Get Updates
Get notified of breaking news, exclusive insights, and must-see stories!

"ಅಂಗನವಾಡಿಯ ಒಂದು ಮಗುವಿನ ತರಕಾರಿ ಖರ್ಚಿಗೆ ಕೇವಲ 50 ಪೈಸೆ"

ರಾಜ್ಯ ಸರ್ಕಾರವು ಅಂಗನವಾಡಿಯ ಒಂದು ಮಗುವಿನ ತರಕಾರಿ ಖರ್ಚಿಗೆ ಕೇವಲ 50 ಪೈಸೆ ನೀಡುತ್ತಿರುವುದು ನಿಜಕ್ಕೂ ಆಘಾತ ತಂದಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಖಂಡಿಸಿದ್ದಾರೆ. ಮಕ್ಕಳ ಆರೋಗ್ಯಕರ ಮತ್ತು ಸದೃಢ ಬೆಳವಣಿಗೆಗೆ ಪೌಷ್ಟಿಕ ಆಹಾರವು ಅತ್ಯಗತ್ಯ. ಮಕ್ಕಳಿಗೆ ನೀಡುವ ಆಹಾರವು ಅವರ ಬೆಳವಣಿಗೆಗೆ ಪೂರಕವಾಗಿರಬೇಕು. ದವಸ, ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಇವೆಲ್ಲವೂ ಅಂಗನವಾಡಿ ಮಕ್ಕಳ ಊಟದಲ್ಲಿ ಇರಬೇಕು. ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ನಿವಾರಣೆ ಮಾಡುವುದು ಅಂಗನವಾಡಿಯ ಮುಖ್ಯ ಧ್ಯೇಯೋದ್ದೇಶ. ಆದರೆ, ಸರ್ಕಾರದ ನಡೆ ಖಂಡನೀಯ ಎಂದಿದ್ದಾರೆ.

ಈ ಹಿಂದೆ ಅಂಗನವಾಡಿಯ ಮಕ್ಕಳಿಗೆ ನೀಡುತ್ತಿದ್ದ ಹೆಸರು ಕಾಳು, ಬೆಲ್ಲ, ವಿವಿಧ ರೀತಿಯ ಬೇಳೆ ಕಾಳುಗಳನ್ನು ಸಹ ಸರ್ಕಾರ ನಿಲ್ಲಿಸಿದೆ. ಅಂಗನವಾಡಿ ಮಕ್ಕಳಿಗೆ ಇರುವ ಪೌಷ್ಟಿಕತೆಯ ಮಾರ್ಗಸೂಚಿಗಳನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ ಎಂದು ದೂರಿದ್ದಾರೆ. ಅಂಗನವಾಡಿಯ ಮಕ್ಕಳಿಗೆ ಇರುವ ಪೌಷ್ಟಿಕತೆಯ ಮಾರ್ಗಸೂಚಿಯನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸಿ, ಅದಕ್ಕೆ ಬೇಕಾದ ತರಕಾರಿ, ಹಣ್ಣು, ದವಸ, ಧಾನ್ಯ, ಹಾಲು ಹಾಗೂ ಇತರೆ ಸಾಮಗ್ರಿಗಳನ್ನು ಕೂಡಲೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Anganwadi Child Gets Only 50 Paise for Vegetables MLA Yatnal Slams Karnataka Government

ಸಕಾಲದಲ್ಲಿ ಶಿಕ್ಷಕರ ವೇತನ ನೀಡಿ

ಶಾಲೆಯಲ್ಲಿ ಮಕ್ಕಳ ಸಂಖ್ಯೆ, ಹಾಜರಾತಿ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಸೃಜನಶೀಲ ಬೋಧನಾ ವಿಧಾನವನ್ನು ಪರಿಚಯಿಸಬೇಕೇ ಹೊರತು, ಶಿಕ್ಷಕರನ್ನು ಅಧ್ಯಯನದ ಸಲುವಾಗಿ ವಿದೇಶಕ್ಕೆ ಕಳುಹಿಸುವುದು ಸರಿಯಲ್ಲ ಎಂದು ಯತ್ನಾಳ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಶಿಕ್ಷಕರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ, ಅವರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಲಿ. ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಿ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸುವುದರಿಂದ ಯಾರಿಗೂ ಪ್ರಯೋಜನ ಇಲ್ಲ. ಶಿಕ್ಷಣ ಸಚಿವರು ಪ್ರಬುದ್ಧರಾಗಿ ಯೋಚಿಸಬೇಕೇ ಹೊರತು, ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರವು ಶಿಕ್ಷಕರ ವೇತನವನ್ನು ಪಾವತಿಸದಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಖಂಡಿಸಿದೆ. ಶಿಕ್ಷಣ ಇಲಾಖೆಯು 19 ತಿಂಗಳಿನಿಂದ ಬಾಕಿ ಇರುವ ವೇತನವನ್ನು ಪಾವತಿಸಲು ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆಯಾಗಿದೆ. ಈ ಅರ್ಜಿ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಕೂಡಲೇ ವೇತನ ಪಾವತಿಸದಿದ್ದರೆ, ದಂಡ ವಿಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿರುವವರನ್ನು ಸಂಬಳವಿಲ್ಲದೆ ಕೆಲಸ ಮಾಡಲು ಒತ್ತಾಯಿಸಬಾರದು ಎಂದು ಕೋರ್ಟ್‌ ನಿರ್ದೇಶಿಸಿದೆ. ಬೋಧನಾ ಸಿಬ್ಬಂದಿಗೆ ಸಂಬಳ ಪಾವತಿಸಲು ವಿಫಲವಾಗುವ ಮೂಲಕ ಕಾಂಗ್ರೆಸ್ ಸರ್ಕಾರವು ಹೊಸ ಕೆಳಮಟ್ಟಕ್ಕೆ ಇಳಿದಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಸ್ಥಿತಿ ಸಂಪೂರ್ಣ ಅಸ್ತವ್ಯಸ್ತವಾಗಿ ರಾಜ್ಯದ ಖಜಾನೆಯನ್ನು ಬರಿದಾಗಿಸುತ್ತಿವೆ. ಈಗ ಸರ್ಕಾರಿ ನೌಕರರ ಸಂಬಳ ಪಾವತಿಗೆ ಹೈಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು ಎಂದು ಟೀಕಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+