಹಾಗೂ ಸರ್ಕಾರದ ಸೌಲಭ್ಯಗಳು ಸಿಗುತ್ತವೆ.
ಬಿ ಖಾತಾ ಎಂದರೇನು, ಬಿ - ಖಾತೆ ಇದ್ದರೆ ಸಂಕಷ್ಟವೇಕೆ
1. ಬಿ ಖಾತಾ ಎಂಬುದು ಅಕ್ರಮ ಅಥವಾ ಅರೆ-ಕಾನೂನು ಆಸ್ತಿ ಅಥವಾ ನಿವೇಶನ ಎಂದು ಪರಿಗಣಿಸಲಾಗುತ್ತದೆ.
2. ಅನುಮೋದನೆಗಳಿಗಾಗಿ ಬಾಕಿ ಉಳಿಸಲಾಗಿರುವ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಯಲ್ಲಿ ತರಲಾಗಿದೆ.
3. 2014ರಲ್ಲಿ ಕರ್ನಾಟಕ ಹೈಕೋರ್ಟ್ ಬಿ ಖಾತಾ ಆಸ್ತಿಗಳನ್ನು ಕಾನೂನುಬಾಹಿರ ಎಂದು ಹೇಳಿತ್ತು.
4. ಅನಧಿಕೃತ ನಿವೇಶನ ಹಾಗೂ ಬಡಾವಣೆಗಳನ್ನು ಬಿ ಖಾತಾ ವ್ಯಾಪ್ತಿಗೆ ತರಲಾಗಿದೆ.












Click it and Unblock the Notifications