• search
For Quick Alerts
ALLOW NOTIFICATIONS  
For Daily Alerts

  ಕೋಲಾರ ಲೋಕಸಭೆಯ ಈ ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆ ಗೆದ್ದವರು ಸತತವಾಗಿ ಇನ್ನೊಮ್ಮೆ ಗೆದ್ದಿದ್ದೇ ಇಲ್ಲ

  |

  ಕರ್ನಾಟಕ ಅಸೆಂಬ್ಲಿ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಿ ನೋಡಿದರಲ್ಲಿ ರಿಸಲ್ಟ್ ಬಗ್ಗೆ ಬಿಸಿಬಿಸಿ ಚರ್ಚೆ, ಬೆಟ್ಟಿಂಗ್. ತಮ್ಮದೇ ಲೆಕ್ಕಾಚಾರವನ್ನು ಹಿಡಿದುಕೊಂಡು ಕುರಿಯಿಂದ ಹಿಡಿದು ಆಸ್ತಿಪಾಸ್ತಿಯನ್ನು ಜೂಜಿಗಿಡುತ್ತಿರುವುದೂ ವರದಿಯಾಗಿದೆ.

  ಕೋಲಾರ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಒಟ್ಟು ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಮೂರು ಮೀಸಲು ಕ್ಷೇತ್ರಗಳು ( ಕೆಜಿಎಫ್, ಬಂಗಾರಪೇಟೆ ಮತ್ತು ಮುಳಬಾಗಿಲು), ಮಿಕ್ಕ ಐದು ಕ್ಷೇತ್ರಗಳಾದ ಕೋಲಾರ, ಶಿಡ್ಲಘಟ್ಟ, ಮಾಲೂರು, ಚಿಂತಾಮಣಿ ಮತು ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರಗಳು.

  ಶ್ರೀನಿವಾಸಪುರ ಕ್ಷೇತ್ರದಲ್ಲಿ ಏನಿದ್ದರೂ ರೆಡ್ಡಿ ವರ್ಸಸ್ ಸ್ವಾಮಿ

  ಈ ಎಂಟು ಕ್ಷೇತ್ರಗಳ ಪೈಕಿ ಈ ಬಾರಿ, ಮಾಲೂರಿನಲ್ಲಿ ಬಿಜೆಪಿ - ಜೆಡಿಎಸ್ ಮತ್ತು ಕೆಜಿಎಫ್ ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ. ಕೋಲಾರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವರ್ತೂರು ಪ್ರಕಾಶ್ ಹಣೆಬರಹ ಈಗಾಗಲೇ ಮತಪೆಟ್ಟಿಗೆಯಲ್ಲಿ ನಿರ್ಧಾರವಾಗಿದೆ.

  2013ರ ಚುನಾವಣೆಯಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ (ಮಾಲೂರು, ಶಿಡ್ಲಘಟ್ಟ, ಚಿಂತಾಮಣಿ) ಕಾಂಗ್ರೆಸ್ ಎರಡು (ಶ್ರೀನಿವಾಸಪುರ, ಬಂಗಾರಪೇಟೆ) ಪಕ್ಷೇತರರು ಎರಡು (ಮುಳಬಾಗಿಲು, ಕೋಲಾರ) ಮತ್ತು ಬಿಜೆಪಿ, ಕೆಜಿಎಫ್ ನಲ್ಲಿ ಜಯ ಗಳಿಸಿತ್ತು.

  ಇತಿಹಾಸ ಮರುಕಳಿಸುತ್ತಾ? ಈ ಕ್ಷೇತ್ರದಲ್ಲಿ ಗೆದ್ದವರದ್ದೇ ಸರಕಾರ ಖಚಿತ!

  ಕೋಲಾರದ ಈ ಒಂದು ಕ್ಷೇತ್ರದ ಇದುವರೆಗಿನ ಫಲಿತಾಂಶವನ್ನು ಅವಲೋಕಿಸಿದರೆ, ಒಮ್ಮೆ ಗೆದ್ದ ಅಭ್ಯರ್ಥಿ ಮುಂದಿನ ಚುನಾವಣೆಯಲ್ಲಿ ಗೆದ್ದ ಉದಾಹರಣೆಗಳಿಲ್ಲ. ಅಂದರೆ, ಸತತವಾಗಿ ಯಾವುದೇ ಪಕ್ಷದ ಅಭ್ಯರ್ಥಿ ಎರಡೆರಡು ಬಾರಿ ಗೆದ್ದಿಲ್ಲ. ಆ ಕ್ಷೇತ್ರ ಯಾವುದು, ಮುಂದೆ ಓದಿ..

  ಯಾವುದೇ ಅಭ್ಯರ್ಥಿ ಸತತವಾಗಿ ಇಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ

  ಯಾವುದೇ ಅಭ್ಯರ್ಥಿ ಸತತವಾಗಿ ಇಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ

  1962-2013ರ ವರೆಗೆ ಯಾವುದೇ ಅಭ್ಯರ್ಥಿ ಸತತವಾಗಿ ಇಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇದುವರೆಗೆ ನಡೆದ ಹನ್ನೆರಡು ಚುನಾವಣೆಗಳಲ್ಲಿ ಒಮ್ಮೆ ಕಾಂಗ್ರೆಸ್, ಜೆಡಿಎಸ್, ಜೆಡಿ, ಜೆಎನ್ಪಿ, ಜೆಡಿಎಸ್ ಹೀಗೆ ಹಲವು ಪಕ್ಷದ ಅಭ್ಯರ್ಥಿಗಳು ಜಯಗಳಿಸುವಲ್ಲಿ ಯಶಸ್ವಿಯಾಗಿದ್ದರು. 1983-2018ರ ವರೆಗೆ ರಮೇಶ್ ಕುಮಾರ್ ಮತ್ತು ವೆಂಕಟಶಿವ ರೆಡ್ಡಿಯ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.

  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರ

  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರ

  ಕೋಲಾರ ಜಿಲ್ಲೆಯ ಅಸೆಂಬ್ಲಿ ಕ್ರಮ ಸಂಖ್ಯೆ 144, ಶ್ರೀನಿವಾಸಪುರದಲ್ಲಿ ಯಾವುದೇ ಅಭ್ಯರ್ಥಿ ಸತತವಾಗಿ ಗೆದ್ದ ಉದಾಹರಣೆ ಇಲ್ಲವೇ ಇಲ್ಲ. 1962ರಲ್ಲಿ ಜಿ ನಾರಾಯಣ ಗೌಡ, ಕಾಂಗ್ರೆಸ್ ಟಿಕೆಟಿನಿಂದ ಮೊದಲ ಬಾರಿ ಇಲ್ಲಿಂದ ಜಯಶೀಲರಾಗಿದ್ದರು. ಇದಾದ ನಂತರ ಬಿ ಎಲ್ ನಾರಾಯಣಸ್ವಾಮಿ, ಎಸ್ ಬಚ್ಚಿ ರೆಡ್ಡಿ ಕ್ರಮವಾಗಿ ಪಕ್ಷೇತರರಾಗಿ ಮತ್ತು ಎನ್ಸಿಓ ಅಭ್ಯರ್ಥಿಯಾಗಿ ಗೆದ್ದಿದ್ದರು.

  ಆರೋಗ್ಯ ಸಚಿವ ರಮೇಶ್ ಕುಮಾರ್

  ಆರೋಗ್ಯ ಸಚಿವ ರಮೇಶ್ ಕುಮಾರ್

  ಈಗಿನ ಆರೋಗ್ಯ ಸಚಿವ ರಮೇಶ್ ಕುಮಾರ್ 1978ರಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು. 1983ರಿಂದ ರಮೇಶ್ ಕುಮಾರ್ (ಕಾಂಗ್ರೆಸ್) ಮತ್ತು ವೆಂಕಟಶಿವರೆಡ್ಡಿಯ ನಡುವೆ ನೇರಾನೇರ ಸ್ಪರ್ಧೆ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೆ ಒಮ್ಮೆ ರಮೇಶ್ ಕುಮಾರ್ ಗೆದ್ದರೆ, ಇನ್ನೊಮ್ಮೆ ವೆಂಕಟಶಿವರೆಡ್ಡಿ ಜಯಶೀಲರಾಗುತ್ತಿದ್ದರು.

  ರಮೇಶ್ ಕುಮಾರ್ ಮತ್ತು ವೆಂಕಟಶಿವರೆಡ್ಡಿ

  ರಮೇಶ್ ಕುಮಾರ್ ಮತ್ತು ವೆಂಕಟಶಿವರೆಡ್ಡಿ

  ಕಳೆದ ಎಂಟು ಚುನಾವಣೆಯಲ್ಲಿ ರಮೇಶ್ ಕುಮಾರ್ ಮತ್ತು ವೆಂಕಟಶಿವರೆಡ್ಡಿಯ ನಡುವೆ ಗೆಲುವಿನ ಅಂತರ ಹತ್ತು ಸಾವಿರ ದಾಟುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಅಂದರೆ 2013ರಲ್ಲಿ ರಮೇಶ್ ಕುಮಾರ್ 3,893 ಮತಗಳ ಅಂತರದಿಂದ ಜಯಸಾಧಿಸಿದ್ದರು.

  ಹಿಂದಿನಂತೆಯೇ ಮುಂದುವರಿದರೆ, ಈ ಬಾರಿಯ ಸರದಿ ಕುಮಾರಣ್ಣನ ಪಕ್ಷಕ್ಕೆ

  ಹಿಂದಿನಂತೆಯೇ ಮುಂದುವರಿದರೆ, ಈ ಬಾರಿಯ ಸರದಿ ಕುಮಾರಣ್ಣನ ಪಕ್ಷಕ್ಕೆ

  ಈ ಬಾರಿ ಮತ್ತೆ ಇವರಿಬ್ಬರ ರಾಜಕೀಯ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಿಜೆಪಿ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಮುಖ ಮೂರು ಪಕ್ಷಗಳ ಜೊತೆಗೆ, ಇತರ ಒಂಬತ್ತು ಅಭ್ಯರ್ಥಿಗಳ ಹಣೆಬರವೂ ಈಗಾಗಲೇ ನಿರ್ಧಾರವಾಗಿದೆ. ಶ್ರೀನಿವಾಸಪುರದ ಮತದಾರ ಈ ಬಾರಿ ಉತ್ಸಾಹದಿಂದ ಮತಚಲಾಯಿಸಿದ್ದಾನೆ. ಈ ಕ್ಷೇತ್ರದ ರಾಜಕೀಯ ಹಿಂದಿನಂತೆಯೇ ಮುಂದುವರಿದರೆ, ಈ ಬಾರಿಯ ಸರದಿ ಕುಮಾರಣ್ಣನ ಪಕ್ಷದ್ದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Any candidate not able to won continuously in one of the assembly segment in Kolar. In Srinivaspura constituency, there is a no record of any candidate won the election continuously two times. Since, 1983 to 2013, once Ramesh Kumar (INC) will win and next time Venkata Shiva Reddy of JDS will win the election.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more