ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಸಂಕ್ರಾಂತಿ ಉಡುಗೊರೆ

ಬೆಂಗಳೂರು, ಜನವರಿ 15: ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಂಕ್ರಾಂತಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. 80 ವರ್ಷ ದಾಟಿದ ಹಿರಿಯ ಮಾಜಿ ರಾಜ್ಯ ಸರ್ಕಾರಿ ನೌಕರರಿಗೆ ಹೆಚ್ಚುವರಿ ಪಿಂಚಣಿಗೆ ಆದೇಶ ನೀಡಲಾಗಿದೆ.

ರಾಜ್ಯ ಸರ್ಕಾರ ನೌಕರಿ ಮಾಡಿ ನಿವೃತ್ತಿ ಆಗಿ ಈಗ 80ಕ್ಕೂ ಹೆಚ್ಚು ವಯಸ್ಸಾಗಿರುವ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ನೀಡಲು ಆದೇಶ ನೀಡಲಾಗಿದ್ದು, ಈ ಆದೇಶವು ಜನವರಿ 1 ರಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

80ಕ್ಕಿಂತ ಹೆಚ್ಚು85ರ ವಯಸ್ಸಿನ ಒಳಗಿರುವ ಪಿಂಚಣಿದಾರರು ಮೂಲವೇತನಕ್ಕಿಂತ 20% ಹೆಚ್ಚಿನ ಪಿಂಚಣಿಯನ್ನು ಜನವರಿ 1 ರಿಂದ ಪಡೆಯಲಿದ್ದಾರೆ. 85 ಕ್ಕಿಂತ ಮೇಲ್ಪಟ್ಟು 90 ವರ್ಷದ ಒಳಗಿನ ಪಿಂಚಣಿದಾರರು 30% ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ. 90-95 ವಯಸ್ಸಿನ ಪಿಂಚಣಿದಾರರು 40% ಹೆಚ್ಚು ಪಿಂಚಣಿ ಪಡೆದರೆ, 95-100 ವಯಸ್ಸಿನ ಪಿಂಚಣಿದಾರರು 50% ಹೆಚ್ಚುವರಿ ಪಿಂಚಣಿ ಪಡೆಯಲಿದ್ದಾರೆ.

additional pension was ordered for senior state government employees over 80 years

ರಾಜ್ಯ ಸರ್ಕಾರವು ಈ ಆದೇಶ ಹೊರಡಿಸಿದ್ದು, ಪಿಂಚಣಿದಾರರಿಗೆ ಹೆಚ್ಚಿನ ಲಾಭ ಇದರಿಂದ ಆಗಲಿದೆ. ವಯಸ್ಸಾದವರ ಆರೋಗ್ಯ ಮತ್ತು ಅವರ ಸೌಕರ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+