KSRTC: ರಿಯಲ್ ಟೈಂನಲ್ಲಿ ಸಿಗಲಿದೆ ಎಲ್ಲಾ ಕೆಎಸ್ಆರ್‌ಟಿಸಿ ಬಸ್ ಮಾಹಿತಿ

ಬೆಂಗಳೂರು, ಫೆಬ್ರವರಿ 03: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗುತ್ತಿದೆ. ರಿಯಲ್ ಟೈಂನಲ್ಲಿ ಬಸ್‌ ಯಾವ ಮಾರ್ಗದಲ್ಲಿ ಹೋಗುತ್ತಿದೆ?, ಎಷ್ಟು ವೇಗದಲ್ಲಿದೆ?, ಎಲ್ಲಿ, ಎಷ್ಟು ಸಮಯ ನಿಲ್ಲಿಸಲಾಗಿದೆ?, ಎಷ್ಟು ಹೊತ್ತಿಗೆ ಬಂದು ತಲುಪಲಿದೆ? ಎಂಬ ಮಾಹಿತಿ ಲಭ್ಯವಾಗಲಿದೆ. ಇಂತಹ ವ್ಯವಸ್ಥೆ ಜಾರಿಗೊಳಿಸಲು ಟೆಂಡರ್ ಕರೆಯಲಾಗಿದೆ.

ಕೆಎಸ್ಆರ್‌ಟಿಸಿ ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ (ವಿಟಿಎಂಎಸ್) ಅಳವಡಿಕೆ ಮಾಡಿಕೊಳ್ಳಲಿದೆ. ಇದರಿಂದಾಗಿ 8,300 ಬಸ್‌ಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಲಭ್ಯವಾಗಲಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ, ಸಮಯವೂ ಉಳಿತಾಯವಾಗಲಿದೆ.

All KSRTC Buses Will Be Tracked Real Time Soon

ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಪ್ರತಿನಿತ್ಯ 85,000 ಟ್ರಿಪ್ ಸಂಚಾರ ನಡೆಸುವ ಬಸ್‌ಗಳ ಮಾಹಿತಿಯನ್ನು ರಿಯಲ್ ಟೈಂನಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೂನ್‌ 2025ರ ವೇಳೆಗೆ ಈ ಯೋಜನೆ ಸಂಪೂರ್ಣವಾಗಿ ಜನರ ಕೈಗೆ ಸಿಗಲಿದೆ. ಇದರಿಂದಾಗಿ ಬಸ್‌ಗಾಗಿ ಕಾಯುವ ಸಮಯ ಉಳಿಯಲಿದೆ.

30 ಕೋಟಿ ರೂ. ಯೋಜನೆ: ಈಗಿರುವ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ವಾಪಸ್ ಪಡೆದು, ವಿಟಿಎಂಎಸ್ ಅಳವಡಿಕೆ ಮಾಡಿಕೊಳ್ಳಲು ಕೆಎಸ್ಆರ್‌ಟಿಸಿ ಬಯಸಿದೆ. ಇದು ಸುಮಾರು 30 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ 60 ಮತ್ತು ಕೇಂದ್ರ ಸರ್ಕಾರ ಶೇ 40ರಷ್ಟು ಅನುದಾನ ನೀಡಲಿದೆ.

ರಿಯಲ್ ಟೈಂ ಬಸ್‌ಗಳ ಮಾಹಿತಿ ಪಡೆಯಲು ಅಪ್ಲಿಕೇಶನ್ ರೂಪಿಸಲು ಕೆಎಸ್ಆರ್‌ಟಿಸಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ರಿಯಲ್ ಟೈಂ ಟ್ರಾಕ್ ಅಪ್ಲಿಕೇಶನ್ ಅಧ್ಯಯನ ನಡೆಸಿದೆ. ಈ ಅಪ್ಲಿಕೇಶನ್‌ನಲ್ಲಿ ಆಪಘಾತ ನಿರ್ವಹಣೆಯ ಮಾಹಿತಿಯನ್ನು ಸೇರಿಸಿಕೊಳ್ಳಲು ಬಯಸಿದೆ.

ಬಸ್‌ ಯಾವ ಮಾರ್ಗದಲ್ಲಿ ಹೋಗುತ್ತಿದೆ?, ಎಷ್ಟು ವೇಗದಲ್ಲಿದೆ? ಮುಂತಾದ ಮಾಹಿತಿ ರಿಯಲ್ ಟೈಂನಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ರಸ್ತೆ ಅಪಘಾತಗಳು ಕಡಿಮೆಯಾಗಲಿದ್ದು, ನಿಗಮಕ್ಕೆ ಆರ್ಥಿಕ ವೆಚ್ಚವೂ ತಗ್ಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲಾ ಬಸ್‌ಗಳಿಗೆ ವೆಹಿಕಲ್ ಲೊಕೇಶನ್ ಟ್ರಾಕಿಂಗ್ ಡಿವೈಸ್ ಅಳವಡಿಕೆ ಮಾಡಲಾಗುತ್ತದೆ ಮತ್ತು ಬಸ್‌ನಲ್ಲಿ ತುರ್ತು ಸಂದರ್ಭದಲ್ಲಿ ಮಾಹಿತಿ ನೀಡುವ ಪ್ಯಾನಿಕ್ ಬಟನ್ ಸಹ ಇರಲಿದೆ. ಈಗಾಗಲೇ 1286 ಸಾಮಾನ್ಯ ಬಸ್, 50 ಎಲೆಕ್ಟ್ರಿಕ್‌ ಬಸ್‌ಗಳನ್ನು ಈ ತಂತ್ರಜ್ಞಾನದ ಅಡಿ ತರುವ ಪ್ರಕ್ರಿಯೆ ಆರಂಭವಾಗಿದೆ.

ಬಸ್‌ಗಳ ನಿರ್ವಹಣೆಗಾಗಿಯೇ ಕಮಾಂಡ್ ಕಂ ಕಂಟ್ರೋಲ್ ಸೆಂಟರ್‌ ಕಾರ್ಯ ನಿರ್ವಹಣೆ ಮಾಡಲಿದೆ. ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಸಾರ್ವಜನಿಕ ವಾಹನಗಳ ರಿಯಲ್ ಟೈಂ ನಿರ್ವಹಣೆ ಆಗಬೇಕು ಎಂದು ಸೂಚನೆ ನೀಡಿದೆ.

ಕೆಎಸ್ಆರ್‌ಟಿಸಿ ಕೆಲವು ವರ್ಷಗಳ ಹಿಂದೆ ಮೈಸೂರು ನಗರದ ನಗರ ಸಾರಿಗೆ ಮತ್ತು ಇತರ ಬಸ್ ಸೇರಿ 2 ಸಾವಿರ ಬಸ್‌ಗಳನ್ನು ಇಂಟಲಿಜನ್ಸ್ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್ ವ್ಯವಸ್ಥೆಗೆ ಅಳವಡಿಸಿದೆ. ಇದರಿಂದಾಗಿ ಇಂಧನ, ಉಳಿತಾಯ, ಸುರಕ್ಷತೆಗೆ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈಗ ಹೊಸ ವ್ಯವಸ್ಥೆಯಲ್ಲಿ ಎಲ್ಲಾ ಬಸ್‌ಗಳನ್ನು ರಿಯಲ್ ಟೈಂ ಟ್ರಾಕಿಂಗ್ ವ್ಯವಸ್ಥೆಗೆ ತರಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+