ಎಲ್ಲಾ ಎಕ್ಸಿಟ್ ಪೋಲ್ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ್ದು: ಡಾ. ಪರಮೇಶ್ವರ್

ಬೆಂಗಳೂರು, ಮೇ 20: ಅದು ಎಕ್ಸಿಟ್ ಪೋಲ್, exact ಪೋಲ್ ಅಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ ನಂತರ, ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ದೆಹಲಿಯಲ್ಲಿ ಕೂತು ವಿಸ್ಕೃತವಾಗಿ ಚರ್ಚೆ ನಡೆಸಿದ್ದೇವೆ, ಮುನ್ನೂರು ಸೀಟು ಬಿಜೆಪಿಗೆ ಬರುತ್ತೆ ಎನ್ನುವ ಸಮೀಕ್ಷಾ ವರದಿಯನ್ನು ಇಟ್ಟುಕೊಂಡು ಇನ್ನೊಂದು ಮೂರು ದಿನ ಬಿಜೆಪಿಯವರು ಖುಷಿಯಾಗಿರಲಿ ಬಿಡಿ ಎಂದು ಪರಮೇಶ್ವರ್ ಹೇಳಿದ್ದಾರೆ.

ಎಲ್ಲಾ ಸಮೀಕ್ಷೆಗಳನ್ನು ನೋಡಿದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿ ಮಾಡಿಸಿದ ಹಾಗಿದೆ ಎಂದು ಲೇವಡಿ ಮಾಡಿರುವ ಪರಮೇಶ್ವರ್, ರಾಜ್ಯದಲ್ಲಿ ಬಿಜೆಪಿ ಹದಿನೆಂಟು ಸೀಟು ಬರುತ್ತದೆ ಎಂದರೆ ಅದಕ್ಕೊಂದು ಅರ್ಥಬೇಡವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

All exit polls pre-penned, as per the direction of Amit Shah: G Parameshwara

ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಯುಪಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಾವು ಕರ್ನಾಟಕದಲ್ಲಿ ಕನಿಷ್ಠ ಇಪ್ಪತ್ತು ಸೀಟನ್ನು ಗೆಲ್ಲಲಿದ್ದೇವೆ ಎಂದು ಪರಮೇಶ್ವರ್ ವಿಶ್ವಾಸದ ಮಾತನ್ನಾಡಿದ್ದಾರೆ.

ಚುನಾವಣಾ ಫಲಿತಾಂಶ ಏನೇ ಇರಲಿ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿರಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಎಕ್ಸಿಟ್ ಪೋಲ್ ಮೂಲಕ ಒಂದು ಪಕ್ಷ, ಒಬ್ಬ ವ್ಯಕ್ತಿ ಬಗ್ಗೆ ತಪ್ಪು ಗ್ರಹಿಕೆಯನ್ನು ಹುಟ್ಟು ಹಾಕಲಾಗುತ್ತಿದೆ. ಇದು ಎಕ್ಸಿಟ್ ಪೋಲ್ exact ಪೋಲ್ ಅಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+