ಕನ್ನಡಿಗರ ಆಕ್ರೋಶ; ವೆಬ್‌ಸೈಟ್‌ನಲ್ಲಿ ಚಿತ್ರ ಬದಲಾಯಿಸಿದ ಅಮೇಜಾನ್

ಬೆಂಗಳೂರು, ಜೂನ್ 05: ಕನ್ನಡ ಬಾವುಟದ ಬಣ್ಣ, ಲಾಂಛನದ ಚಿತ್ರ ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟಕ್ಕಿಟ್ಟು ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ಅಮೇಜಾನ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆ ವಿವಾದಾತ್ಮಕ ಚಿತ್ರವನ್ನು ಬದಲಿಸಿದೆ.

Recommended Video

      Amazon ಆನ್ಲೈನ್ ಕಂಪನಿಯಿಂದ ಕನ್ನಡಕ್ಕೆ ಭಾರಿ ಅವಮಾನ:ಸಿಡಿದೆದ್ದ ಕರವೇ | Oneindia Kannada

      ಕನ್ನಡ ಬಾವುಟದ ಬಣ್ಣ, ಲಾಂಛನ ಹಾಗೂ ಭಾರತದ ಅಶೋಕ ಚಕ್ರದ ಚಿತ್ರ ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಶಾಪಿಂಗ್ ಆಯ್ಕೆಗೆ ಇಡಲಾಗಿತ್ತು. BHDMHHH ಎಂಬ ಬ್ರ್ಯಾಂಡ್‌ನ ಒಳ ಉಡುಪು ಇದಾಗಿದ್ದು, ಕೆನಡಾದಲ್ಲಿ ಚಾಲ್ತಿಯಲ್ಲಿರುವ ಅಮೇಜಾನ್ ವೆಬ್‌ಸೈಟ್‌ನಲ್ಲಿ ಇದು ಕಂಡುಬಂದಿತ್ತು.

      Amazon Shopping Website Removes Kannada Flag Emblem Depicting Cloths After Outrage

      ಕನ್ನಡ ಬಾವುಟ ಹಾಗೂ ಲಾಂಛನವನ್ನು ಈ ರೀತಿ ಬಳಸಿಕೊಂಡು ನಾಡಿನ ಗೌರವಕ್ಕೆ ಚ್ಯುತಿ ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಖಂಡಿಸಿದ್ದರು. ಈ ನಡೆಗೆ ಕನ್ನಡ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

      ಈ ಸಂಗತಿ ಕುರಿತು ಪ್ರತಿಕ್ರಿಯಿಸಿದ್ದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ, ಕನ್ನಡ ನಾಡಿನ ಗೌರವಕ್ಕೆ ಚ್ಯುತಿ ತಂದಿರುವ ಅಮೇಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆ ವಿರುದ್ಧ ಕರ್ನಾಟಕ ಸರ್ಕಾರದಿಂದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

      ಈ ಬೆನ್ನಲ್ಲೇ ಅಮೇಜಾನ್ ವಿವಾದಿತ ಚಿತ್ರ ತೆಗೆದುಹಾಕಿ ಬೇರೆ ಚಿತ್ರ ಬಳಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+