ಅಚ್ಚರಿಯಾದರೂ ಸತ್ಯ, ಜೆಡಿಎಸ್ ಅಭ್ಯರ್ಥಿಗೆ ಖೇಣಿ ಬೆಂಬಲ!

Posted By:
Subscribe to Oneindia Kannada

ಬೆಂಗಳೂರು, ಮೇ 28 : 'ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ' ಎಂಬ ಮಾತು ಆಗಾಗ ಕೇಳಿಬರುತ್ತದೆ. ನೈಸ್ ಯೋಜನೆ ವಿವಾದಲ್ಲಿ ಗೌಡರ ವಿರುದ್ಧ ಗುಡುಗುವ ಅಶೋಕ್ ಖೇಣಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಉದ್ಯಮಿ ಬಿ.ಎಂ.ಫಾರೂಕ್ ಅವರಿಗೆ ಟಿಕೆಟ್ ನೀಡಿದೆ. ಶನಿವಾರ ಫಾರೂಕ್ ಅವರು ನಾಮಪತ್ರವನ್ನು ಸಲ್ಲಿಸಿದರು. ಫಾರೂಕ್ ಅವರ ನಾಮಪತ್ರಕ್ಕೆ ಕರ್ನಾಟಕ ಮಕ್ಕಳ ಪಕ್ಷದ ಅಧ್ಯಕ್ಷ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ಸೂಚಕರಾಗಿ ಸಹಿ ಹಾಕಿದ್ದಾರೆ. [ಕಾಂಗ್ರೆಸ್ ಬೆಂಬಲಿಸುವ ಜಮೀರ್ ಅಹಮದ್ ತಂತ್ರ ಅತಂತ್ರ!]

ashok kheny

ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಟ ಹತ್ತು ಜನ ಹಾಲಿ ಶಾಸಕರು ಸೂಚಕರಾಗಿ ಸಹಿ ಮಾಡಬೇಕು. ಫಾರೂಕ್ ಅವರ ನಾಮಪತ್ರಕ್ಕೆ ಖೇಣಿ ಸಹಿ ಹಾಕಿದ್ದು, ಅವರ ನಡೆ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.[ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ]

ಬಿ.ಎಂ.ಫಾರೂಕ್ ಯಾರು? : ಉದ್ಯಮಿ ಬಿ.ಎಂ.ಫಾರೂಕ್ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎ.ಮೊಯಿದ್ದಿನ್ ಬಾವಾ ಅವರ ಸಹೋದರ. ಬೆಂಗಳೂರಿನ ಬ್ಯಾರೀಸ್ ವೆಲೆಧೀರ್ ಅಸೋಸಿಯೇಶನ್‌ನ ಅಧ್ಯಕ್ಷರು. [ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ ಜಮೀರ್ ಅಂಡ್ ಟೀಂ]

bm farook

ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಅವರು ಪವನ ವಿದ್ಯುತ್, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಅಲ್ಪಸಂಖ್ಯಾತರ ಬಗ್ಗೆ ಧ್ವನಿ ಎತ್ತಲು ಮತ್ತು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅನುಕೂಲವಾಗುವಂತೆ ಅವರಿಗೆ ಟಿಕೆಟ್ ನೀಡಲಾಗಿದೆ.

ಸಹಿ ಹಾಕಿದ ಶಾಸಕರು
* ಸತೀಶ್ ಸೈಲ್ - ಕಾರವಾರ
* ಬಿ.ಆರ್.ಪಾಟೀಲ್ - ಅಳಂದ
* ಸಂಭಾಜಿ ಪಾಟೀಲ್ - ಬೆಳಗಾವಿ ದಕ್ಷಿಣ
* ಮಂಕಾಳ್ ವೈದ್ಯ - ಭಟ್ಕಳ
* ಕುಡಚಿ ರಾಜೀವ್ - ಕುಡಚಿ
* ನಾಗೇಂದ್ರ - ಕೂಡ್ಲಗಿ
* ಅರವಿಂದ ಪಾಟೀಲ್ - ಖಾನಾಪುರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major development NICE managing director and Bidar South MLA Ashok Kheny extended his support for JDS candidate B.M.Farook in Rajya Sabha election.
Please Wait while comments are loading...