ಆಟೋ ಗ್ಯಾಸ್ ದರ ಹೆಚ್ಚಳ, ಚಾಲಕರಿಗೆ ಶಾಕ್

auto
ಬೆಂಗಳೂರು, ಜ. 1 : ಆಟೋ ಚಾಲಕರಿಗೆ ಸರ್ಕಾರ ಹೊಸ ವರ್ಷಕ್ಕೆ ಶಾಕ್ ನೀಡಿದ್ದು, ಆಟೋ ಗ್ಯಾಸ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಡಿ.31ರಂದು ಸರ್ಕಾರ ಹೊರಡಿಸಿರುವ ಆದೇಶದಂತೆ ಗ್ಯಾಸ್ ದರ 11.50 ರೂ ಹೆಚ್ಚಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಆಟೋರಿಕ್ಷಾ ಪ್ರಯಾಣದರ ಹೆಚ್ಚಳ ಮಾಡುವ ಮೂಲಕ ಚಾಲಕರಿಗೆ ಕೊಡುಗೆ ನೀಡಿದ್ದ ಸರ್ಕಾರ, ಗ್ಯಾಸ್ ದರ ಹೆಚ್ಚಳ ಮಾಡುವ ಮೂಲಕ ಅವರಿಗೆ ಶಾಕ್ ನೀಡಿದೆ. ಡಿ.31ರ ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬಂದಿವೆ. [ಆಟೋ ದರದಲ್ಲಿ ಮತ್ತೆ ಏರಿಕೆ: ಡಿಸೆಂಬರ್ 20ರಿಂದ ಹೊಸ ದರ]

ಸರ್ಕಾರದ ಆದೇಶದ ಪ್ರಕಾರ ಆಟೋ ಗ್ಯಾಸ್ ದರ 11.50 ರೂ. ಏರಿಕೆಯಾಗಿದೆ. ಇದರಿಂದ ಪ್ರತಿ ಲೀಟರ್ ಗೆ 55 ರೂ ಇದ್ದ ಗ್ಯಾಸ್ ದರ, 66.50ಕ್ಕೆ ಏರಿಕೆಯಾಗಿದೆ. ಸರ್ಕಾರ ದಿಢೀರ್ ದರ ಏರಿಕೆ ಮಾಡಿರುವುದು ಬೆಂಗಳೂರಿನ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ನಿರ್ಧಾರ ಖಂಡಿಸಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸಲು ಅವರು ತೀರ್ಮಾನಿಸಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಗ್ಯಾಸ್ ದರವನ್ನು 4ರೂ ಹೆಚ್ಚಳ ಮಾಡಲಾಗಿತ್ತು. ಸದ್ಯ ವರ್ಷಾರಂಭದಲ್ಲಿಯೇ ದರ ಏರಿಕೆ ಮಾಡಿರುವುದರಿಂದ ಚಾಲಕರು ಅಸಮಾಧಾನಗೊಂಡಿದ್ದಾರೆ.ಆಟೋ ಪ್ರಯಾಣ ದರ ಹೆಚ್ಚಳ ಮಾಡಿ ಎಂಬ ಚಾಲಕರ ಒತ್ತಾಯಕ್ಕೆ ಮಣಿದಿದ್ದ ಸರ್ಕಾರ, ಕನಿಷ್ಠ ಪ್ರಯಾಣ ದರವನ್ನು 20ರಿಂದ 25ಕ್ಕೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ದರ ಏರಿಕೆ ಮಾಡಿದೆ.

ಆಟೋ ಗ್ಯಾಸ್ ದರವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಆಟೋ ಚಾಲಕರು ಮತ್ತೊಮ್ಮೆ ಪ್ರಯಾಣ ದರ ಏರಿಕೆ ಮಾಡಿ ಎಂಬ ಬೇಡಿಕೆ ಮುಂದಿಡಬಹುದಾಗಿದೆ. ಇದರಿಂದ ಮತ್ತೊಮ್ಮೆ ಆಟೋ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+