Alcohol Price Reduction- ಮದ್ಯ ಪ್ರಿಯರಿಗೆ ನಶೆ ಹೆಚ್ಚಿಸಿದ ಸರ್ಕಾರ: ಇಂದಿನಿಂದ ಮದ್ಯದ ದರ ಇಳಿಕೆ!
ಬೆಂಗಳೂರು ಆಗಸ್ಟ್ 27: ಮದ್ಯ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿಯನ್ನು ಕೊಟ್ಟಿದೆ. ಇಂದಿನಿಂದ ಮದ್ಯದ ದರದಲ್ಲಿ ಕೊಂಚ ಇಳಿಕೆಯಾಗಲಿದ್ದು, ಎಂದಿಗಿಂತ ಕೊಂಚ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯವಾಗಲಿದೆ. ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗಿದ್ದು ಶೇ. 15-25ರಷ್ಟು ಮದ್ಯದ ಬೆಲೆ ಕಡಿಮೆಯಾಗಲಿದೆ.
ರಾಜ್ಯ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಎಂದು ಈಗಾಗಲೇ ಆದೇಶ ಹೊರಡಿಸಿತ್ತು. ಮಧ್ಯದ ದರ ಇಳಿಕೆಯ ಜೊತೆಗೆ, ಅಬಕಾರಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಸೂಚನೆ ಹೊರಡಿಸಲಾಗಿದೆ. ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಗೆ ತರಲಾಗಿದೆ. ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಸರ್ಕಾರ ಪರಿಷ್ಕರಿಸಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಶ್ರೀಮಂತರು ಕುಡಿಯುವ ಬ್ರಾಂದಿ, ವಿಸ್ಕಿ, ಜಿನ್, ರಮ್ ಬ್ರ್ಯಾಂಡ್‌ಗಳ ದರ ಹೆಚ್ಚಾಗಿತ್ತು. ಇದರಿಂದಾಗಿ ಗಡಿ ಭಾಗದ ಮದ್ಯಪ್ರಿಯರು ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿಸುತ್ತಿದ್ದರು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ನಷ್ಟ ಆಗುತ್ತಿತ್ತು. ಆದರೆ ಇದರೀಗ ಅಬಕಾರಿ ಇಲಾಖೆ ಇಂದಿನಿಂದ ಮದ್ಯದ ದರ ಇಳಿಕೆ ಮಾಡಿದೆ.
ಜುಲೈ ಒಂದರಿಂದಲೇ ಮದ್ಯದ ದರ ಇಳಿಕೆಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಕಾರಣಾಂತರಗಳಿಂದಾಗಿ ಮದ್ಯದ ಬೆಲೆ ಇಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ ಅನಿಮತಿ ಮೇರೆಗೆ ಅಬಕಾರಿ ಇಲಾಖೆ ದರ ಇಳಿಕೆ ಮಾಡಿದೆ.

ಮದ್ಯದ ದರ ಪರಿಷ್ಕರಣೆ
551-650 ಘೋಷಿತ ಉತ್ಪಾದನಾ ದರ ಸ್ಲ್ಯಾಬ್‌ಗೆ ಸುಂಕ 523 ರೂ ಪರಿಷ್ಕರಣೆ
651-750 ವರೆಗಿನ ಘೋಷಿತ ಉತ್ಪಾದನಾ ದರ ಸ್ಲ್ಯಾಬ್‌ಗೆ ಹೆಚ್ಚುವರಿ ಸುಂಕ 620ರೂ ಇಳಿಕೆ
451-500 ದರ ಸ್ಲ್ಯಾಬ್‌ಗೆ ಸುಂಕ 294 ರೂ. ಪರಿಷ್ಕರಣೆ ಆಗಲಿದೆ
501-550 ದರ ಸ್ಲ್ಯಾಬ್‌ಗೆ ಹೆಚ್ಚುವರಿ ಸುಂಕ 386ರೂ. ಪರಿಷ್ಕರಣೆ
901-1050 ದರ ಸ್ಲ್ಯಾಬ್‌ಗೆ ಸುಂಕ 870 ರೂ. ಪರಿಷ್ಕರಣೆ
1051-1300 ದರ ಸ್ಲ್ಯಾಬ್‌ಗೆ ಸುಂಕ 970 ರೂ. ಪರಿಷ್ಕರಣೆ
1301-1800 ದರ ಸ್ಲ್ಯಾಬ್‌ಗೆ ಸುಂಕ 1200 ರೂ. ಪರಿಷ್ಕರಣೆ
1801-2500 ದರ ಸ್ಲ್ಯಾಬ್‌ಗೆ ಸುಂಕ 1400 ರೂ. ಪರಿಷ್ಕರಣೆ
2501-5000 ದರ ಸ್ಲ್ಯಾಬ್‌ಗೆ ಸುಂಕ 1600 ರೂ. ಇಳಿಕೆ
751-900 ದರ ಸ್ಲ್ಯಾಬ್‌ಗೆ ಸುಂಕ 770 ರೂ. ಪರಿಷ್ಕರಣೆ
5001-8000 ದರ ಸ್ಲ್ಯಾಬ್‌ಗೆ ಸುಂಕ 2000 ರೂ. ಇಳಿಕೆ
8001-12,500 ದರ ಸ್ಲ್ಯಾಬ್‌ಗೆ ಸುಂಕ 2400 ರೂ. ಇಳಿಕೆ
12501-15000 ದರ ಸ್ಲ್ಯಾಬ್‌ಗೆ ಸುಂಕ 2600 ರೂ. ಇಳಿಕೆ
15001-20000 ದರ ಸ್ಲ್ಯಾಬ್‌ಗೆ ಸುಂಕ 2800ರೂ. ಸುಂಕ ಇಳಿಕೆ
20000 ಮೇಲ್ಪಟ್ಟ ದರ ಸ್ಲ್ಯಾಬ್‌ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ
ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್‌ಗಳ ಸಂಖ್ಯೆ 18 ರಿಂದ 16ಕ್ಕೆ ಇಳಿಸಲಾಗಿದೆ. ಆದರೆ ಮೊದಲ ಮೂರು ಸ್ಲ್ಯಾಬ್ಗಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್‌ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲ್ಯಾಬ್ ಬಳಿಕ 16ನೇ ಸ್ಲ್ಯಾಬ್‌ವರೆಗೆ ದರ ಕಡಿಮೆಯಾಗಲಿದೆ.
ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂಪಾಯಿ ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ 20000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ಗೆ ಸೇರಿದಲಾಗಿದೆ.












Click it and Unblock the Notifications