ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.26, 27ರಂದು ಅಮಿತ್ ಶಾ ರಾಜ್ಯ ಪ್ರವಾಸ

|
Google Oneindia Kannada News

ಬೆಂಗಳೂರು, ಮಾರ್ಚ್ 21 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೆ ಕರ್ನಾಟಕ ಭೇಟಿ ಕೈಗೊಂಡಿದ್ದಾರೆ. ಈ ಬಾರಿ ಅವರು ಮಲೆನಾಡು ಭಾಗದಲ್ಲಿ ರೋಡ್ ಶೋ ನಡೆಸಲಿದ್ದು, ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಾ.26 ಮತ್ತು ಮಾ.27ರಂದು ಅಮಿತ್ ಶಾ ರಾಜ್ಯ ಪ್ರವಾಸ ಮಾಡಲಿದ್ದಾರೆ. ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಈ ಬಾರಿ ಅಮಿತ್ ಶಾ ಅಡಿಕೆ ಮತ್ತು ತೆಂಗು ಬೆಳೆಗಾರರ ಜೊತೆ ಮಾತುಕತೆ ನಡೆಸಲಿದ್ದಾರೆ. ಚಿತ್ರದುರ್ಗದಲ್ಲಿ ಎಸ್‌ಟಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಿ, ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆಗೆ ಎ, ಬಿ, ಸಿ ಸೂತ್ರ!ಚುನಾವಣೆ : ಬಿಜೆಪಿ ಟಿಕೆಟ್ ಹಂಚಿಕೆಗೆ ಎ, ಬಿ, ಸಿ ಸೂತ್ರ!

Amit Shah Karnataka tour on March 26, 27

ಅಮಿತ್ ಶಾ ಕಾರ್ಯಕ್ರಮಗಳು

* ಮಾರ್ಚ್ 26ರಂದು ತಿಪಟೂರಿನಲ್ಲಿ ತೆಂಗು ಬೆಳೆಗಾರರ ಜೊತೆ ಸಂವಾದ

* ಮಾರ್ಚ್ 26ರಂದು ತೀರ್ಥಹಳ್ಳಿಗೆ ಭೇಟಿ, ಅಡಿಕೆ ಬೆಳೆಗಾರರ ಜೊತೆ ಸಂವಾದ

* ಮಾರ್ಚ್ 26ರಂದು ಶಿವಮೊಗ್ಗದಲ್ಲಿ ರೋಡ್ ಶೋ, ಸಮಾವೇಶದಲ್ಲಿ ಭಾಗಿ

* ಮಾರ್ಚ್ 27ಕ್ಕೆ ಚಿತ್ರದುರ್ಗಕ್ಕೆ ಭೇಟಿ

* ಎಸ್‌ಟಿ ಸಮಾವೇಶದಲ್ಲಿ ಭಾಗಿ

ಮಾರ್ಚ್ 30 ಮತ್ತು 31ರಂದು ಅಮಿತ್ ಶಾ ಪುನಃ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

English summary
BJP national president Amit Shah will visit Karnataka on March 26 and 27, 2018. Amit Shah will visit Tumakuru, Shivamogga, Chitradurga district in his two days tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X