ಡಿಸೆಂಬರ್ 1ರಿಂದ 31ರವರೆಗೆ ಆಗುಂಬೆ ಘಾಟಿ ರಸ್ತೆ ಸಂಚಾರ ಬಂದ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30: ಮಲೆನಾಡು ಹಾಗೂ ಕರಾವಳಿ ಕರ್ನಾಟಕದ ಮಧ್ಯೆ ಸಂಪರ್ಕಕ್ಕೆ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಲಿದ್ದು, ಡಿಸೆಂಬರ್ 1ರಿಂದ 31ರವರೆಗೆ ಮುಚ್ಚಲಾಗುವುದು. ಆದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿರುವುದಿಲ್ಲ.

2.40 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಹದಿನಾಲ್ಕು ಕಡಿದಾದ ತಿರುವುಗಳಿರುವ ಈ ರಸ್ತೆಯ ಏಳು ತಿರುವುಗಳಲ್ಲಿ ತಡೆಗೋಡೆಗಳು ಹಾಳಾಗಿವೆ. ಆದ್ದರಿಂದ ಗುಂಡಿಗಳನ್ನು ತುಂಬುವುದು, ಕಾಂಕ್ರೀಟ್ ಹಾಕುವ ಆಲೋಚನೆಯಿದ್ದು, ಇದಕ್ಕಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']

Agumbe Ghat section closed from 1st December

ಈ ಯೋಜನೆಗೆ 3.50 ಕೋಟಿ ರುಪಾಯಿ ವೆಚ್ಚವಾಗುವ ಅಂದಾಜಿದೆ. ದುರಸ್ತಿ ಕಾರ್ಯದ ನಿಮಿತ್ತ ರಸ್ತೆ ಬಂದ್ ಅಗುವುದರಿಂದ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೂಡಬಿದಿರೆ, ಕಾರ್ಕಳ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ; ಕುಂದಾಪುರ-ಮಾಸ್ತಿಕಟ್ಟೆ-ಶಿವಮೊಗ್ಗ ಸಿದ್ದಾಪುರ, ಎಡೂರು ಮತ್ತು ತೀರ್ಥಹಳ್ಳಿ;

ಮತ್ತು ಕುಂದಾಪುರ-ಸಿದ್ದಾಪುರ-ಶಿವಮೊಗ್ಗ ರಸ್ತೆಯಲ್ಲಿ ಮಾಸ್ತಿಕಟ್ಟೆ, ರೇವ್ ಕ್ರಾಸ್, ಕೊಂಡ್ಲೂರು ಮತ್ತು ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದಾಗಿದೆ. ಈ ಮಧ್ಯೆ ಆಗುಂಬೆ, ಗುಡ್ಡೇಕೇರಿ, ಹೊಸೂರು, ಕವರಿಹಕ್ಳು, ಮೇಗರವಳ್ಳಿ ಮತ್ತು ನಾಲೂರು ನಿವಾಸಿಗಳು ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಆಗ್ರಹಿಸಿದ್ದಾರೆ.[ಉಡುಪಿ: ಸೋಮೇಶ್ವರ ಹೋಟೆಲಿನ 'ಭಕ್ತ' ಇನ್ನಿಲ್ಲ]

ತೀರ್ಥಹಳ್ಳಿಯಿಂದ ಉಡುಪಿ, ಮಂಗಳೂರಿಗೆ ಅಗುಂಬೆ ಮಾರ್ಗವಾಗಿ ಬಸ್ ಗಳು ಸಂಚರಿಸುತ್ತಿದ್ದವು. ಇದೀಗ ಆ ಬಸ್ ಗಳ ಸಂಚಾರ ನಿಲ್ಲುವುದರಿಂದ ಆ ಮಾರ್ಗದ ಹಳ್ಳಿಗಳಲ್ಲಿ ವಾಸಿಸುವರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಈ ಮಾರ್ಗದಲ್ಲಿರುವ ನೂರಾರು ವಿದ್ಯಾರ್ಥಿಗಳು ತೀರ್ಥಹಳ್ಳಿಗೆ ಬರುತ್ತಾರೆ. ಈಗ ಆಗುಂಬೆ ಘಾಟಿ ರಸ್ತೆ ಸಂಚಾರಕ್ಕೆ ಬಂದ್ ಆಗುವುದರಿಂದ ಅವರಿಗೆಲ್ಲ ತೊಂದರೆಯಾಗುತ್ತದೆ.

ಆಗುಂಬೆ ಘಾಟಿ ಕೆಲಸ ಪೂರ್ತಿ ಆಗುವವರೆಗೆ ತೀರ್ಥಹಳ್ಳಿಯಿಂದ ಆಗುಂಬೆವರೆಗೆ ಮೇಗರವಳ್ಳಿ ಮೂಲಕ ಕರ್ನಾಟಕ ರಾಜ್ಯ ರಸ್ತೆ ನಿಗಮದ ಬಸ್ ಗಳು ಸಂಚರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Agumbe Ghat section closed for vehicular movement from 1st December due to road repair works on hair pin curves. Take a detour. The road maintenance work may take 4 weeks says Karnataka Public Works Department.
Please Wait while comments are loading...