New Pension Scheme: ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದವರ ಗಮನಕ್ಕೆ
ಬೆಂಗಳೂರು, ಏಪ್ರಿಲ್. 12: ಹೊಸ ಪಿಂಚಣಿ ಯೋಜನೆ ಬದಲಾಗಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವುದಾಗಿ ಸರ್ಕಾರ ಹೇಳುತ್ತಿದೆ. ಇದರ ಬೆನ್ನಲ್ಲೇ ಹೊಸದಾಗಿ ಸರ್ಕಾರಿ ಉದ್ಯೋಗಕ್ಕೆ ಸೇರಿರುವ ಉದ್ಯೋಗಿಗಳಿಗಾಗಿ ನೂತನ ಪಿಂಚಣಿ ಯೋಜನೆ ಘಟಕವು ಪ್ರಾನ್ (PRAN) ಪಡೆಯಲು ಪ್ರಾನ್ ಎಸ್-1 ನೋಂದಣಿ ಮಾಡುವುದು ಕಡ್ಡಾಯ ಎಂದು ಸೂಚನೆ ಹೊರಡಿಸಿದೆ.
ಹೊಸದಾಗಿ ಸೇವೆಗೆ ಸೇರುವ ಸಿಬ್ಬಂದಿ/ ಅಧಿಕಾರಿಗಳಿಗೆ ಪ್ರಾನ್ ಸಂಖ್ಯೆಯನ್ನು ಸಿ.ಆರ್.ಎ ಅವರಿಂದ ಹಂಚಿಕೆ ಮಾಡಲು S-1 ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಹೆಚ್.ಆರ್.ಎಂ.ಎಸ್ ಹಾಗೂ ಖಜಾನೆ-2 ರಲ್ಲಿ ತಂತ್ರಾಂಶಗಳಲ್ಲಿ ಅಳವಡಿಸಲಾಗುತ್ತಿದ್ದು, ಇನ್ನು ಮುಂದೆ S-1 ರಿಜಿಸ್ಟ್ರೇಷನ್ ಅನ್ನು ಡಿಡಿಓಗಳು ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡುವುದು ಕಡ್ಡಾಯವಾಗಿರುತ್ತದೆ.

ಆನ್‌ಲೈನ್‌ನಲ್ಲಿ 5-1 ರಿಜಿಸ್ಟ್ರೇಷನ್ ಮಾಡಿದ್ದಲ್ಲಿ ಎರಡು ದಿನಗಳಲ್ಲಿ ಡಿಡಿಓಗಳಿಗೆ ಪ್ರಾನ್ ಸಂಖ್ಯೆ ಲಭ್ಯವಾಗುತ್ತದೆ. ಇದರಿಂದಾಗಿ ಹೊಸದಾಗಿ ಸೇವೆಗೆ ಸೇರಿದ್ದ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ಮೊದಲ ವೇತನವನ್ನು ಪಾವತಿಸಬಹುದಾಗಿದ್ದು ಈವರೆಗೆ ಮೊದಲ ವೇತನ ಪಾವತಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಬಹುದಾಗಿರುತ್ತದೆ.
ಡಿಡಿಓಗಳು S-1 ಅನ್ನು ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಜನರೇಟ್ ಮಾಡಿ ಖಜಾನೆ-2 ರ ಡಿಡಿಓ ಲಾಗಿನ್ ಗೆ ಕಳಿಸಬೇಕು. ಖಜಾನೆ-2 ಡಿಡಿಓ ಲಾಗಿನ್ ನಿಂದ ಖಜಾನೆ-2 ಟ್ರೆಜರಿ ಲಾಗಿನ್ ಗೆ S-1 ಅನ್ನು ಕಳಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆನ್‌ಲೈನ್‌್ನಲ್ಲಿ S-1 ಫಾರಂ ಅನ್ನು ಖಜಾನೆಗೆ ಸಲ್ಲಿಸಿದ ನಂತರ 5-1 ನ ಪ್ರತಿಯನ್ನು ಸಹಿ ಮಾಡಿ ತಪ್ಪದೇ ವೇತನ ಪಡೆಯುವ ಖಜಾನೆಗೆ ಸಲ್ಲಿಸಬೇಕು.
ಈ ರೀತಿ ಡಿಡಿಓಗಳಿಂದ ಪಡೆದ S-1 ಪ್ರತಿಯನ್ನು ಫಿಸಿಲಿಟೇಷನ್ ಸೆಂಟರ್ ಮೂಲಕ ಸಿ.ಆರ್.ಎ ಗೆ ತಲುಪಿಸಲು ಕ್ರಮಕೈಗೊಳ್ಳಬೇಖು. ಆನ್‌ಲೈನ್‌ನ ನಲ್ಲಿ S-1 ಜನರೇಟ್ ಮಾಡುವ ಸಮಯದಲ್ಲಿ ಏನಾದರೂ ವ್ಯತ್ಯಯವಾದರೆ ಎನ್.ಪಿ.ಎಸ್ ಘಟಕವನ್ನು ಸಂಪರ್ಕಿಸಬೇಕು ಎಂದು ಖಜಾನೆ ಆಯುಕ್ತರು ತಿಳಿಸಿದ್ದಾರೆ.

NPS ನಲ್ಲಿ PRAN ಎಂದರೇನು?
PRAN ಅಥವಾ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯು ನೂತನ ಪಿಂಚಣಿ ಯೋಜನೆ (NPS) ಯಲ್ಲಿ ನೋಂದಾಯಿಸಲಾದ ವ್ಯಕ್ತಿಗಳಿಗೆ ನೀಡುವ 12 ಅಂಕಿಯ ವಿಶಿಷ್ಟ ಸಂಖ್ಯೆಯಾಗಿದೆ. ಇದು ಪ್ರತಿ NPS ಚಂದಾದಾರರಿಗೆ ನೀಡಲಾದ ವಿಶಿಷ್ಟ ಸಂಖ್ಯೆಯಾಗಿದ್ದು, ಒಬಬ್ರ ಬಳಿ ಎರಡು PRAN ಸಂಖ್ಯೆಗಳು ಇರಲು ಸಾಧ್ಯವಿಲ್ಲ. ಇದು ಸರ್ಕಾರಿ ಉದ್ಯೋಗಿಗಳ ಉಳಿತಾಯದ ಸಮರ್ಥ ಟ್ರ್ಯಾಕಿಂಗ್ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಎರಡೂ NPS ಖಾತೆಗಳಿಗೆ PRAN ಸಂಖ್ಯೆ ಒಂದೇ ಆಗಿರುತ್ತದೆ. ಎರಡು ರೀತಿಯ ಎನ್‌ಪಿಎಸ್ ಖಾತೆಗಳಿವೆ. ಅವುಗಳೆಂದರೆ ಶ್ರೇಣಿ 1 ಮತ್ತು ಶ್ರೇಣಿ 2.
* ಶ್ರೇಣಿ 1 ಖಾತೆ: ಇದು 60 ವರ್ಷಗಳ ನಿಶ್ಚಿತ ಲಾಕ್ ಇನ್ ಅವಧಿಯೊಂದಿಗೆ ಪೂರ್ವನಿಯೋಜಿತ NPS ಖಾತೆಯಾಗಿದೆ ಮತ್ತು ತೆರಿಗೆ ಕಡಿತಕ್ಕೆ ಅರ್ಹವಾಗಿದೆ.
* ಶ್ರೇಣಿ 2 ಖಾತೆ: ಇದು ಯಾವುದೇ ತೆರಿಗೆ ಪ್ರಯೋಜನಗಳನ್ನು ಹೊಂದಿರದ ಸ್ವಯಂಪ್ರೇರಿತ ಉಳಿತಾಯ ಖಾತೆಯಾಗಿದೆ. ಇದು ಸಾಮಾನ್ಯ ಉಳಿತಾಯ ಖಾತೆಯಂತಿದೆ. ನೀವು ಯಾವಾಗ ಬೇಕಾದರೂ ನಿಮ್ಮ ಹಣವನ್ನು ಹಿಂಪಡೆಯಬಹುದು.
ಡಿಸೆಂಬರ್ 31, 2023 ರ ವರದಿಯಂತೆ 17 ಮಿಲಿಯನ್‌ಗಿಂತಲೂ ಹೆಚ್ಚು ಎನ್‌ಪಿಎಸ್ ಚಂದಾದಾರರು ಇದ್ದಾರೆ. ಈ ಉದ್ಯೋಗಿಗಳನ್ನು ಗುರುತಿಸಲು PRAN (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ) ಮೂಲಕ ಸಾಧ್ಯವಾಗಿದೆ. PRAN ಒಂದು ಅನನ್ಯ ಗುರುತಿಸ ಸಂಖ್ಯೆಯಾಗಿದ್ದು, ಎಲ್ಲಾ NPS ಖಾತೆಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ.












Click it and Unblock the Notifications