ಆಳಂದ, ಸೇಡಂ, ವಾಡಿ ಪುರಸಭೆಗೆ ಅಕೌಟೆಂಟ್‌ಗಳು ಬೇಕು

ಕಲಬುರಗಿ, ನ.28 : ಕಲಬುರಗಿಯಲ್ಲಿ ಖಾಲಿ ಇರುವ ಅಕೌಂಟೆಂಟ್ ಹುದ್ದೆಗಳ ಭರ್ತಿಯಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗುತ್ತಿದೆ ಆಧಾರದಲ್ಲಿ ಕೆಲಸ ಮಾಡಲು ಬಯಸುವ ಬಿಕಾಂ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 8.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಎಂಆರ್‌ಪಿ ಯೋಜನೆಯಡಿ ನಿಧಿ ಆಧಾರಿತ ಲೆಕ್ಕ ಪದ್ಧತಿ ನಿರ್ವಹಣೆಗೆ ಆಳಂದ, ಸೇಡಂ ಮತ್ತು ವಾಡಿ ಪುರಸಭೆಯಲ್ಲಿ ಖಾಲಿ ಇರುವ ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Kalaburagi

ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ಮಾಸಿಕ 8000 ರೂ.ವೇತನ ನಿಗದಿಪಡಿಸಲಾಗಿದೆ.18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 8ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. [ನೇಮಕಾತಿ ಜಾಹೀರಾತು ಇಲ್ಲಿದೆ]

ಷರತ್ತು : ಬಿಕಾಂ ಪದವೀಧರರು ಅರ್ಜಿಯನ್ನು ಸಲ್ಲಿಬಹುದಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು ಆಳಂದ, ಸೇಡಂ ಮತ್ತು ವಾಡಿ ಪುರಸಭೆಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಈ ಹಿಂದೆ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಂದ ಅಮಾನತುಗೊಂಡ ಅಥವ ಸೇವೆ ತೃಪಿಕರವಾಗಿಲ್ಲವೆಂದು ವಜಾಗೊಂಡವರು ಅರ್ಜಿ ಸಲ್ಲಿಸುವಂತಿಲ್ಲ. [ಹೈಕೋರ್ಟ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ]

ಅರ್ಜಿ ಎಲ್ಲಿ ಸಲ್ಲಿಸಬೇಕು ?: ಅರ್ಹ ಅಭ್ಯರ್ಥಿಗಳು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ (ಕೊಠಡಿ ಸಂಖ್ಯೆ 11)ರಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಚೇರಿ ಸಮಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಾಭಿವೃದ್ಧಿ ಕೋಶದ ಪುರಸಭೆ ತಹಶೀಲ್ದಾರ್‌ಅನ್ನು ಸಂಪರ್ಕಿಸಬಹುದು.

ಅಗತ್ಯ ವಿರುವ ದಾಖಲೆಗಳು : ಬಯೋಡೆಟಾ, ವಿದ್ಯಾರ್ಹತೆಗೆ ಸಂಬಂಧ ಪಟ್ಟ ದಾಖಲಾತಿಗಳು (ದೃಡೀಕೃತ), ಪಾಸ್‌ಪೋರ್ಟ್‌ ಅಳತೆಯ ಮೂರು ಭಾವಚಿತ್ರಗಳು, ಸ್ವ-ವಿಳಾಸದ ಲಕೋಟೆ ಮೇಲೆ ರೂ. 25ರ ಅಂಚೆಚೀಟಿ ಲಗತ್ತಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+