ADR Report: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಕ್ಷರಸ್ಥ-ಅನಕ್ಷರಸ್ಥ ಅಭ್ಯರ್ಥಿಗಳು; ಇಲ್ಲಿದೆ ಶೈಕ್ಷಣಿಕ ಮಾಹಿತಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ನಿರತರಗಿದ್ದಾರೆ. ಕೊನೆಯ ಕ್ಷಣದಲ್ಲಿ ಮತದಾರರ ಮನಗೆಲ್ಲಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ಬಹಿರಂಗ ಪ್ರಚಾರಕ್ಕೆ ಮೂರೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ರಾಜ್ಯ ನಾಯಕರೊಂದಿಗೆ ರಾಷ್ಟ್ರೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ಸಭೆ, ರೋಡ್ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.
ಇದೇ ವೇಳೆ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ವಿಶ್ಲೇಷಣೆ ಮತ್ತು ಅಭ್ಯರ್ಥಿಗಳ ಇತರ ವಿವರಗಳ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ 2023ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಶೈಕ್ಷಣಿಕ ಮಾಹಿತಿ ಇಲ್ಲಿದೆ. (Source: ADR Press Release dated 3rd May, 2023)
ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಭ್ಯರ್ಥಿಗಳ ಒಟ್ಟಾರೆ ಶೈಕ್ಷಣಿಕ ವರದಿ
| ಶೈಕ್ಷಣಿಕ ಗುಂಪು | ಅಭ್ಯರ್ಥಿಗಳು |
| ಅನಕ್ಷರಸ್ಥ | 37 ಅಭ್ಯರ್ಥಿಗಳು |
| ಅಕ್ಷರಸ್ಥ | 47 ಅಭ್ಯರ್ಥಿಗಳು |
| 5ನೇ ತರಗತಿ ಪಾಸ್ | 142 ಅಭ್ಯರ್ಥಿಗಳು |
| 8ನೇ ತರಗತಿ ಪಾಸ್ | 146 ಅಭ್ಯರ್ಥಿಗಳು |
| 10ನೇ ತರಗತಿ ಪಾಸ್ | 10ನೇ ತರಗತಿ ಪಾಸ್ |
| 12ನೇ ತರಗತಿ ಪಾಸ್ | 427 ಅಭ್ಯರ್ಥಿಗಳು |
| ಪದವೀಧರರು | 441 ಅಭ್ಯರ್ಥಿಗಳು |
| ಪದವೀಧರ ವೃತ್ತಿಪರರು | 341 ಅಭ್ಯರ್ಥಿಗಳು |
| ಸ್ನಾತಕೋತ್ತರ ಪದವೀಧರರು | 304 ಅಭ್ಯರ್ಥಿಗಳು |
| ಡಾಕ್ಟರೇಟ್ ಪಡೆದರವರು | 22 ಅಭ್ಯರ್ಥಿಗಳು |
| ಡಿಪ್ಲೋಮಾ | 150 ಅಭ್ಯರ್ಥಿಗಳು |
| ಶೈಕ್ಷಣಿಕ ಮಾಹಿತಿ ನೀಡದವರು | 1 ಅಭ್ಯರ್ಥಿ |

ಕರ್ನಾಟಕ ವಿಧಾನಸಭೆ ಚುನಾವಣೆ 2018: ಅಭ್ಯರ್ಥಿಗಳ ಒಟ್ಟಾರೆ ಶೈಕ್ಷಣಿಕ ವರದಿ
| ಶೈಕ್ಷಣಿಕ ಗುಂಪು | ಅಭ್ಯರ್ಥಿಗಳು |
| ಅನಕ್ಷರಸ್ಥ | 50 ಅಭ್ಯರ್ಥಿಗಳು |
| ಅಕ್ಷರಸ್ಥ | 52 ಅಭ್ಯರ್ಥಿಗಳು |
| 8ನೇ ತರಗತಿ ಪಾಸ್ | 180 ಅಭ್ಯರ್ಥಿಗಳು |
| 10ನೇ ತರಗತಿ ಪಾಸ್ | 580 ಅಭ್ಯರ್ಥಿಗಳು |
| 12ನೇ ತರಗತಿ ಪಾಸ್ | 400 ಅಭ್ಯರ್ಥಿಗಳು |
| ಪದವೀಧರರು | 410 ಅಭ್ಯರ್ಥಿಗಳು |
| ಪದವೀಧರ ವೃತ್ತಿಪರರು | 309 ಅಭ್ಯರ್ಥಿಗಳು |
| ಸ್ನಾತಕೋತ್ತರ ಪದವೀಧರರು | 239 ಅಭ್ಯರ್ಥಿಗಳು |
| ಡಾಕ್ಟರೇಟ್ ಪಡೆದರವರು | 23 ಅಭ್ಯರ್ಥಿಗಳು |
| ಡಿಪ್ಲೋಮಾ | 115 ಅಭ್ಯರ್ಥಿಗಳು |
| ಶೈಕ್ಷಣಿಕ ಮಾಹಿತಿ ನೀಡದವರು | 11 ಅಭ್ಯರ್ಥಿಗಳು |












Click it and Unblock the Notifications