ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?

|
Google Oneindia Kannada News

ಬೆಂಗಳೂರು, ಏಪ್ರಿಲ್, 12: ರಾಜ್ಯದ ಜಾತಿ ಗಣತಿಯ ಪ್ರಾಥಮಿಕ ವರದಿ ಸೋರಿಕೆಯಾಗಿದೆ. ಸೋರಿಕೆಯಾದ ವರದಿ ಪ್ರಕಾರ ದಲಿತರು ಮೊದಲನೇ ಸ್ಥಾನದಲ್ಲಿದ್ದರೆ, ಮುಸ್ಲಿಮರಿಗೆ ಎರಡನೇ ಸ್ಥಾನ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಲಿಂಗಾಯತ, ಒಕ್ಕಲಿಗ ಮತ್ತು ಕುರುಬ ಸಮುದಾಯದವರು ಇದ್ದಾರೆ.

2015ನೇ ಸಾಲಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಡೆಸಿದ ಜಾತಿಗಣತಿಯ ವರದಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ವರದಿ ಸೋರಿಕೆಯಾಗಿಲ್ಲ. ಇನ್ನು ಕೆಲ ಮಾಹಿತಿಗಳನ್ನು ಕಲೆಹಾಕಬೇಕಾಗಿದ್ದು ಸಂಪೂರ್ಣ ವರದಿ ತಯಾರಾಗಿಲ್ಲ ಎಂಬುದು ಸರ್ಕಾರದ ಹೇಳಿಕೆ.[ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಶಿವಸೇನೆ ಹೇಳಿದ್ದೇನು?]

karnataka

ಹೊಸ ಅಂಕಿ ಅಂಶಗಳು ಹೇಳುವ ಮಾಹಿತಿ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಲಿಂಗಾಯತರ ಸ್ಥಾನವನ್ನು ದಲಿತರು ಕಸಿದುಕೊಂಡಿದ್ದಾರೆ. ಶೇ. 12.5 ರಷ್ಟಿರುವ ಮುಸಲ್ಮಾನರು ಎರಡನೇ ಸ್ಥಾನ ಗಳಿಸಿಕೊಂಡಿದ್ದಾರೆ. ಲಿಂಗಾಯತರು ಶೇ. 9.83 ಮತ್ತು ಒಕ್ಕಲಿಗರು ಶೇ. 8.16 ರಷ್ಟಿದ್ದಾರೆ ಎಂದು ಹೊಸ ಗಣತಿಯ ದಾಖಲೆಗಳು ಹೇಳುತ್ತಿವೆ.["ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿವರೆಗೆ ಭಯೋತ್ಪಾದನೆ ಇರುತ್ತೆ"]

180 ಉಪ ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಜಾತಿ ಜನಸಂಖ್ಯೆ 1.08 ಕೋಟಿ ಮತ್ತು 84 ಉಪ ಜಾತಿಗಳನ್ನು ಒಳಗೊಂಡ ಮುಸ್ಲಿಂ ಸಮುದಾಯ 75 ಲಕ್ಷ ಜನಸಂಖ್ಯೆ ಹೊಂದಿದೆ ಎಂದು ಹೇಳಲಾಗಿದೆ. 42ಕ್ಕೂ ಹೆಚ್ಚು ಉಪ ಜಾತಿಗಳನ್ನು ಒಳಗೊಂಡ ಲಿಂಗಾಯತರ ಸಂಖ್ಯೆ ಸುಮಾರು 59 ಲಕ್ಷವಿದೆ. 10ಕ್ಕೂ ಹೆಚ್ಚು
ಉಪ ಜಾತಿಗಳನ್ನು ಒಳಗೊಂಡ ಒಕ್ಕಲಿಗರ ಸಂಖ್ಯೆ 49 ಲಕ್ಷ.[ ಈ ಅಜ್ಜಿ ಹೇಳಿದ ಭವಿಷ್ಯ ಸುಳ್ಳಾಗಿದ್ದೆ ಇಲ್ಲ]

ಇನ್ನು ಕುರುಬರು 43.50 ಲಕ್ಷ, 105 ಉಪ ಜಾತಿಗಳನ್ನು ಒಳಗೊಂಡ ಪರಿಶಿಷ್ಟ ಪಂಗಡದವರು 42 ಲಕ್ಷ, ಬ್ರಾಹ್ಮಣರು 13 ಲಕ್ಷ, ಈಡಿಗ ಸಮುದಾಯದವರು 14 ಲಕ್ಷ, ಬೇಡಜಂಗಮರು ಸುಮಾರು 3 ಲಕ್ಷದಷ್ಟಿದ್ದಾರೆ ಎಂಬುದು ಅಂಕಿ ಅಂಶ.

ಆದರೆ ಸೋರಿಕೆಯಾದ ಅ೦ಕಿ-ಸ೦ಖ್ಯೆಯನ್ನು ಸಮಾಜ ಕಲ್ಯಾಣ ಸಚಿವ ಆ೦ಜನೇಯ ಹಾಗೂ ರಾಜ್ಯ ಹಿ೦ದುಳಿದ ವಗ೯ಗಳ ಆಯೋಗದ ಅಧ್ಯಕ್ಷ ಕಾ೦ತರಾಜ್ ಅಲ್ಲಗಳೆದಿದ್ದಾರೆ. ಸಮೀಕ್ಷೆ ಸ೦ಪೂಣ೯ವಾಗಿ ಮುಗಿದಿದೆಯಾದರೂ ಅ೦ಕಿ-ಸ೦ಖ್ಯೆ ಕ್ರೋಢಿಕರಣ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.

ಜಾತಿ ಗಣತಿ ಅಂತಿಮ ಲೆಕ್ಕಾಚಾರ
* ಕರ್ನಾಟಕದ ಒಟ್ಟು ಜನಸಂಖ್ಯೆ- 6.11 ಕೋಟಿ
* ದಲಿತರು- 1.8 ಕೋಟಿ(285 ಉಪ ಜಾತಿ)
* ಮುಸಲ್ಮಾನರು- 75 ಲಕ್ಷ(84 ಉಪಜಾತಿ)
* ಲಿಂಗಾಯತರು-59 ಲಕ್ಷ( 42 ಉಪ ಜಾತಿ)
* ಒಕ್ಕಲಿಗರು-49ಲಕ್ಷ (10 ಉಪಜಾತಿ)
* ಈಡಿಗರು-14 ಲಕ್ಷ
* ಬ್ರಾಹ್ಮಣರು-13 ಲಕ್ಷ
* ಮಾದಿಗರು-33 ಲಕ್ಷ
* ಛಲವಾದಿ-29 ಲಕ್ಷ
* ವಾಲ್ಮೀಕಿ-33 ಲಕ್ಷ

English summary
A leak of Karnataka caste survey data has busted the myth that the politically dominant Lingayats and Vokkaligas formed the second and third largest groups in the state, after dalits. According to the new data, Muslims are the second largest group, constituting 12.5% of the state's population. Lingayats are 9.83% and Vokkaligas 8.16% of the total numbers. But Social Welfare Minister H Anjaneya rejects this report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X