ಹಾಸನ ಪೆನ್‌ಡ್ರೈವ್ ಪ್ರಕರಣ: ಪ್ರಜ್ವಲ್ ರೇವಣ್ಣ​ ವಿರುದ್ಧ ನಟಿ ಪೂನಂ ಕೌರ್ ಕಿಡಿ

ಬೆಂಗಳೂರು, ಏಪ್ರಿಲ್‌ 30: ಕನ್ನಡದ ಬಂಧು ಬಳಗ ಸಿನಿಮಾ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಪೂನಂ ಕೌರ್ ದೇಶದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದು, ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹೆಣ್ಣಿಗೆ ಎಲ್ಲಿದೆ ರಕ್ಷಣೆ ಎನ್ನುವ ಪ್ರಶ್ನೆ ಎದ್ದಿದೆ ಎಂದು ಕಿಡಿಕಾರಿದ್ದಾರೆ.

ಈ ವೇಳೆ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ​ ವಿರುದ್ಧ ಕೂಡ ನಟಿ ಪೂನಂ ಕೌರ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ರಾಜಕೀಯ ಗಣ್ಯರಿಂದ ಆಗುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡಿದ ನಟಿ, ಸಚಿವರ ಮಗ ಹುಡುಗಿಯ ಫೋನ್ ಕದ್ದಾಲಿಕೆ ಮಾಡಿದ್ದಾನೆ. ಮತ್ತೊಬ್ಬ ಸಚಿವರ ಮಗ ಅಂಕಿತಾ ಎಂಬ ಹುಡುಗಿಯನ್ನು ಬೆಟ್ಟದಿಂದ ತಳ್ಳಿದ. ಮತ್ತೊಬ್ಬ ಹುಡುಗಿಗೆ ಸಚಿವರ ಮಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಮತ್ತೊಬ್ಬ ಸಚಿವ ಬಾಲಕಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ ಪರಾರಿಯಾಗಿದ್ದಾನೆ.

Actress Poonam Kaur Reaction about Hassan Obscene Viral Video Case

ಇದೀಗ ಮಾಜಿ ಸಚಿವರ ಮಗನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಿದೆ. ಆತ 2,800ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರೆಲ್ಲರ ವಿಡಿಯೋ ಮಾಡಿರುವ ಬಗ್ಗೆ ಸಾವಿರಾರು ವಿಡಿಯೋಗಳು ಹರಿದಾಡುತ್ತಿವೆ. ಆತ ಹಣ ಮತ್ತು ಅಧಿಕಾರದಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಜರ್ಮನಿಯಲ್ಲಿ ಹೋಗಿ ಕುಳಿತ್ತಿದ್ದಾನೆ ಎಂದು ಪ್ರಜ್ವಲ್ ರೇವಣ್ಣ​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಮಹಿಳೆಗೆ, ಪ್ರತಿ ಹೆಣ್ಣು ಮಗುವಿಗೆ, ಪ್ರತಿ ಸಹೋದರನಿಗೆ ನಾನು ಎರಡು ಕೈಗಳನ್ನು ಮುಗಿದು ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಯ ಮಗಳು ಮತ್ತು ಸಹೋದರಿಗೆ ನ್ಯಾಯ ಸಿಗಬೇಕಾದರೆ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ. ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ಮತ ನೀಡಬೇಕು. ಹೆಣ್ಣನ್ನು ಹೆಣ್ಣೆಂದು ಪರಿಗಣಿಸುವ ವ್ಯಕ್ತಿಗೆ ಮತ ಹಾಕಬೇಕು. ಇಂಥವರು ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಜನ ತಿರುಗಿ ಬೀಳುವವರಿಗೂ ಇಂತವರನ್ನು ಶಿಕ್ಷಿಸಲು ಸಾಧ್ಯವೇ ಇಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಮತ ಹಾಕಬೇಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+