Lok Sabha Election: ವೋಟರ್ ಐಡಿ ಇಲ್ಲದೇ ಇದ್ದರೂ ಮತದಾನ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ದೇಶದಲ್ಲಿ ಈಗ ಚುನಾವಣೆಗಳ ಕಾವು ಏರುತ್ತಲೆ ಇದೆ. ಈಗಾಗಲೇ ಚುನಾವಣೆಗಳ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲೂ ಮೊದಲ ಹಂತದ ಚುನಾವಣೆ ಇದೇ ಏಪ್ರಿಲ್ 26 ರಂದು ನಡೆಯಲಿದೆ.
ಕರ್ನಾಟಕದ 18 ಜಿಲ್ಲೆಗಳು ಮೊದಲ ಹಂತದ ಮತದಾನಕ್ಕೆ ಸಜ್ಜಾಗುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಭರದಿಂದ ತಯಾರಿ ನಡೆಸುತ್ತಿವೆ. ಇನ್ನು ಪ್ರಮುಖ ಪಕ್ಷಗಳು ಪ್ರಚಾರದ ಭರಾಟೆಯನ್ನು ಚುರುಕು ಗೊಳಿಸಿವೆ. ಮತದಾರ ಸಹ ತನ್ನ ಅತ್ಯ ಅಮೂಲ್ಯ ಮತವನ್ನು ಚಲಾಯಿಸಲು ಸಿದ್ಧನಾಗಿದ್ದಾನೆ. ಈ ವೇಳೆ ಮತದಾರರಲ್ಲಿ ಒಂದು ಟೆನ್ಷನ್ ಇರುತ್ತದೆ. ವೋಟರ್ ಐಡಿ ಕಾರ್ಡ್ ಇಲ್ಲದೆ ಇದಲ್ಲಿ ಮತದಾನ ಮಾಡುವುದು ಹೇಗೆ? ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದು, ವೋಟರ್ ಐಡಿ ಕಾರ್ಡ್ ಇಲ್ಲದೇ ಇದ್ದರೆ ಚಿಂತಿಸ ಬೇಡಿ.

ಚುನಾವಣಾ ಆಯೋಗ ಹೇಳುವುದು ಏನು?
ಮತದಾರರ ಕಾರ್ಡ್ ಇಲ್ಲದೆಯೇ ನೀವು ಮತವನ್ನು ನೀವು ಹೀಗೆ ಮಾಡಬಹುದು, ನಿಯಮಗಳನ್ನು ಏನು ಹೇಳುತ್ತವೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ. ಮತದಾರರ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಹೇಗೆ ಮತ ಚಲಾಯಿಸುವುದು ಎಂಬುದಕ್ಕೆ ಚುನಾವಣಾ ಆಯೋಗವು ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಅಡಿಯಲ್ಲಿ ನೀವು ಮತದಾರರ ಚೀಟಿ ಇಲ್ಲದೆ ಮತ ಚಲಾಯಿಸಬಹುದು.
ವೋಟರ್ ಐಡಿಯಲ್ಲಿ ಭಾಷಾ ದೋಷ ಅಥವಾ ಕಾಗುಣಿತ ದೋಷಗಳು ಇದ್ದಲ್ಲಿ, ಅವುಗಳನ್ನು ನಿರ್ಲಕ್ಷಿಸಬಹುದು ಎಂದು ಚುನಾವಣಾ ಆಯೋಗವು ರಾಜ್ಯಗಳಿಗೆ ಸೂಚನೆಯನ್ನು ನೀಡಿದೆ. ಮತದಾರರು ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಚುನಾವಣಾ ಆಯೋಗ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಮತದಾನ ಮಾಡಲು ಬಂದಿರುವ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರಿದ್ದರೆ, ಮತದಾರರ ಕಾರ್ಡ್ ಇಲ್ಲದೆ ಇದ್ದರೂ ಮತದಾನವನ್ನು ಮಾಡಬಹುದು. ಆದರೆ ಅಗತ್ಯ ದಾಖಲೆಗಳನ್ನು ತೋರಿಸ ಬೇಕು.

ಇಷ್ಟೇ ಅಲ್ಲ, ಮತದಾರರ ಚೀಟಿಯಲ್ಲಿನ ಭಾವಚಿತ್ರ ಹೊಂದಾಣಿಕೆಯಾಗದಿದ್ದರೆ, ಈ ಸಂದರ್ಭದಲ್ಲಿ ಮತದಾರರು ಇತರ ಕೆಲವು ಸರ್ಕಾರಿ ಫೋಟೋ ದಾಖಲೆಯನ್ನು ಹಾಜರುಪಡಿಸಬೇಕಾಗುತ್ತದೆ. ಮತದಾರ ತಮ್ಮ ಬಳಿ ಇರುವು ಯಾವುದಾದರೂ ಫೋಟೋ ಇರುವ ಈ ಕೆಳಗಿನ ಯಾವುದಾದರು ಕಾರ್ಡ್ ತೋರಿಸಿದರೂ ನಡೆಯುತ್ತದೆ.
ಚುನಾವಣಾ ಆಯೋಗ ತಿಳಿಸಿರುವ ದಾಖಲೆಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಭಾರತೀಯ ಪಾಸ್ಪೋರ್ಟ್
ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್)
MNREGA ಜಾಬ್ ಕಾರ್ಡ್
ಫೋಟೋದೊಂದಿಗೆ ಪಿಂಚಣಿ ದಾಖಲೆ
ಬ್ಯಾಂಕ್ ಅಥವಾ ಅಂಚೆ ಕಛೇರಿಯಿಂದ ನೀಡಿದ ಫೋಟೋದೊಂದಿಗೆ ಪಾಸ್‌ಬುಕ್
ಕಾರ್ಮಿಕ ಸಚಿವಾಲಯ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
ಸಾಮಾಜಿಕ ನ್ಯಾಯ ಸಚಿವಾಲಯವು ನೀಡಿದ ನಿರ್ದಿಷ್ಟ ಅಂಗವೈಕಲ್ಯ ಐ-ಕಾರ್ಡ್
ಕೇಂದ್ರ/ರಾಜ್ಯ ಸರ್ಕಾರಗಳು ಅಥವಾ PSUಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರದೊಂದಿಗೆ ಸೇವಾ I-ಕಾರ್ಡ್
ಎಂಪಿಗಳು, ಎಂಎಲ್ಎಗಳು ಮತ್ತು ಎಂಎಲ್ಸಿಗಳಿಗೆ ಅಧಿಕೃತ ಗುರುತಿನ ಚೀಟಿ

ಅನಿವಾಸಿ ಭಾರತೀಯರ ಏನು ತರಬೇಕು?
ಅನಿವಾಸಿ ಭಾರತೀಯರನ್ನು ಅವರ ಮೂಲ ಪಾಸ್‌ಪೋರ್ಟ್‌ನ ಆಧಾರದ ಮೇಲೆ ಮಾತ್ರ ಮತದಾನ ಕೇಂದ್ರದಲ್ಲಿ ಗುರುತಿಸಲಾಗುತ್ತದೆ ಮತ್ತು ಯಾವುದೇ ಇತರ ಗುರುತಿನ ದಾಖಲೆಗಳಿಲ್ಲ.
ಭಾರತದಲ್ಲಿ ಒಟ್ಟು ಏಳು ಹಂತದಲ್ಲಿ ಮತದಾನಗಳು ನಡೆಯಲಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. ಮತದಾನದ ಫಲಿತಾಂಶ ಜೂನ್ 4 ರಂದು ಹೊರ ಬೀಳಲಿದೆ.












Click it and Unblock the Notifications