ಎಚ್ಡಿಕೆ, ಮೊಯ್ಲಿ, ನಿಲೇಕಣಿ ಟೂರಿಂಗ್ ಟಾಕೀಸ್ ಇದ್ದಂತೆ!

ಬಿಜಾಪುರ, ಏ. 7 : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಉತ್ತರ ಕರ್ನಾಟಕದಲ್ಲಿ ಸೋಮವಾರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಬಿಜಾಪುರದ ಇಂಡಿಯಲ್ಲಿ ಅವರು ಭಾರತ ವಿಜಯ ಯಾತ್ರೆಯಲ್ಲಿ ಪಾಲ್ಗೊಂಡು ಮತಯಾಚಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅನಂತ್ ಕುಮಾರ್, ತಮ್ಮ ಕ್ಷೇತ್ರದಲ್ಲಿನ ಒಂದು ಹಂತದ ಪ್ರಚಾರ ನಡೆಸಿ ಇತರ ಜಿಲ್ಲೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸೋಮವಾರ ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿ ಅವರ ಪರವಾಗಿ ಅನಂತ್ ಕುಮಾರ್ ಪ್ರಚಾರ ನಡೆಸಿದರು.

ಇಂಡಿಯಲ್ಲಿ ಭಾರತ ವಿಜಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ, ಅನಂತ್ ಕುಮಾರ್, ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿಯವರನ್ನು ಗೆಲ್ಲಿಸುವ ಮೂಲಕ ಮೋದಿಜೀಯವರನ್ನು ಪ್ರಧಾನಿ ಮಾಡಲು ಬೆಂಬಲ ನೀಡಬೇಕು ಎಂದು ಮವಿ ಮಾಡಿದರು.

ಟೂರಿಂಗ್ ಟಾಕೀಸ್ ಇದ್ದಂತೆ : ಸಮಾವೇಶದಲ್ಲಿ ಮಾತನಾಡಿದ ಅನಂತ್ ಕುಮಾರ್, ಹೆಚ್.ಡಿ.ಕುಮಾರಸ್ವಾಮಿ, ಮೊಯ್ಲಿ, ನಿಲೇಕಣಿ ಟೂರಿಂಗ್ ಟಾಕೀಸ್ ಇದ್ದಂತೆ ಆದ್ದರಿಂದ ಈ ಮೂವರೂ ಪದೇ ಪದೇ ಕ್ಷೇತ್ರಗಳನ್ನು ಬದಲಿಸುತ್ತಿರುತ್ತಾರೆ ಎಂದು ಅನಂತ್ ಕುಮಾರ್ ಲೇವಡಿ ಮಾಡಿದರು. ಚಿತ್ರಗಳಲ್ಲಿ ನೋಡಿ ಇಂಡಿ ಸಮಾವೇಶ

ಉತ್ತರ ಕರ್ನಾಟಕದಲ್ಲಿ ಅನಂತ್ ಪ್ರಚಾರ

ಉತ್ತರ ಕರ್ನಾಟಕದಲ್ಲಿ ಅನಂತ್ ಪ್ರಚಾರ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಉತ್ತರ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸೋಮವಾರ ಬಿಜಾಪುರದ ಇಂಡಿಯಲ್ಲಿ ಅವರು ಪ್ರಚಾರ ನಡೆಸಿದರು.

ಜಿಗಜಿಣಗಿ ಅವರಿಗೆ ಮತ ನೀಡಿ

ಜಿಗಜಿಣಗಿ ಅವರಿಗೆ ಮತ ನೀಡಿ

ಬಿಜಾಪುರದ ಇಂಡಿಯಲ್ಲಿ ಭಾರತ ವಿಜಯ ಯಾತ್ರೆ ಉದ್ದೇಶಿಸಿ ಮಾತನಾಡಿದ ಅನಂತ್ ಕುಮಾರ್, ಯುಪಿಎ ಸರ್ಕಾರಕ್ಕೆ ಈ ಬಾರಿ ಸೋಲು ಖಚಿತ. ದೇಶದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಮೂರು ರೀತಿಯ ಸರ್ಕಾರಗಳಿವೆ

ಮೂರು ರೀತಿಯ ಸರ್ಕಾರಗಳಿವೆ

ಅಭಿವೃದ್ಧಿಯ ಸರ್ಕಾರ, ದುರಾಡಳಿತ ಸರ್ಕಾರ, ನಿಷ್ಕ್ರಿಯ ಸರ್ಕಾರ ಎಂಬ ಮೂರು ವಿಧದ ಸರ್ಕಾರಗಳಿವೆ. ಅಭಿವೃದ್ಧಿ ಸರ್ಕಾರವೆಂದರೆ ನರೇಂದ್ರ ಮೋದಿ ಅವರ ಸರ್ಕಾರ, ದುರಾಡಳಿತ ಸರ್ಕಾರವೆಂದರೆ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರವಾಗಿದೆ. ನಿಷ್ಕ್ರಿಯ ಸರ್ಕಾರಕ್ಕೆ 49 ದಿನ ಆಡಳಿತ ನಡೆಸಿದವರು ಸಾಕ್ಷಿ ಎಂದು ಕುಟುಕಿದರು. ಅಭಿವೃದ್ಧಿ ಸರ್ಕಾರಕ್ಕಾಗಿ ಬಿಜೆಪಿಗೆ ಬೆಂಬಲ ನೀಡಿ ಎಂದರು.

ಎದುರಾಳಿಗಳು

ಎದುರಾಳಿಗಳು

ಬಿಜಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಜಿಗಜಿಣಗಿ, ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್ ರಾಥೋರ್, ಜೆಡಿಎಸ್ ಪಕ್ಷದಿಂದ ಕೆ.ಶಿವರಾಮ್ ಮತ್ತು ಆಮ್ ಆದ್ಮಿ ಪಕ್ಷದಿಂದ ಶ್ರೀಧರ್ ನಾರಾಯಣಕರ್ ಕಣಕ್ಕಿಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+