ಕುಟುಂಬದ ಪ್ರತಿ ಸದಸ್ಯನಿಗೆ 7 ಕೆಜಿ ಅಕ್ಕಿ: ರೇಷನ್‌ ಕಾರ್ಡ್‌ ಪಡಿತರ ನಿಯಮಕ್ಕೆ ತಿದ್ದುಪಡಿ ತರಲು ಮುಂದಾದ ಸರ್ಕಾರ

ಇಲ್ಲಿಯವರೆಗೆ, ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ, ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಆ ಕುಟುಂಬದಲ್ಲಿ ಏಳು ಜನ ಇರಲಿ ಅಥವಾ ಇಬ್ಬರು ಇರಲಿ ಅಕ್ಕಿ ಮಾತ್ರ 35 ಕೆಜಿಯೇ ಸಿಗುತ್ತಿತ್ತು. ಇದರ ಪ್ರಕಾರ ಸಣ್ಣ ಕುಟುಂಬಗಳಿಗೆ ಹೆಚ್ಚಿನ ಆಹಾರ ಸಿಗ್ತಾ ಇತ್ತು. ಆದರೆ ದೊಡ್ಡ ಕುಟುಂಬಗಳಿಗೆ ಆಗಾಗ ಆಹಾರ ಪದಾರ್ಥಗಳ ಕೊರತೆಯಾಗ್ತಾ ಇತ್ತು.

ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ (NFSA) ತಿದ್ದುಪಡಿ ಮಾಡಲು ಮುಂದಾಗಿದೆ. ಇನ್ನು ಮುಂದೆ ಪ್ರತಿ ಕುಟುಂಬಕ್ಕೆ 35 ಕೆಜಿ ಪಡಿತರ ನೀಡುವ ಬದಲು ಕುಟುಂಬದ ಪ್ರತಿ ವ್ಯಕ್ತಿಗೆ 7 ಕೆಜಿ ಪಡಿತರ ಸಿಗುತ್ತದೆ. ಅಂದರೆ ಅಗತ್ಯಕ್ಕೆ ತಕ್ಕಂತೆ ಆಹಾರ.

Antyodaya Anna Yojana

ಸರ್ಕಾರ ಈ ಬದಲಾವಣೆಯನ್ನು ಶೀಘ್ರದಲ್ಲೇ ಜಾರಿಗೆ ತರುವ ಬಗ್ಗೆ ಯೋಚಿಸುತ್ತಿದೆ. ಆದರೆ ಇನ್ನೂ ಈ ಕಾನೂನನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಸರ್ಕಾರವು ಸಾರ್ವಜನಿಕರಿಂದ ಸಲಹೆಗಳನ್ನು ಕೋರಿತ್ತು. ಸಲಹೆಗಳನ್ನು ನೀಡುವ ಅವಧಿಯೂ ಇದೀಗ ಕೊನೆಯಾಗಿದೆ.

ಆದ್ಯತಾ ಗೃಹ ಯೋಜನೆ (PHH) ಅಡಿಯಲ್ಲಿ, ತಲಾವಾರು ಪಡಿತರವನ್ನು ವಿತರಿಸಲಾಗುತ್ತದೆ. ಇದರ ಅಡಿಯಲ್ಲಿ,ಕುಟುಂಬದ ಪ್ರತಿ ಸದಸ್ಯರು 5 ಕೆಜಿ ಆಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂತ್ಯೋದಯ ಅನ್ನ ಯೋಜನೆಯನ್ನು ಇದರೊಂದಿಗೆ ಜೋಡಿಸಲು ಸರ್ಕಾರ ಮುಂದಾಗಿದೆ.ಈಗ ಇರುವ ವ್ಯವಸ್ಥೆಯಂತೆ ದೊಡ್ಡ ಕುಟುಂಬಗಳಿಗೆ 35 ಕೆಜಿ ಅಕ್ಕಿ ನೀಡುವುದರಿಂದ ಅಸಮಾನತೆ ಉಂಟಾಗುತ್ತದೆ ಎನ್ನುವುದು ಸರ್ಕಾರದ ವಾದ. ಅಂದರೆ ಕುಟುಂಬದಲ್ಲಿ ಇಬ್ಬರೇ ಇದ್ದರೂ 35 ಕಿಲೋ ಅಕ್ಕಿ, ಏಳು ಜನ ಇದ್ದರೂ 35 ಕೆಜಿ ಅಕ್ಕಿ ನೀಡುವ ರೀತಿ ಸರಿಯಲ್ಲ ಎನ್ನುವುದು ಸರ್ಕಾರದ ಅಭಿಪ್ರಾಯ.

7 ಕೆಜಿ ಎಂದರೆ ಪ್ರತಿ ಕುಟುಂಬಕ್ಕೆ 7 ಕೆಜಿ ಎಂದರ್ಥವಲ್ಲ

ಇದೀಗ ಪಡಿತರ ವಿತರಣೆ ಬಗ್ಗೆ ಗೊಂದಲ ಉಂಟಾಗಿದೆ. ಪ್ರತಿ ರೇಷನ್‌ ಕಾರ್ಡ್‌ಗೆ ಕೇವಲ 7 ಕೆಜಿ ಧಾನ್ಯವನ್ನು ಮಾತ್ರ ಒದಗಿಸುತ್ತದೆ ಎನ್ನುವ ಭಾವನೆ ಜನರಲ್ಲಿದೆ. ಆದರೆ ಸರ್ಕಾರ ಪ್ರಸ್ತಾವನೆಯಲ್ಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಪ್ರಸ್ತಾವಿತ ಸೂತ್ರದ ಪ್ರಕಾರ, ಕುಟುಂಬದ ಪ್ರತಿ ಸದಸ್ಯರಿಗೆ 7 ಕೆಜಿ ಪಡಿತರ ಧಾನ್ಯ ನೀಡಲಾಗುವುದು. ಆದರೆ ಇಡೀ ಕುಟುಂಬಕ್ಕೆ ಗರಿಷ್ಠ ಕೋಟಾ 35 ಕೆಜಿ ಆಗಿರುತ್ತದೆ. ಇದರರ್ಥ ಒಬ್ಬ ಸದಸ್ಯರಿಗೆ 7 ಕೆಜಿ, ಇಬ್ಬರು ಸದಸ್ಯರಿಗೆ 14 ಕೆಜಿ, ಮೂವರು ಸದಸ್ಯರಿಗೆ 21 ಕೆಜಿ ಮತ್ತು ನಾಲ್ವರು ಸದಸ್ಯರಿಗೆ 28 ​​ಕೆಜಿ. ಕುಟುಂಬದಲ್ಲಿ ಐದು ಅಥವಾ ಹೆಚ್ಚಿನ ಸದಸ್ಯರಿದ್ದರೆ, ಒಟ್ಟು ಪಡಿತರವನ್ನು 35 ಕೆಜಿಗೆ ಮಿತಿಗೊಳಿಸಲಾಗುತ್ತದೆ.

ಈ ಪ್ರಸ್ತಾವನೆ ಜಾರಿಗೆ ಬಂದರೆ, ಒಬ್ಬರಿಂದ ನಾಲ್ಕು ಸದಸ್ಯರಿರುವ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಒಬ್ಬರೇ ಸದಸ್ಯರಿರುವ ಕುಟುಂಬಕ್ಕೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣ 35 ಕೆಜಿಯಿಂದ 7 ಕೆಜಿಗೆ ಇಳಿಸಬಹುದು. ಅಂದರೆ ಸಣ್ಣ AAY ಕುಟುಂಬಗಳಿಗೆ ಪಡಿತರ ಕೋಟಾದಲ್ಲಿ ಸಿಗುವ ಪಡಿತರ ಬಹಳ ಕಡಿಮೆಯಾಗಲಿದೆ.

ಆರು, ಏಳು ಅಥವಾ ಎಂಟು ಸದಸ್ಯರನ್ನು ಹೊಂದಿರುವ ಕುಟುಂಬಗಳು ಪ್ರಸ್ತುತ ವ್ಯವಸ್ಥೆಯಡಿಯಲ್ಲಿ ಗರಿಷ್ಠ 35 ಕೆಜಿ ಪಡೆಯುತ್ತಾರೆ. ಪ್ರತಿ ವ್ಯಕ್ತಿಗೆ ಏಳು ಕೆಜಿ ಪಡಿತರ ವಿತರಣೆ ಅಂದರೆ ಆರು ಸದಸ್ಯರಿಗೆ 42 ಕೆಜಿ ಮತ್ತು ಏಳು ಸದಸ್ಯರಿಗೆ 49 ಕೆಜಿ ಸಿಗುತ್ತದೆ ಎಂದಲ್ಲ. ಪ್ರಸ್ತಾವನೆಯು ಪಡಿತರ ವಿತರಣೆಯ ಗರಿಷ್ಠ ಮಿತಿಯನ್ನು 35 ಕೆಜಿ ಎಂದೇ ನಿಗದಿಪಡಿಸುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಅಂತ್ಯೋದಯ ಅನ್ನ ಯೋಜನೆಯು ಅತ್ಯಂತ ಬಡ ಮತ್ತು ದುರ್ಬಲ ಕುಟುಂಬಗಳನ್ನು ಒಳಗೊಂಡಿದೆ. ಇದು ಒಂಟಿಯಾಗಿ ವಾಸಿಸುವ ವೃದ್ಧರು, ವಿಧವೆಯರು ಅಥವಾ ಸಣ್ಣ ಕುಟುಂಬವನ್ನು ಒಳಗೊಂಡಿರಬಹುದು. ಪ್ರಸ್ತುತ ವ್ಯವಸ್ಥೆಯಡಿಯಲ್ಲಿ, ಎಲ್ಲರಿಗೂ 35 ಕೆಜಿ ಆಹಾರ ಧಾನ್ಯ ಸಿಗುತ್ತದೆ. ಒಂದು ವೇಳೆ ಈ ಪ್ರಸ್ತಾವನೆ ಜಾರಿಗೆ ತಂದರೆ, ಒಬ್ಬ ವ್ಯಕ್ತಿಗೆ ಸಿಗುವ ಆಹಾರ ಧಾನ್ಯ 7 ಕೆಜಿಗೆ ಇಳಿಯಬಹುದು.

ಪಡಿತರ ಚೀಟಿಯ ಆದಾಯ ಮಿತಿಯೂ ಬದಲಾಗುತ್ತಿದೆಯೇ?

7 ಕೆಜಿ ಪ್ರಸ್ತಾವನೆ ಮತ್ತು ಪಡಿತರ ಚೀಟಿ ಆದಾಯ ಮಿತಿಯನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. 35 ಕೆಜಿಯನ್ನು 7 ಕೆಜಿಗೆ ಇಳಿಸುವ ಪ್ರಸ್ತಾವನೆಯು ಪ್ರಾಥಮಿಕವಾಗಿ ಅಂತ್ಯೋದಯ ಅನ್ನ ಯೋಜನೆಯ ಎಣಿಕೆಯನ್ನು ಬದಲಾಯಿಸುವುದನ್ನು ಒಳಗೊಂಡಿದೆ. ಪಡಿತರ ಚೀಟಿಗಳಿಗೆ ಅರ್ಹ ಕುಟುಂಬಗಳನ್ನು ಗುರುತಿಸುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ. ಆದ್ದರಿಂದ, ರಾಜ್ಯದ ಆದಾಯ ಮಿತಿ ಅಥವಾ ಅರ್ಹತಾ ಬದಲಾವಣೆಯನ್ನು ಈ ಕೇಂದ್ರ ಪ್ರಸ್ತಾವನೆಗೆ ನೇರವಾಗಿ ಲಿಂಕ್ ಮಾಡುವುದು ಸರಿಯಲ್ಲ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಹಾಗಾಗಿ 7 ಕೆಜಿ ಪಡಿತರಕ್ಕೆ ಇಳಿಸುವ ಬಗೆಗಿನ ತೀರ್ಮಾನ ಇನ್ನೂ ಅಂತಿಮ ಕಾನೂನಾಗಿಲ್ಲ.

ಈಗ ಪರಿಸ್ಥಿತಿ ಹೇಗಿದೆ, ಪಡಿತರ ಯಾವಾಗ ಬದಲಾಗುತ್ತದೆ?

ಅತ್ಯಂತ ಮುಖ್ಯವಾದ ವಿಷಯವೆಂದರೆ 7 ಕೆಜಿ ಸೂತ್ರವನ್ನು ಇನ್ನೂ ಜಾರಿಗೆ ತರಲಾಗಿಲ್ಲ. ಇದು NFSA ಅನ್ನು ತಿದ್ದುಪಡಿ ಮಾಡುವ ಕರಡು ಪ್ರಸ್ತಾವನೆಯಷ್ಟೇ. ಇದಕ್ಕಾಗಿ ಸರ್ಕಾರ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕೋರಿತ್ತು. ಆದ್ದರಿಂದ, ಇದೀಗ, ಪ್ರತಿ ಕುಟುಂಬಕ್ಕೆ 35 ಕೆಜಿ ಎಂಬ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು AAY ಗೆ ಆಧಾರವೆಂದು ಪರಿಗಣಿಸಲಾಗುತ್ತಿದೆ. ಸರ್ಕಾರವು ಪ್ರಸ್ತಾವನೆಯನ್ನು ಅಂತಿಮಗೊಳಿಸಿ ಕಾನೂನನ್ನು ತಿದ್ದುಪಡಿ ಮಾಡಿದರೆ ಮಾತ್ರ ಹೊಸ ಲೆಕ್ಕಾಚಾರ ಜಾರಿಗೆ ಬರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+