81 ವಲಯ ಅರಣ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ
ಬೆಂಗಳೂರು, ನ.25 : ಕರ್ನಾಟಕ ಅರಣ್ಯ ಇಲಾಖೆ 81 ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಹುದ್ದೆಗಳ ಭರ್ತಿಯಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 19.
ಅರ್ಹ ಅಭ್ಯರ್ಥಿಗಳನ್ನು ಸ್ಮರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಬಿ.ಎಸ್.ಸಿ. (ಅರಣ್ಯ ಶಾಸ್ತ್ರ)/ವಿಜ್ಞಾನ/ಇಂಜಿಯರಿಂಗ್ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. [ಅರ್ಜಿ ಭರ್ತಿ ಮಾಡುದು ಹೇಗೆ]

ಎಸ್‌ಸಿ/ಎಸ್‌ಟಿ/ಕೆಟಗರಿ 1ರ ಅಭ್ಯರ್ಥಿಗಳಿಗೆ 32 ವರ್ಷ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಉಳಿದವರಿಗೆ 27 ವರ್ಷದ ವಯೋಮಿತಿಯನ್ನು ನಿಗದಿಗೊಳಿಲಾಗಿದೆ. [ಡಿ.12ರಂದು ವಾಯುಪಡೆಗೆ ನೇಮಕಾತಿ]
ಸಾಮಾನ್ಯ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು ರೂ.100 + ರೂ. 12 (ಸೇವಾತೆರಿಗೆ) ಯನ್ನು ಅರ್ಜಿಯೊಂದಿಗೆ ಪಾವತಿ ಮಾಡಬೇಕಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಕೆಟಗರಿ 1ರ ಅಭ್ಯರ್ಥಿಗಳು ರೂ.50 ಮತ್ತು 12 ರೂ. ಸೇವಾಶುಲ್ಕವನ್ನು ಅರ್ಜಿಯೊಂದಿಗೆ ಪಾವತಿಸಬೇಕು.
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಡಿಸೆಂಬರ್ 19ರ ತನಕ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು.












Click it and Unblock the Notifications