ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶಿವರಾಜ್ಕುಮಾರ್- ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಚಂದನವನದ ದೊಡ್ಮನೆ ಮಗ ಶಿವರಾಜ್ಕುಮಾರ್ ಅವರು ಇಂದು 61ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಕಳೆದ ರಾತ್ರಿಯಿಂದಲೇ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು ಕೇಕ್ ಕತ್ತರಿಸಿ ನೆಚ್ಚಿನ ನಟ ಶಿವಣ್ಣನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಜುಲೈ 11ರ ಮಧ್ಯರಾತ್ರಿಯೇ ಶುಭಕೋರಲು ಅಭಿಮಾನಿಗಳು ಶಿವರಾಜ್ಕುಮಾರ್ ಅವರ ಮನೆ ಮುಂದೆ ನೆರೆದಿರುವುದು ಕಂಡು ಬಂದಿದೆ. ಪಾಟಕಿ ಸಿಡಿಸಿ, ಸಿಹಿ ತಿನಿಸುಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮ ಮುಗುಲುಮುಟ್ಟಿದೆ.

ಶಿವರಾಜ್ಕುಮಾರ್ ಅಭಿನಯದ ಹೊಸ ಸಿನಮಾದ ಪೋಸ್ಟರ್ಗಳನ್ನು ಹಿಡಿದು ಸಂಭ್ರಮಿಸಿದ್ದಾರೆ. ಜೊತೆಗೆ ಇಂದು ಅವರ ನಟನೆಯ ಸಿನಿಮಾ ತಂಡದಿಂದ ಪೋಸ್ಟರ್ ಟೀಸರ್ ರಿಲೀಸ್ ಮಾಡಲು ಸಿದ್ದತೆಗಳು ನಡೆದಿವೆ. ಇಂದು ಬೆಳಿಗ್ಗೆ 11.45ಕ್ಕೆ 'ಘೋಷ್ಟ್'ಸಿನಿಮಾ ತಂಡದಿಂದ 'ಬಿಗ್ ಡ್ಯಾಡಿ' ವಿಡಿಯೋ ರಿಲೀಸ್ ಆಗಲಿದೆ. ಈ ವಿಡಿಯೋ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮಾತ್ರವಲ್ಲದೆ ಶಿವಣ್ಣ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಸಿಗುವ ಸಾಧ್ಯತೆ ಕೂಡ ಇದೆ.
Birthday celebration started @NimmaShivanna house 🏡#Ghost#GhostTeaser #BigDaddy #HappyBirthdayShivanna ❤️ pic.twitter.com/CCCprCcnPA
— Prasanna v.m (@nimmaprasanna)ಇನ್ನೂ ನಗರದ ಸಂತೋಷ್ ಚಿತ್ರಮಂದಿರದಲ್ಲಿ ಶಿವರಾಜ್ಕುಮಾರ್ ಅವರ 'ಘೋಸ್ಟ್' ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಲಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಅವರ ಹೆಸರಿನಲ್ಲಿ ರಕ್ತದಾನ, ಅನ್ನದಾನ ಕಾರ್ಯಕ್ರಮಗಳು ಇಂದು ರಾಜ್ಯದ ಹಲವೆಡೆ ನಡೆಯಲಿವೆ.
ಶಿವರಾಜ್ಕುಮಾರ್ ನಟನೆಯ ಸಿನಿಮಾಗಳು
ದೊಡ್ಮನೆ ಮಗ ನಟ ಶಿವರಾಜ್ಕುಮಾರ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 37 ವರ್ಷಗಳು ಕಳೆದಿವೆ. ಇಂದಿಗೂ ಅವರು ಬಹುಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ಮುಂದುರೆದಿದ್ದಾರೆ. ನೂರಾರು ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳು ಉರುಳಿದರೂ ಅವರ ಎನರ್ಜಿ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಹದಿಹರೆಯದ ಹುಡುಗರನ್ನೂ ನಾಚಿಸುವಂತೆ ಅವರು ಡ್ಯಾನ್ಸ್ ಮತ್ತು ಫೈಟಿಂಗ್ ಮಾಡುವ ಶಿವರಾಜ್ಕುಮಾರ್ ಅವರು ಚಂದನವನದಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ ಅಂದರೆ ಇದು ಸಣ್ಣ ವಿಚಾರವಲ್ಲ.
ಶಿವಣ್ಣ ನಟನೆಯ ಮೊದಲ ಸಿನಿಮಾ 'ಆನಂದ್'. ಆ ಚಿತ್ರ ಸೆಟ್ಟೇರಿದ್ದು 1986ರ ಫೆಬ್ರವರಿ 19ರಂದು. ಮೊದಲ ಬಾರಿ ಶಿವಣ್ಣ ಬಣ್ಣ ಹಚ್ಚಿದ್ದು ಈ ದಿನಾಂಕದಲ್ಲಿ. ಇಂದಿಗೆ 37 ವರ್ಷಗಳು ಪೂರ್ಣಗೊಂಡಿವೆ. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಈವರೆಗೂ 125 ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. 125ನೇ ಚಿತ್ರವಾಗಿ ತೆರೆಕಂಡ 'ವೇದ' ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಿದೆ.
ಈ ಸುದೀರ್ಘ ಪಯಣದಲ್ಲಿ ಶಿವಣ್ಣ ನೀಡಿದ ಸೂಪರ್ ಹಿಟ್ ಸಿನಿಮಾಗಳು ಒಂದೆರಡಲ್ಲ. 'ಆನಂದ್', 'ಓಂ', 'ಎಕೆ 47', 'ನಮ್ಮೂರ ಮಂದಾರ ಹೂವೇ', 'ಜನುಮದ ಜೋಡಿ', 'ಜೋಗಿ', 'ಟಗರು' ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಅವರು ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. 60ರ ಪ್ರಾಯದಲ್ಲೂ ಶಿವರಾಜ್ಕುಮಾರ್ ಸಖತ್ ಬ್ಯುಸಿ ಆಗಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Anupama Gowda: ನನ್ನ ಮದುವೆಗೆ ನನ್ನನ್ನೂ ಕರೆಯಿರಿ: ಎಂಗೇಜ್ಮೆಂಟ್ ಸುದ್ದಿ ಹಬ್ಬಿಸಿದವರಿಗೆ ನಿರೂಪಕಿ ಅನುಪಮಾ ಗೌಡ ಕ್ಲಾರಿಟಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ














Click it and Unblock the Notifications