ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ ಜ.30ರೊಳಗೆ ಅರ್ಜಿ ಹಾಕಿ
ಕಲಬುರಗಿ, ಜ.27 : ಕಲಬುರಗಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಖಾಲಿಯಿರುವ ಒಂದು ಅಧೀಕ್ಷಕರ ಹುದ್ದೆಯ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 30.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವೆಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ 65 ವರ್ಷದೊಳಗಿನ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಗೌರವಧನದ ಆಧಾರದ ಮೇಲೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿದೆ.

ಆಯ್ಕೆಯಾದ ನೌಕರರಿಗೆ ಮಾಸಿಕವಾಗಿ 10,000 ರೂ. ಗೌರವಧನ ನೀಡಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಕೆಪಿಎಸ್ ಸಿ ಭರ್ತಿ ಮಾಡುವ 440 ಹುದ್ದೆಗಳ ವಿವರ ಇಲ್ಲಿದೆ]
ಅರ್ಜಿ ಸಲ್ಲಿಸುವವರಯ ಅರ್ಜಿಯೊಂದಿಗೆ ಜನ್ಮ ದಾಖಲೆ, ಸರ್ಕಾರಿ ನೌಕರರಾಗಿ ನಿವೃತಿ ಹೊಂದಿರುವ ಬಗ್ಗೆ ದಾಖಲೆ ಪ್ರಮಾಣ ಪತ್ರ, ವಿವಿಧ ಇಲಾಖೆಗಳಲ್ಲಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ ವಿವರ, ಅಧೀಕ್ಷಕರ ಹುದ್ದೆಯಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರುವ ಸ್ವಯಂ ಧೃಡೀಕರಣ ಪತ್ರವನ್ನು ನೀಡಬೇಕು. [ನ್ಯಾಷನಲ್ ಇನ್ಸುರೆನ್ಸ್ ಕಂಪೆನಿಯಲ್ಲಿ ಕೆಲಸ ಖಾಲಿ ಇದೆ]
ಸರ್ಕಾರಿ ಸೇವೆಯ ರಹಸ್ಯ ವರದಿಯಲ್ಲಿ ಯಾವುದೇ ರೀತಿ ವ್ಯತಿರಿಕ್ತ ಷರಾಗಳು ಇರಲಾರದ ಕುರಿತು ಸ್ವಯಂ ಧೃಡೀಕರಣ ಪತ್ರ ಮತ್ತು ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯಾಧಿಕಾರಿಯಿಂದ ಪಡೆದ ಪ್ರಮಾಣಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಿ ಜನವರಿ 30 ರೊಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ, ಕಲಬುರಗಿ-585101.












Click it and Unblock the Notifications